ನವದೆಹಲಿ: ಕೋವಿಡ್ ವ್ಯಾಕ್ಸಿನ್ಗಳ ಮಿಶ್ರಣ ಮತ್ತು ಹೊಂದಾಣಿಕೆಯಿಂದ ಉತ್ತಮ ಫಲಿತಾಂಶಗಳು ದೊರಕಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ವರದಿಯೊಂದರ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಮುಂದಿನ ಸಂಶೋಧನೆಗಳಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೋವಿಡ್ ಲಸಿಕೆಗಳಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ಐಸಿಎಂಆರ್ ಹೇಳಿದ್ದು, ಅಡೆನೋವೈರಸ್ ವೆಕ್ಟರ್ ಆಧಾರದಲ್ಲಿ ಸಂಶೋಧಿಸಲಾದ ವ್ಯಾಕ್ಸಿನ್ಗಳ ಮಿಶ್ರಣದಿಂದ ವೈರಸ್ ಅನ್ನು ನಿಷ್ಕ್ರಿಯಗೊಳಿಸುವುದು ಮಾತ್ರವಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಅಧಿಕವಾಗುತ್ತದೆ ಎಂದು ತಿಳಿಸಿದೆ.
ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (DCGI)ನ ತಜ್ಞರ ಸಮಿತಿಯು ಕಳೆದ ತಿಂಗಳು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಡೋಸೇಜ್‌ಗಳನ್ನು ಮಿಶ್ರಣ ಮಾಡುವ ಕುರಿತು ಅಧ್ಯಯನ ನಡೆಸಲು ಶಿಫಾರಸು ಮಾಡಿತ್ತು.
ಈ ಮೊದಲು, ಬ್ರಿಟನ್ನಲ್ಲಿ ನಡೆದ ಅಧ್ಯಯನವೊಂದು ಕೋವಿಡ್ ಲಸಿಕೆ ಮಿಶ್ರಣ ಮತ್ತು ಹೊಂದಾಣಿಕೆಯ ವೈರಸ್ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ ಎಂದು ಕಂಡುಹಿಡಿದಿತ್ತು. ಕಾಮ್-ಕೋವ್ ಪ್ರಯೋಗವು ಫೈಜರ್, ಅಸ್ಟ್ರಾಜೆನೆಕಾ ಡೋಸ್ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿತ್ತು.
ಇದನ್ನೂ ಓದಿ: Al Qaeda ಉಗ್ರ ಸಂಘಟನೆಯಿಂದ ಬಾಂಬ್ ಬೆದರಿಕೆ: Delhi IGI airport ನಲ್ಲಿ ಕಟ್ಟೆಚ್ಚರ