ETV Bharat / bharat

ಅಕೌಂಟಿಂಗ್ ಪರೀಕ್ಷೆಗಳಲ್ಲಿ ಚಾಟ್‌ಜಿಪಿಟಿಗಿಂತ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು - tech news in kannada

ಇತ್ತೀಚಿನ ಅಧ್ಯಯನವೊಂದರಲ್ಲಿ, ಚಾಟ್​​ಜಿಪಿಟಿಗಿಂತ ವಿದ್ಯಾರ್ಥಿಗಳು ಅಕೌಂಟಿಂಗ್​​ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.

students-found-to-fare-better-at-accounting-exams-than-chatgpt
ಅಕೌಂಟಿಂಗ್ ಪರೀಕ್ಷೆಗಳಲ್ಲಿ ಚಾಟ್‌ಜಿಪಿಟಿಗಿಂತ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು
author img

By

Published : Apr 22, 2023, 7:02 PM IST

ನವದೆಹಲಿ: ಅಕೌಂಟಿಂಗ್​​​ (ಲೆಕ್ಕ ಪರಿಶೋಧಕ) ಪರೀಕ್ಷೆಗಳಲ್ಲಿ ಚಾಟ್​​​ಜಿಪಿಟಿಗಿಂತ ವಿದ್ಯಾರ್ಥಿಗಳು ಉತ್ತಮವಾದ ಅಂಕಗಳಿಸಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಚಾಟ್​​​ ಜಿಪಿಟಿಯ ಕಾರ್ಯಕ್ಷಮತೆಯು "ಪ್ರಭಾವಶಾಲಿಯಾಗಿದೆ" ಮತ್ತು "ಎಲ್ಲರೂ ಕಲಿಸುವ ಮತ್ತು ಕಲಿಯುವ ವಿಧಾನವನ್ನು ಬದಲಿಸುವ ಸಾಮರ್ಥ್ಯವಿದೆ" ಎಂದು ಸಂಶೋಧಕರು ತಿಳಿಸಿದ್ದಾರೆ.

openAI ತಂತ್ರಜ್ಞಾನವು ಅಕೌಂಟಿಂಗ್​​ ಪರೀಕ್ಷೆಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಬ್ರಿಗಮ್​​ ಯಂಗ್​​​ ಯೂನಿವರ್ಸಿಟಿ (BYU) ಮತ್ತು ಇತರ 186 ವಿಶ್ವವಿದ್ಯಾನಿಲಯಗಳ ಸಂಶೋಧಕರು ಪರೀಕ್ಷೆ ಏರ್ಪಡಿಸಿದ್ದರು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸರಾಸರಿ ಶೇ. 76.7 ಗಳಿಸಿದ್ದರೆ. ಚಾಟ್​ಜಿಪಿಟಿ ಶೇ 47.4 ಅಂಕಗಳನ್ನು ಪಡೆದುಕೊಂಡಿದೆ.

ಲೆಕ್ಕಪರಿಶೋಧಕ ಮಾಹಿತಿ ವ್ಯವಸ್ಥೆಗಳು (ಎಐಎಸ್) ಮತ್ತು ಲೆಕ್ಕಪರಿಶೋಧನೆಯಲ್ಲಿ ಪ್ರಶ್ನೆಗಳಲ್ಲಿ ಚಾಟ್​​ಜಿಪಿಟಿ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಆದರೆ ತೆರಿಗೆ, ಹಣಕಾಸು ಮತ್ತು ವ್ಯವಸ್ಥಾಪಕ ವಿಷಯಗಳಲ್ಲಿ ಚಾಟ್​​ಜಿಪಿಟಿಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕಡಿಮೆ ಅಂಕಗಳಿಸಲು ಗಣಿತದ ಪ್ರಕ್ರಿಯೆಗಳೇ ಕಾರಣ ಎಂದು ಸಂಶೋಧಕರು ಭಾವಿಸಿದ್ದಾರೆ.

ನೈಸರ್ಗಿಕ ಭಾಷಾ ಪಠ್ಯವನ್ನು ರಚಿಸಲು ಯಂತ್ರ ಕಲಿಕೆಯನ್ನು ಬಳಸುವ AI ಬಾಟ್​​​, ನಿಜ/ಸುಳ್ಳು ಪ್ರಶ್ನೆಗಳಲ್ಲಿ ಶೇ 68.7 ಸರಿ ಉತ್ತರವನ್ನು ನೀಡಿದೆ. ಬಹು-ಆಯ್ಕೆಯ ಪ್ರಶ್ನೆಗಳಲ್ಲಿ ಶೇ 59.5 ಸರಿ ಉತ್ತರವನ್ನು ನೀಡಿದೆ. ಆದರೆ ಸಣ್ಣ ಉತ್ತರದ ಪ್ರಶ್ನೆಗಳಿಗೆ ಉತ್ತರಿಸಲು ಚಾಟ್​​ಜಿಪಿಟಿ ಹೋರಾಟ ನಡೆಸಿದ್ದು ಕೇವಲ ಶೇ 28.7ರಷ್ಟು ಅಂಕವನ್ನು ಪಡೆದಕೊಂಡಿದೆ. ಕೆಲವೊಮ್ಮೆ ಚಾಟ್​​ಜಿಪಿಟಿ ತಪ್ಪಾದ ಉತ್ತರಗಳಿಗೆ ಲಿಖಿತ ವಿವರಣೆಯನ್ನು ಒದಗಿಸಿದೆ ವಿಭಿನ್ನ ರೀತಿಯಲ್ಲಿ ಉತ್ತರಿಸಲು ಪ್ರಯತ್ನಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಚಾಟ್‌ಜಿಪಿಟಿಯು ಕೆಲವೊಮ್ಮೆ ಸತ್ಯಗಳನ್ನು ರೂಪಿಸುತ್ತದೆ ಎಂದು ಸಂಶೋಧಕರು ಮುಖ್ಯವಾಗಿ ಗಮನಿಸಿದ್ದಾರೆ. ಉದಾಹರಣೆಗೆ, ಚಾಟ್​​ಜಿಪಿಟಿ ಒಂದು ಉಲ್ಲೇಖವನ್ನು ಒದಗಿಸುವಾಗ, ಕೃತಿ ಮತ್ತು ಅದರ ಲೇಖಕರು ಅಸ್ತಿತ್ವದಲ್ಲಿರದೇ ಇರುವ ಉಲ್ಲೇಖಗಳನ್ನು ನೀಡುತ್ತದೆ ಎಂದು ಬಿವೈಯು ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದರು. ವ್ಯವಕಲನದ ಗಣಿತದ ಲೆಕ್ಕದಲ್ಲಿ ಎರಡು ಸಂಖ್ಯೆಗಳನ್ನು ಸೇರಿಸುವುದು ಅಥವಾ ಸಂಖ್ಯೆಗಳನ್ನು ತಪ್ಪಾಗಿ ಭಾಗಿಸುವುದು ಹೀಗೆ ಅಸಂಬದ್ಧ ಗಣಿತದ ದೋಷಗಳನ್ನು ಚಾಟ್​​ಜಿಪಿಟಿ ಮಾಡುತ್ತದೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಅಕೌಂಟಿಂಗ್​​ ವಿದ್ಯಾರ್ಥಿಗಳ ವಿರುದ್ಧ ಚಾಟ್​​ಜಿಪಿಟಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯುವುದಕ್ಕಾಗಿ ಚಾಟ್‌ಜಿಪಿಟಿಯಂತಹ ಮಾದರಿಯನ್ನು ಶಿಕ್ಷಣಕ್ಕೆ ಸೇರಿಸಲು ಬಯಸುತ್ತಿರುವ ಪ್ರಮುಖ ಅಧ್ಯಯನ ಲೇಖಕ ಡೇವಿಡ್ ವುಡ್, ಮತ್ತು ಬಿವೈಯು ಲೆಕ್ಕಪರಿಶೋಧಕ ಪ್ರಾಧ್ಯಾಪಕರು ಈ ಒಂದು ಸಂಶೋಧನೆ ನಡೆಸಲು ಹೆಚ್ಚಿನ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದರು.

ಈ ಸಂಶೋಧನೆಯಲ್ಲಿ ಸುಮಾರು 14 ದೇಶದ 186 ಶಿಕ್ಷಣ ಸಂಸ್ಥೆಗಳಿಂದ 327 ಸಹ - ಲೇಖಕರು ಭಾಗವಹಿಸಿ 25,181 ಅಕೌಂಟಿಂಗ್​ ಪರೀಕ್ಷೆಯ ಪ್ರಶ್ನೆಗಳನ್ನು ಸಿದ್ದಪಡಿಸಿದರು. 2,268 ಪಠ್ಯಪುಸ್ತಕದ ಪರೀಕ್ಷಾ ಪ್ರಶ್ನೆಗಳನ್ನು ಚಾಟ್​​ಜಿಪಿಟಿಗೆ ಫೀಡ್ ಮಾಡಲು ಬ್ರಿಗಮ್​​ ಯಂಗ್​​​ ವಿಶ್ಯವಿದ್ಯಾಲಯದ (ಬಿವೈಯು) ಪದವಿಪೂರ್ವ ವಿದ್ಯಾರ್ಥಿಗಳನ್ನು ಸಹ ನೇಮಿಸಿಕೊಳ್ಳಲಾಗಿತ್ತು. ಲೆಕ್ಕಪರಿಶೋಧನೆ, ಹಣಕಾಸು ಲೆಕ್ಕಪತ್ರ ನಿರ್ವಹಣೆ, ವ್ಯವಸ್ಥಾಪಕ ಲೆಕ್ಕಪತ್ರ ನಿರ್ವಹಣೆ ಮತ್ತು ತೆರಿಗೆಯನ್ನು ಸಂಬಂಧಿಸಿದ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗಿತ್ತು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 6G ಸೇವೆ ಮೇಲೆ ಅಮೆರಿಕ ಕಣ್ಣು; ಹೇಗಿರಲಿದೆ ಇದರ ವೇಗ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.