ETV Bharat / bharat

ಚೀನಾ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರಬಲ ಭೂಕಂಪನ - ಚೀನಾ ಭೂಕಂಪ ನೆಟ್‌ವರ್ಕ್ ಕೇಂದ್ರ

ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶ ಮತ್ತು ನೆರೆಯ ರಾಷ್ಟ್ರವಾದ ಚೀನಾದಲ್ಲಿ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ..

Strong earthquake in china and Arunachal Pradesh
ಚೀನಾ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರಬಲ ಭೂಕಂಪನ
author img

By

Published : Apr 15, 2022, 9:38 AM IST

ಸಿಯಾಂಗ್,(ಅರುಣಾಚಲ ಪ್ರದೇಶ) : ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದ್ದು, ಬೆಳಗ್ಗೆ 6.56ಕ್ಕೆ ಅರುಣಾಚಲ ಪ್ರದೇಶದ ಪಾಂಗಿನ್​ನ ಉತ್ತರ ಭಾಗದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.

ಅರುಣಾಚಲ ಪ್ರದೇಶದ ಪಾಂಗಿನ್‌ನಿಂದ ಉತ್ತರಕ್ಕೆ ಸುಮಾರು 1,176 ಕಿಲೋಮೀಟರ್​ ದೂರದಲ್ಲಿ ಭೂಕಂಪದ ಅನುಭವವಾಗಿದೆ. 30 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ಮಾಡಿದೆ.

ಚೀನಾದಲ್ಲೂ ಪ್ರಬಲ ಭೂಕಂಪ : ಬೆಳಗ್ಗೆ ವಾಯುವ್ಯ ಚೀನಾದ ಕಿಂಗ್‌ಹೈ ಪ್ರಾಂತ್ಯದ ಡೆಲಿಂಗಾ ನಗರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ ಎಂದು ಚೀನಾದ ಭೂಕಂಪನ ನೆಟ್‌ವರ್ಕ್ ಕೇಂದ್ರ ಮಾಹಿತಿ ನೀಡಿದೆ. ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಪ್ರಕಾರ ಇಂದು ಬೆಳಗ್ಗೆ 9:26ಕ್ಕೆ (ಬೀಜಿಂಗ್ ಸಮಯ) ಕಂಪನ ಸಂಭವಿಸಿದೆ.

10 ಕಿಲೋಮೀಟರ್​ ಆಳದಲ್ಲಿ ಭೂಕಂಪನ ಸಂಭವಿಸಿದೆ. ಇದುವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಇದಕ್ಕೂ ಮುನ್ನ ಬುಧವಾರ, ಚೀನಾದ ಸಿಚುವಾನ್ ಪ್ರಾಂತ್ಯದ ಯಿಬಿನ್ ನಗರದ ಕ್ಸಿಂಗ್ವೆನ್ ಕೌಂಟಿಯಲ್ಲಿ 5.1 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು.

ಇದನ್ನೂ ಓದಿ: ಮೆಗಿ ಚಂಡಮಾರುತ: ಫಿಲಿಪೈನ್ಸ್​​ನಲ್ಲಿ ಈವರೆಗೆ 121 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.