ETV Bharat / bharat

ಒಂಬತ್ತು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿಸಿ 54 ರಾಕೆಟ್‌ ಯಶಸ್ವಿ ಉಡಾವಣೆ..

author img

By

Published : Nov 26, 2022, 1:14 PM IST

Updated : Nov 26, 2022, 4:45 PM IST

ಬೆಂಗಳೂರು ಮೂಲದ ಪಿಕ್ಸೆಲ್​ ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಖಾಸಗಿ ನಿರ್ಮಿತ ಭೂ ವೀಕ್ಷಣಾ ಉಪಗ್ರಹ ಆನಂದ್​ ಅನ್ನು ಈ ರಾಕೆಟ್​ ಹೊತ್ತೊಯ್ದಿದೆ.

Successful launch of PSLVC 54 rocket carrying nine satellites.
ಒಂಬತ್ತು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿಸಿ 54 ರಾಕೆಟ್‌ ಯಶಸ್ವಿ ಉಡಾವಣೆ

ಚೆನ್ನೈ: ಇಸ್ರೋ ವಿಜ್ಞಾನಿಗಳು ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಭೂ ವೀಕ್ಷಣಾ ಉಪಗ್ರಹ ಓಷನ್‌ಸ್ಯಾಟ್ ಮತ್ತು ಇತರ ಎಂಟು ಗ್ರಾಹಕ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 54 ರಾಕೆಟ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ವಿಶೇಷವೆಂದರೆ ಈ ರಾಕೆಟ್​ ಬೆಂಗಳೂರು ಮೂಲದ ಪಿಕ್ಸೆಲ್​ ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಖಾಸಗಿ ನಿರ್ಮಿತ ಭೂ ವೀಕ್ಷಣಾ ಉಪಗ್ರಹ 'ಆನಂದ್​' ಅನ್ನು ಕಕ್ಷೆಗೆ ಹೊತ್ತೊಯ್ದಿದೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ (ಪಿಎಸ್‌ಎಲ್‌ವಿ) 56ನೇ ರಾಕೆಟ್​ ಇದಾಗಿದ್ದು, ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಆವೃತ್ತಿಯ 24ನೇ ಉಡಾವಣೆಯೂ ಹೌದು. ಇಂದು ಬೆ. 11.56ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಕೇಂದ್ರದಿಂದ ಇದನ್ನು ಸನ್​ ಸಿಂಕ್ರೋನಸ್​ ಕಕ್ಷೆಗೆ ಉಡಾವಣೆ ಮಾಡಲಾಯಿತು.

ರಾಕೆಟ್‌ನ ಪ್ರಾಥಮಿಕ ಪೇಲೋಡ್ ಓಷನ್‌ಸ್ಯಾಟ್ ಅನ್ನು ಕಕ್ಷೆ-1 ರಲ್ಲಿ ಬೇರ್ಪಡಿಸಲಾಗುತ್ತದೆ. ಆದರೆ ಇತರ ಎಂಟು ನ್ಯಾನೊ-ಉಪಗ್ರಹಗಳನ್ನು ಗ್ರಾಹಕರ ಅಗತ್ಯತೆಗಳ ಆಧಾರದ ಮೇಲೆ ವಿವಿಧ ಕಕ್ಷೆಗಳಲ್ಲಿ ಇರಿಸಲಾಗುತ್ತದೆ. 321 ಟನ್​ಗಳಷ್ಟು ದ್ರವ್ಯರಾಶಿ ಎತ್ತುವ 44.4-ಮೀಟರ್ ಎತ್ತರದ PSLV-C54 ನಲ್ಲಿ ಪ್ರಾಥಮಿಕ ಪೇಲೋಡ್ ಸೇರಿದಂತೆ, ಒಂಬತ್ತು ಉಪಗ್ರಹಗಳನ್ನು ಕಳುಹಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಇಸ್ರೋ ವಿಜ್ಞಾನಿಗಳು ಕೈಗೊಂಡಿರುವ ಈ ಕಾರ್ಯಾಚರಣೆ ಇದುವರೆಗಿನ ದೀರ್ಘಾವಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದ್ದು, ಇಲ್ಲಿ ವಿಜ್ಞಾನಿಗಳು PSLV-C54 ಉಡಾವಣಾ ವಾಹನದಲ್ಲಿ ಎರಡು-ಕಕ್ಷೆಯ ಬದಲಾವಣೆಯ ಥ್ರಸ್ಟರ್‌ಗಳನ್ನು (ಒಸಿಟಿ) ಬಳಸಿಕೊಡಿದ್ದು, ಇದರ ಮೂಲಕ ರಾಕೆಟ್​ನ ಕಕ್ಷೆಯನ್ನು ಬದಲಾಯಿಸುತ್ತಾರೆ. ಭೂ ವೀಕ್ಷಣಾ ಉಪಗ್ರಹ ಕಕ್ಷೆ-1ರಲ್ಲಿ ಬೇರ್ಪಡಿಸಿ, ಉಳಿದ ಪ್ರಯಾಣಿಕ ಪೇಲೋಡ್‌ಗಳನ್ನು ಕಕ್ಷೆ-2ರಲ್ಲಿ ಬೇರ್ಪಡಿಸಲಾಗುವುದು ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಭೂ ವೀಕ್ಷಣಾ ಉಪಗ್ರಹವನ್ನು ಲಿಫ್ಟ್ ಆಫ್ ಆದ 20 ನಿಮಿಷಗಳ ನಂತರ ಸುಮಾರು 742 ಕಿ.ಮೀ ಎತ್ತರದಲ್ಲಿ ಇರಿಸಲಾಯಿತು. ಪ್ರಾಥಮಿಕ ಉಪಗ್ರಹ ಬೇರ್ಪಟ್ಟ ನಂತರ, ಮೊದಲ ಪ್ರಯಾಣಿಕ ಉಪಗ್ರಹವನ್ನು ಇರಿಸಲು 516 ಕಿಮೀ ಎತ್ತರವನ್ನು ತಲುಪಲು ವಾಹನವನ್ನು ಕೆಳಕ್ಕೆ ಇಳಿಸಲಾಯಿತು. ಸುಮಾರು 528 ಕಿಮೀ ಎತ್ತರದಲ್ಲಿ ಕೊನೆಯ ಪೇಲೋಡ್ ಅನ್ನು ಬೇರ್ಪಡಿಸಲಾಯಿತು. ಭೂಮಿಯ ವೀಕ್ಷಣಾ ಉಪಗ್ರಹ-6 ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹ. ಸಾಗರದ ಬಣ್ಣ ಮತ್ತು ಗಾಳಿ ವೆಕ್ಟರ್ ಡೇಟಾದ ನಿತಂತರ ಮಾಹಿತಿ ಪಡೆಯುವುದು ಈ ಕಾರ್ಯಾಚರನೆಯ ಪ್ರಮುಖ ಉದ್ದೇಶವಾಗಿದೆ ಎಂದು ಇಸ್ರೋ ಹೇಳಿದೆ.

ಗ್ರಾಹಕರ ಪೇಲೋಡ್‌ಗಳಲ್ಲಿ ಭೂತಾನ್‌ಗೆ NanoMx ಮತ್ತು APRS-ಡಿಜಿಪೀಟರ್ ಎಂಬ ಎರಡು ಪೇಲೋಡ್‌ಗಳನ್ನು ಹೊಂದಿರುವ (INS-2B) ISRO ನ್ಯಾನೊ ಉಪಗ್ರಹ-2 ಸೇರಿದೆ. NanoMx ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಕೇಂದ್ರದಿಂದ ಅಭಿವೃದ್ಧಿಪಡಿಸಲಾದ ಮಲ್ಟಿಸ್ಪೆಕ್ಟ್ರಲ್ ಆಪ್ಟಿಕಲ್ ಇಮೇಜಿಂಗ್ ಪೇಲೋಡ್ ಆಗಿದ್ದು, ಎಪಿಆರ್ಎಸ್-ಡಿಜಿಪೀಟರ್ ಪೇಲೋಡ್ ಅನ್ನು ಭೂತಾನ್​ನ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಟೆಲಿಕಾಂ ಹಾಗೂ ಬೆಂಗಳೂರಿನ ಯುಆರ್ ರಾವ್ ಸ್ಯಾಟಲೈಟ್ ಸೆಂಟರ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

Pixxel ಅಭಿವೃದ್ಧಿಪಡಿಸಿದ 'ಆನಂದ್' ಉಪಗ್ರಹವು ಕಡಿಮೆ ಭೂ ಕಕ್ಷೆಯಲ್ಲಿ ಸೂಕ್ಷ್ಮ-ಉಪಗ್ರಹವನ್ನು ಬಳಸಿಕೊಂಡು ಮಿನಿಯೇಚರ್ ಭೂಮಿಯ ವೀಕ್ಷಣಾ ಕ್ಯಾಮೆರಾದ ಸಾಮರ್ಥ್ಯಗಳು ಮತ್ತು ವಾಣಿಜ್ಯ ಅನ್ವಯಿಕೆಗಳನ್ನು ಪ್ರದರ್ಶಿಸುವ ತಂತ್ರಜ್ಞಾನವಾಗಿದೆ. 'ಥೈಬೋಲ್ಟ್' ಎರಡು ಉಪಗ್ರಹಗಳು ಮತ್ತೊಂದು ಬಾಹ್ಯಾಕಾಶ ಸ್ಟಾರ್ಟ್-ಅಪ್ ಧ್ರುವ ಸ್ಪೇಸ್‌ನಿಂದ ಬಂದಿದ್ದು, ಇನ್ನೊಂದು 'ಆಸ್ಟ್ರೋಕಾಸ್ಟ್' ಎಂಬ ಉಪಗ್ರಹ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಿಂದ ಸ್ಪೇಸ್‌ಫ್ಲೈಟ್‌ನಿಂದ ಬಂದಿದೆ.

ಇದನ್ನೂ ಓದಿ: ಅಫೋಲೋ ನಂತರ 50 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ನಾಸಾ ರಾಕೆಟ್​​

Last Updated : Nov 26, 2022, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.