ETV Bharat / bharat

ಇದೆಂಥಾ ಅಚ್ಚರಿ!.. "ವ್ಯಕ್ತಿಯ ಸಾವಿಗೂ ಮುನ್ನ ಆತನ ಜೀವನ ವೃತ್ತಾಂತ ಕಣ್ಮುಂದೆ ಬರುತ್ತದೆಯಂತೆ" - ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್ ಜರ್ನಲ್‌

ನಮ್ಮ ಪ್ರೀತಿಪಾತ್ರರು ಕಣ್ಣು ಮುಚ್ಚಿದ್ದರೂ ಅವರ ಮಿದುಳುಗಳು ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕೆಲವು ಉತ್ತಮ ಕ್ಷಣಗಳನ್ನು ಪುನರಾವರ್ತಿಸಬಹುದು ಎಂದು ಲೂಯಿಸ್ವಿಲ್ಲೆ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನವೊಂದು ಹೇಳುತ್ತದೆ..

Study claims life replays before ours eyes when we die

author img

By

Published : Feb 25, 2022, 5:37 PM IST

Updated : Feb 25, 2022, 10:57 PM IST

ಒಬ್ಬ ವ್ಯಕ್ತಿಯು ಸಾಯುವ ವೇಳೆ ಆತನ ಮೆದುಳಿನಲ್ಲಿ ಏನು ಓಡುತ್ತಿರುತ್ತದೆ ಎಂದು ಎಂದಾದರೂ ಊಹಿಸಿದ್ದೀರಾ? ಸಾವಿನ ಸಮೀಪದಲ್ಲಿರುವ ಅನುಭವ ಮತ್ತು ಸಾವಿನ ನಂತರ ನಿಮ್ಮ ಮೆದುಳಿನೊಳಗೆ ಏನಾಗುತ್ತದೆ ಎಂಬುದು ಶತಮಾನಗಳಿಂದ ನರವಿಜ್ಞಾನಿಗಳನ್ನು ಗೊಂದಲಕ್ಕೀಡುಮಾಡುವ ಪ್ರಶ್ನೆಗಳಾಗಿವೆ.

ಸಾಯುತ್ತಿರುವ ವ್ಯಕ್ತಿಯ ಬ್ರೇನ್ ನಮ್ಮ ಇಡೀ ಜೀವನವನ್ನ ಸ್ಕ್ಯಾನ್ ಮಾಡಿ ಮಿಂಚಿನಂತೆ ನಮ್ಮ ಕಣ್ಣುಗಳ ಮುಂದೆ ಹಾದು ಹೋಗುವಂತೆ ಮಾಡುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ನಮ್ಮ ಮೆದುಳು ಸಾವಿನ ಸಮಯ ಮತ್ತು ನಂತರ ಸಕ್ರಿಯವಾಗಿರುತ್ತದೆ ಹಾಗೂ ಸಂಘಟಿತವಾಗಿರುತ್ತದೆ ಎಂದು ಹೇಳುತ್ತದೆ. "ಈ ಸಂಶೋಧನೆಯಿಂದ ನಾವು ತಿಳಿದುಕೊಳ್ಳಬಹುದಾದ ವಿಷಯವೆಂದರೆ - ನಮ್ಮ ಪ್ರೀತಿ-ಪಾತ್ರರು ಕಣ್ಣು ಮುಚ್ಚಿದ್ದರೂ ಅವರ ಮಿದುಳುಗಳು ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕೆಲವು ಉತ್ತಮ ಕ್ಷಣಗಳನ್ನು ಪುನರಾವರ್ತಿಸಬಹುದು" ಎಂದು ಡಾ ಲೂಯಿಸ್ವಿಲ್ಲೆ ವಿಶ್ವವಿದ್ಯಾನಿಲಯದ ಅಜ್ಮಲ್ ಜೆಮ್ಮಾರ್ ಹೇಳಿದ್ದಾರೆ.

ಎಸ್ಟೋನಿಯಾದ ಟಾರ್ಟು ವಿಶ್ವವಿದ್ಯಾನಿಲಯದ ನರವಿಜ್ಞಾನಿಗಳು ಅಪಸ್ಮಾರದಿಂದ ಸಾಯುತ್ತಿರುವ 87 ವರ್ಷದ ರೋಗಿಯ ಚಟುವಟಿಕೆಯನ್ನು ದಾಖಲಿಸಿದ್ದಾರೆ. ಕನಸು ಮತ್ತು ಧ್ಯಾನದ ಸಮಯದಲ್ಲಿ ಸಂಭವಿಸುವ ರೀತಿಯ ಲಯಬದ್ಧ ತರಂಗವನ್ನು ಅವರ ಸಾವಿನ ಸಮಯದಲ್ಲಿ ವಿಜ್ಞಾನಿಗಳು ಗಮನಸಿದರು.

ರೋಗಿಗೆ ಚಿಕಿತ್ಸೆ ನೀಡಲು ಅವರು ನಿರಂತರ ಎಲೆಕ್ಟ್ರೋಎನ್ಸೆಫಾಲೋಗ್ರಫಿ (EEG) ಅನ್ನು ಬಳಸಿದ್ದರು. ಈ ರೆಕಾರ್ಡಿಂಗ್ ಸಮಯದಲ್ಲಿ, ರೋಗಿಯು ಹೃದಯಾಘಾತದಿಂದ ನಿಧನರಾದರು. ಈ ಅನಿರೀಕ್ಷಿತ ಘಟನೆಯು ಸಾಯುತ್ತಿರುವ ಮಾನವ ಮೆದುಳಿನ ಚಟುವಟಿಕೆಯನ್ನು ವಿಜ್ಞಾನಿಗಳು ಮೊದಲ ಬಾರಿಗೆ ದಾಖಲಿಸಲು ಅವಕಾಶ ಮಾಡಿಕೊಟ್ಟಿತು.

ಇದನ್ನೂ ಓದಿ: ಭಾರತದಲ್ಲಿ ಬಾಯಿಯ ಕ್ಯಾನ್ಸರ್​ನಿಂದ ಪ್ರತಿ ಗಂಟೆಗೆ 5 ಜನ ಬಲಿ: ಇದಕ್ಕೆ ಕಾರಣ ಹೀಗಿದೆ..

"ನಮ್ಮ ಸಾವಿನ ಸಮಯದಲ್ಲಿ 900 ಸೆಕೆಂಡುಗಳ ಮೆದುಳಿನ ಚಟುವಟಿಕೆಯನ್ನು ಅಳೆಯುತ್ತೇವೆ ಮತ್ತು ಹೃದಯ ಬಡಿತವನ್ನು ನಿಲ್ಲಿಸುವ ಮೊದಲು ಹಾಗೂ ನಂತರದ 30 ಸೆಕೆಂಡುಗಳಲ್ಲಿ ಏನಾಯಿತು ಎಂಬುದನ್ನು ತನಿಖೆ ಮಾಡಲು ನಿರ್ದಿಷ್ಟ ಗಮನವನ್ನು ಹೊಂದಿಸಿದ್ದೇವೆ" ಎಂದು ಜೆಮ್ಮಾರ್ ಹೇಳಿದರು.

"ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುವ ಮೊದಲು ಮತ್ತು ನಿಲ್ಲಿಸಿದ ನಂತರ ನರವ್ಯೂಹದಲ್ಲಿ ಏರುಪೇರುಗಳಾಗುತ್ತದೆ. ಮೆದುಳಿನ ಏರುಪೇರುಗಳು ಮೆಮೊರಿ ಫ್ಲ್ಯಾಷ್‌ಬ್ಯಾಕ್‌ಗಳಿಗೆ ಸಂಬಂಧಿಸುತ್ತದೆ. ಇದನ್ನು ಸಾಮಾನ್ಯವಾಗಿ 'ಮೆದುಳಿನ ಅಲೆಗಳು' ಎಂದು ಕರೆಯಲಾಗುತ್ತದೆ.

ನಾವು ಸಾಯುವ ವೇಳೆ ನಮ್ಮ ಮೆದುಳು ನೆನಪಿನ ಮರುಪಡೆಯುವಿಕೆಯಲ್ಲಿ ತೊಡಗಿಕೊಳ್ಳುತ್ತದೆ. ಪ್ರಮುಖ ಜೀವನ ಘಟನೆಗಳ ಕ್ಷಣಗಳು ಮರುಕಳಿಸಿ ನಮ್ಮ ಕಣ್ಣುಗಳ ಮುಂದೆ ಕಾಣುವಂತೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಆದರೆ, ಇಂತಹ ಈ ಸಂಶೋಧನೆಗಳು ನಿಖರವಾಗಿ ಜೀವನವು ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಕುರಿತ ನಮ್ಮ ತಿಳುವಳಿಕೆಗೆ ಸವಾಲಾಗಿದೆ ಮತ್ತು ಅಂಗಾಂಗ ದಾನದ ಸಮಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಸೃಷ್ಟಿಸುತ್ತದೆ.

Last Updated : Feb 25, 2022, 10:57 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.