ಆಗ್ರಾ(ಉತ್ತರಪ್ರದೇಶ) : ಮೊಹರಂ ಪ್ರಯುಕ್ತ ತಾಜಿಯಾವನ್ನು ಹೊರ ತೆಗೆಯುವ ವೇಳೆ ಗಲಭೆಯುಂಟಾಗಿ ಪೊಲೀಸರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿರುವ ಘಟನೆ ಜಿಲ್ಲೆಯ ಎಟ್ಮದ್ದೌಲಾದಲ್ಲಿ ನಡೆದಿದೆ. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಪ್ರತಿ ವರ್ಷ ತಾಜಿಯಾವನ್ನು ಬಹಳ ವಿಜೃಂಭಣೆಯಿಂದ ಹೊರ ತೆಗೆಯಲಾಗುತ್ತಿತ್ತು. ಆದರೆ, ಈ ವರ್ಷ ಕೋವಿಡ್ ಕಾರಣದಿಂದಾಗಿ ಮೆರವಣಿಗೆ ನಡೆಸಲು ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಆದರೆ, ಸ್ಥಳೀಯರು ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ, ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಬ್ಬಿಣದ ಸರಳುಗಳ ಹೊತ್ತಿದ್ದ ಟಿಪ್ಪರ್ ಪಲ್ಟಿ : 13 ಕಾರ್ಮಿಕರ ದುರ್ಮರಣ
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರೊಬ್ಬರು, ಪೊಲೀಸರು ಕಾರಣವಿಲ್ಲದೆ ನಮ್ಮ ಮನೆಗೆ ನುಗ್ಗಿ ಇಬ್ಬರನ್ನು ಎಳೆದುಕೊಂಡು ಹೋಗಿದ್ದಾರೆ. ಯಾರೋ ಕಲ್ಲು ತೂರಿದ್ದಕ್ಕೆ, ಪೊಲೀಸರು ಅಮಾಯಕರಿಗೆ ಶಿಕ್ಷೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.