ETV Bharat / bharat

ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಕನಿಷ್ಠ ಸೌಲಭ್ಯಗಳಿಲ್ಲ; ಬಸ್‌ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ - ಬಸ್‌ ಮೇಲ್ಛಾವಣಿ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ

ವಿದ್ಯಾರ್ಥಿಗಳು ಬಸ್ಸಿನ ಮೇಲ್ಛಾವಣಿ ಮೇಲೆ ಕುಳಿತು ಶಾಲಾ-ಕಾಲೇಜುಗಳಿಗೆ ಹೋಗುವಂತಹ ಪರಿಸ್ಥಿತಿ ಜಾರ್ಖಂಡ್‌ನ ಗಿರಿಡ್‌ ಜಿಲ್ಲೆಯಲ್ಲಿದೆ. ಅದೂ ಕೂಡ ರಾಜ್ಯದ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಅನ್ನೋದು ಆತಂಕದ ವಿಚಾರ.

students travelling on roof of bus in giridih

author img

By

Published : Oct 22, 2021, 12:42 PM IST

Updated : Oct 22, 2021, 1:34 PM IST

ಗಿರಿಡ್ (ಜಾರ್ಖಂಡ್‌): ಕೋವಿಡ್‌ ಕೊಂಚ ಇಳಿಕೆಯಾದ ಬಳಿಕ ದೇಶದ ಬಹುತೇಕ ಕಡೆಗಳಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿವೆ. ಕೆಲವೆಡೆ ಕನಿಷ್ಠ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ನಾನಾ ರೀತಿಯ ಸವಾಲುಗಳನ್ನು ಎದುರಿಸಿಕೊಂಡು ಶಾಲಾ-ಕಾಲೇಜುಗಳತ್ತ ತೆರಳುತ್ತಿದ್ದಾರೆ. ಜಾರ್ಖಂಡ್‌ನ ಗಿರಿಡ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಸ್‌ನ ಮೇಲ್ಛಾವಣಿ ಮೇಲೆ ಕುಳಿತು ಪ್ರಯಾಣಿಸುತ್ತಿರುವುದು ಕಂಡುಬಂತು.

ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಕನಿಷ್ಠ ಸೌಲಭ್ಯಗಳಿಲ್ಲ; ಬಸ್‌ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ

ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ವಿದ್ಯಾರ್ಥಿಗಳಿಗಿಲ್ಲ ಬಸ್ ಸೌಲಭ್ಯ!

ಡುಮ್ರಿ ಬ್ಲಾಕ್ ಡುಮ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ರಾಜ್ಯ ಶಿಕ್ಷಣ ಸಚಿವ ಜಾಗರಣಾಥ್ ಮಹತೋ ಈ ಕ್ಷೇತ್ರದ ಏಕೈಕ ಶಾಸಕರಾಗಿದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಕನಿಷ್ಠ ಬಸ್‌ ಸೌಲಭ್ಯವನ್ನು ಕಲ್ಪಿಸಿಲ್ಲ.

ಈ ಸಂಬಂಧ ಬಸ್ ಚಾಲಕ ಬಸುದೇವ್ ಪ್ರತಿಕ್ರಿಯಿಸಿ, ಬಸ್ ನಿಲ್ಲಿಸದಿದ್ದರೆ ಮರುದಿನದಿಂದ ಬಸ್ ಓಡಿಸಲು ಇಲ್ಲಿನ ಜನರು ಬಿಡುವುದಿಲ್ಲ. ಜನರು ಹೋರಾಟಕ್ಕೆ ನಿಲ್ಲುತ್ತಾರೆ. ಇವರೊಂದಿಗೆ ಜಗಳವಾಡುವುದಕ್ಕಿಂತ ಮಕ್ಕಳನ್ನು ಬಸ್ಸಿನಲ್ಲಿ ಹೀಗೆ ಕರೆದುಕೊಂಡು ಹೋಗುವುದೇ ಉತ್ತಮ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

Last Updated : Oct 22, 2021, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.