ETV Bharat / bharat

ಹೈಕೋರ್ಟ್​ ಶಾಶ್ವತ ಪೀಠಕ್ಕೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ - ಈಟಿವಿ ಭಾರತ ಕನ್ನಡ

ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದಿದ್ದು, ವಕೀಲರು ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದರು.

striking-lawyers-clash-with-police-in-sambalpur
ಒಡಿಶಾ ವಕೀಲರಿಂದ ಪ್ರತಿಭಟನೆ
author img

By

Published : Dec 12, 2022, 3:27 PM IST

ಸಂಬಲ್​ಪುರ(ಒಡಿಶಾ): ಒಡಿಶಾ ಹೈಕೋರ್ಟ್​ನ ಶಾಶ್ವತ ಪೀಠಕ್ಕೆ ಆಗ್ರಹಿಸಿ ವಕೀಲರು ಇಲ್ಲಿನ ಸಂಬಲ್​ಪುರ ಪಟ್ಟಣದ ಕಚೇರಿ ಚಕ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ಬ್ಯಾರಿಕೇಡ್​ಗಳನ್ನು ಮುರಿದ ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಪರವಾನಗಿ ಅಮಾನತು ಮಾಡಿ ಅಥವಾ ನಮ್ಮನ್ನು ಬಂಧಿಸಿ. ಆದರೆ ಬೇಡಿಕೆಯಿಂದ ಮಾತ್ರ ನಾವು ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಒಡಿಶಾದ ಹಲವೆಡೆ ಆಂದೋಲನ ನಡೆಸುತ್ತಿರುವ ವಕೀಲರ ಪರವಾನಗಿಯನ್ನು ಅಮಾನತುಗೊಳಿಸುವಂತೆ ಭಾರತೀಯ ಬಾರ್ ಕೌನ್ಸಿಲ್​ಗೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ. ನ್ಯಾ.ಸಂಜಯ್ ಕೌಲ್ ನೇತೃತ್ವದ ಪೀಠವು, ಪ್ರತಿಭಟನಾನಿರತ ವಕೀಲರಿಂದ ನ್ಯಾಯಾಲಯದ ಕಾರ್ಯನಿರ್ವಹಣೆಗೆ ಅಡ್ಡಿಯಾಗದಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಪೊಲೀಸರಿಗೆ ಸೂಚಿಸಿದೆ.

ಇದನ್ನೂ ಓದಿ: ಜಾಮೀನು ಕೋರಿದ ವಂಚಕ ಸುಕೇಶ್ ಪತ್ನಿ: ಪ್ರತಿಕ್ರಿಯೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.