ETV Bharat / bharat

ಪಿಸ್ತೂಲ್ ಹಿಡಿದು ಶಾಲೆಗೆ ಬಂದ 10ನೇ ತರಗತಿ ವಿದ್ಯಾರ್ಥಿ - ಪಿಸ್ತೂಲ್ ವಶ

ಹರಿದ್ವಾರದಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಪಿಸ್ತೂಲ್ ಹಿಡಿದುಕೊಂಡು ತನ್ನ ಶಾಲೆಗೆ ಬಂದಿರುವ ಘಟನೆ ನಡೆದಿದೆ.

student-held-with-pistol-in-school-in-haridwar
ಪಿಸ್ತೂಲ್ ಹಿಡಿದು ಶಾಲೆಗೆ ಬಂದ 10ನೇ ತರಗತಿ ವಿದ್ಯಾರ್ಥಿ
author img

By

Published : Nov 5, 2022, 5:48 PM IST

ಹರಿದ್ವಾರ(ಉತ್ತರಾಖಂಡ): 10ನೇ ತರಗತಿ ವಿದ್ಯಾರ್ಥಿಯೊಬ್ಬ ಪಿಸ್ತೂಲ್​ನೊಂದಿಗೆ ಶಾಲೆಗೆ ಬಂದ ಘಟನೆ ಹರಿದ್ವಾರದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಅದೇ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಜಗಳ ಮಾಡಿಕೊಂಡಿದ್ದ. ನಂತರ ಶಾಲಾ ಆಡಳಿತ ಮಂಡಳಿಗೆ ವಿಷಯ ತಲುಪಿದ್ದು, ಇಬ್ಬರೂ ಮಕ್ಕಳ ಮನವೊಲಿಸಿ ಇತ್ಯರ್ಥಪಡಿಸಿದ್ದರು.

ಶುಕ್ರವಾರ 10ನೇ ತರಗತಿ ಹಿರಿಯ ವಿದ್ಯಾರ್ಥಿಯ ಮೇಲೆ ಸೇಡು ತೀರಿಸಿಕೊಳ್ಳಲು ಪಿಸ್ತೂಲ್ ಹಿಡಿದು ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ. ಅಷ್ಟರಲ್ಲಿ ತರಗತಿಯಲ್ಲಿದ್ದ ಸಹಪಾಠಿಗಳು ಆತನ ಬಳಿ ಲೋಡೆಡ್​​ ಪಿಸ್ತೂಲ್ ನೋಡಿದ್ದಾರೆ. ಬಳಿಕ ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಶಿಕ್ಷಕರು ವಿದ್ಯಾರ್ಥಿಯನ್ನು ಹಿಡಿದು ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಈ ಘಟನೆ ಸಿಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಸಿಡಿಕಲ್ ಪೊಲೀಸ್ ಠಾಣೆ ಉಸ್ತುವಾರಿ ಪ್ರಮೋದ್ ಉನಿಯಾಲ್ ಅವರು ವಿದ್ಯಾರ್ಥಿಯನ್ನು ವಿಚಾರಣೆ ನಡೆಸಿದಾಗ ಕೊಲ್ಲಲು ಪಿಸ್ತೂಲ್ ಹಿಡಿದು ಬಂದಿರುವುದು ಬೆಳಕಿಗೆ ಬಂದಿದೆ. ಆತನ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ; ದಲಿತರ ಮನೆಗೆ ನುಗ್ಗಿ ದಾಂಧಲೆ, ಹಲ್ಲೆ: ದೂರು ನೀಡಿದರೂ ಕ್ರಮಕೈಗೊಳ್ಳದ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.