ETV Bharat / bharat

ಪ್ರವಾಸಕ್ಕೆ ಬಂದಿದ್ದ 17 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ - ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗೆ ಹೃದಯಾಘಾತ

ಪ್ರಾಣಪಕ್ಷಿ ಯಾವಾಗ, ಎಲ್ಲಿ, ಹೇಗೆ ಹಾರಿ ಹೋಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಕಾರಣ ಪ್ರವಾಸಕ್ಕೆ ಎಂದು ಬಂದಿದ್ದ ವಿದ್ಯಾರ್ಥಿನಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

student-died-of-heart-attack-in-mharastra
ಪ್ರವಾಸ ಬಂದಿದ್ದ 17 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ
author img

By

Published : Jul 30, 2022, 9:39 AM IST

ಪುಣೆ: ಮಕ್ಕಳಿಗೂ ಹೃದಯಾಘಾತ ತಪ್ಪಿದ್ದಲ್ಲ. ಮಹಾರಾಷ್ಟ್ರದ ರಾಯರೇಶ್ವರ ಕೋಟೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಹೃದಯಾಘಾತಕ್ಕೀಡಾಗಿ 17 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ.

ಶುಭಂ ಪ್ರದೀಪ್ ಚೋಪ್ಡೆ ಮೃತ ವಿದ್ಯಾರ್ಥಿ. ನಿನ್ನೆ ಬಾರಾಮತಿಯಲ್ಲಿರುವ ಶಾರದಾಬಾಯಿ ಪವಾರ್ ವಿದ್ಯಾನಿಕೇತನ ಜೂನಿಯರ್ ಕಾಲೇಜಿನ 46 ವಿದ್ಯಾರ್ಥಿಗಳು ಮತ್ತು 4 ಶಿಕ್ಷಕರು ರಾಯರೇಶ್ವರ ಕೋಟೆಗೆ ಪ್ರವಾಸಕ್ಕೆ ಬಂದಿದ್ದರು. ಬೆಳಗ್ಗೆ 9 ಗಂಟೆಗೆ ಭೋರ್- ರಾಯರೇಶ್ವರ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದ ಬಳಿಕ ಹೊರಡಲು ಸಿದ್ಧರಾಗಿದ್ದಾಗ ವಿದ್ಯಾರ್ಥಿ ಶುಭಂ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದಾನೆ.

ವಿದ್ಯಾರ್ಥಿಯನ್ನು ಕೂಡಲೇ ಸಮೀಪದ ಅಂಬ್ವಾಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಮುನ್ನವೇ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು. ಇದು ಸಂತಸಕ್ಕೆಂದು ಪ್ರವಾಸ ಬಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರೀ ಆತಂಕ ಉಂಟು ಮಾಡಿದೆ.

ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಗ್ಲೂಕೋಸ್ ಕುಡಿದು ಬಲಿಷ್ಠವಾಗುತ್ತಿರುವ ಇಲಿಗಳು! ವಿಡಿಯೋ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.