ಹೈದರಾಬಾದ್ : 11ನೇ ಶತಮಾನದ ಭಕ್ತಿ ಸಂತ ಶ್ರೀರಾಮಾನುಜಾಚಾರ್ಯರನ್ನು ಸ್ಮರಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಇಂದು ಹೈದರಾಬಾದ್‌ನಲ್ಲಿ ಸಮಾನತೆಯ ಪ್ರತಿಮೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸಮಾನತೆಯ ಪ್ರತಿಮೆ ಯುವಕರನ್ನ ಉತ್ತೇಜಿಸುತ್ತದೆ. ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೆ ವ್ಯಾಪಿಸಲಿ ಎಂದರು.
ಹೈದರಾಬಾದ್ನ ಹೊರವಲಯದಲ್ಲಿರುವ ಮುಂಚಿತ್ತಾಲ್ನಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿದ ನಮೋ, ವಸಂತ ಪಂಚಮಿ ದಿನ ಪ್ರತಿಮೆ ಅನಾವರಣ ಮಾಡಿದ್ದಕ್ಕಾಗಿ ಸಂತೋಷವಾಗುತ್ತದೆ. ರಾಮಾನುಜಾಚಾರ್ಯರ ಈ ಪ್ರತಿಮೆ ಅವರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಸಂಕೇತವಾಗಿದೆ.
ಈ ಪ್ರತಿಮೆ ಭಾರತದ ಪ್ರಾಚೀನ ಸಂಸ್ಕೃತಿಯನ್ನ ಮತ್ತೊಮ್ಮೆ ಬಲಪಡಿಸುತ್ತದೆ ಎಂದಿರುವ ನಮೋ, ಈ ಪ್ರತಿಮೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವುದರ ಜೊತೆಗೆ ಭಾರತದ ಪುರಾತನ ಸಂಸ್ಕೃತಿ ಬಿಂಬಿಸುತ್ತದೆ ಎಂದರು.
ಇದನ್ನೂ ಓದಿರಿ: 216 ಅಡಿ ಎತ್ತರದ ರಾಮಾನುಜರ ಪ್ರತಿಮೆ ಅನಾವರಣ... ಯಜ್ಞದಲ್ಲಿ ಭಾಗಿಯಾಗಿರೋದು ನನ್ನ ಪುಣ್ಯ ಎಂದ ನಮೋ
ದಲಿತರ ಉದ್ಧಾರಕ್ಕಾಗಿ ದುಡಿದಿರುವ ಶ್ರೀರಾಮಾನುಜಾಚಾರ್ಯರು, ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿ ಎಂದು ಹೋರಾಡಿದ್ದಾರೆ ಎಂದರು.
ಪ್ರತಿಮೆಯ ವಿಶೇಷತೆಗಳು
- ಪಂಚಲೋಹದಿಂದ ನಿರ್ಮಾಣಗೊಂಡ ಪ್ರತಿಮೆಯಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತು
- 2014ರಲ್ಲಿ ಶಂಕುಸ್ಥಾಪನೆ, 1000 ಕೋಟಿ ರೂ. ಯೋಜನೆಯಲ್ಲಿ ನಿರ್ಮಾಣ
- ರಾಮಾನುಜಾಚಾರ್ಯರ ಅನೇಕ ಕೃತಿ, ತತ್ವ ವಿವರಿಸುವ ಶೈಕ್ಷಣಿಕ ಗ್ಯಾಲರಿ
- ಒಟ್ಟು ಎತ್ತರ 216 ಅಡಿ ಎತ್ತರ, ರಾಮಾನುಜಾಚಾರ್ಯರ ಮೂರ್ತಿ 108 ಅಡಿ
- ತ್ರಿದಂಡಮ್ 135 ಅಡಿ ಎತ್ತರವಾಗಿಗಿದ್ದು, ಪದ್ಮಪೀಠ 27 ಅಡಿ ಹಾಗೂ ಭದ್ರಾ ವೇದಿಕೆ 54 ಅಡಿ ಎತ್ತರ
- ಪ್ರತಿಮೆಯಲ್ಲಿ 18 ಶಂಖಗಳು ಮತ್ತು 18 ಚಕ್ರಗಳು
- 54 ಕಮಲದ ದಳಗಳು ಹಾಗೂ 34 ಆನೆಗಳು ಪ್ರತಿಮೆಯಲ್ಲಿ ನಿರ್ಮಾಣ