ಕೃಷ್ಣ (ಆಂಧ್ರ ಪ್ರದೇಶ): ಬೀದಿ ನಾಯಿಗಳ ಗುಂಪೊಂದು ಹಾವಿನೊಂದಿಗೆ ತೀವ್ರ ಕಾದಾಟ ನಡೆಸಿ ಕೊನೆಗೆ ಹಾವನ್ನು ಕೊಂದ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂನಲ್ಲಿರುವ ನೋಬಲ್ ಕಾಲೇಜಿಗೆ ಜೆರ್ರಿ ಗೊಡ್ಡು(ಒಂದು ಬಗೆಯ ಹಾವು) ಹಾವು ಬಂದಿತ್ತು. ಸುಮಾರು ಆರು ಅಡಿ ಉದ್ದದ ಹಾವು ಕಾಲೇಜಿಗೆ ಬಂದಿರುವುದನ್ನು ಸ್ಥಳೀಯರು ಗುರುತಿಸಿದ್ದಾರೆ.
ಇದನ್ನೂ ಓದಿ: ಮುಂದಿನ ವಾರ ಪಂಜಾಬ್ ಸಿಎಂ ಅಭ್ಯರ್ಥಿಯ ಹೆಸರು ಘೋಷಣೆ: ಅರವಿಂದ್ ಕೇಜ್ರಿವಾಲ್
ಆದರೆ ಅಲ್ಲಿದ್ದ ಮೂರು ಬೀದಿ ನಾಯಿಗಳು ಹಾವಿನೊಂದಿಗೆ ಕಚ್ಚಾಟಕ್ಕೆ ಇಳಿದಿವೆ. ಅದರೊಂದಿಗೆ ತೀವ್ರ ಕಾದಾಟ ಸಹ ನಡೆಸಿದ ಬೀದಿ ನಾಯಿಗಳು ಕೊನೆಗೂ ಹಾವನ್ನು ಕೊಂದು ಹಾಕುವಲ್ಲಿ ಯಶಸ್ವಿಯಾಗಿವೆ.