ETV Bharat / bharat

ಗಡಿ ಪ್ರದೇಶಗಳ ರಕ್ಷಣೆ ಕೇವಲ ಕೇಂದ್ರದ ಜವಾಬ್ದಾರಿಯಲ್ಲ: ಕೇಂದ್ರ ಗೃಹ ಸಚಿವ ಅಮಿತ್ ಶಾ

author img

By

Published : Dec 17, 2022, 5:34 PM IST

ಕೇಂದ್ರವು ಗಡಿ ಭದ್ರತೆಯ ಬಗ್ಗೆ ಯೋಚಿಸುತ್ತಿರುತ್ತದೆ. ಹಿಂದಿನ ಸರ್ಕಾರ ದೇಶದ ಗಡಿ ಭದ್ರತೆಯತ್ತ ಹೆಚ್ಚಿನ ಗಮನ ಹರಿಸಿಲ್ಲ. ಆದರೆ ನಮ್ಮ ಸರ್ಕಾರ ಇದರ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಸಾಕಷ್ಟು ಅಬಿವೃದ್ಧಿಯತ್ತ ಸಾಗಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

West Bengal Chief Minister Mamata Banerjee with Union Home Minister Amit Shah at the 25th Eastern Zone Council meeting
25 ನೇ ಪೂರ್ವ ವಲಯ ಕೌನ್ಸಿಲ್​ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗರಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಇಲ್ಲಿಯ ರಾಜ್ಯ ಸಚಿವಾಲಯದ ನಬಣ್ಣದಲ್ಲಿ 25 ನೇ ಪೂರ್ವ ವಲಯ ಕೌನ್ಸಿಲ್​ ಸಭೆ ನಡೆದಿದೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿಯಲ್ಲಿ ಸೂಕ್ತ ಭದ್ರತೆ ಹೆಚ್ಚಿಸಿಕೊಳ್ಳಲು ಮತ್ತು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳ, ಬಿಹಾರ ಮತ್ತು ಒಡಿಶಾ ಸರ್ಕಾರಗಳ ಸಹಾಯ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಗಡಿ ಪ್ರದೇಶಗಳನ್ನು ರಕ್ಷಿಸುವುದು ಕೇವಲ ಕೇಂದ್ರದ ಜವಾಬ್ದಾರಿ ಮಾತ್ರವಲ್ಲ, ರಾಷ್ಟ್ರದ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಕೂಡ ಭದ್ರವಾಗಿರಬೇಕು ಎಂದು ಗೃಹ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗೆ ಕೇಂದ್ರವು ಗಡಿ ಭದ್ರತೆಯ ಬಗ್ಗೆ ಯೊಚಿಸುತ್ತಿರುತ್ತದೆ. ಹಿಂದಿನ ಸರ್ಕಾರ ದೇಶದ ಗಡಿ ಭದ್ರತೆಯತ್ತ ಹೆಚ್ಚಿನ ಗಮನ ಹರಿಸಿಲ್ಲ. ಆದರೆ, ನಮ್ಮ ಸರ್ಕಾರ ಇದರ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ, ಸಾಕಷ್ಟು ಅಬಿವೃದ್ಧಿಯತ್ತ ಸಾಗಿದ್ದೇವೆ ಎಂದು ಶಾ ಹೇಳಿದ್ದಾರೆ ಎಂದು ಕೆಲವು ಮೂಲಗಳು ಮಾಹಿತಿ ನೀಡಿದೆ.

ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆ ವಹಿಸಿದ್ದ ಪೂರ್ವ ವಲಯ ಕೌನ್ಸಿಲ್ ಸಭೆಯಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳು ಭಾಗವಹಿಸಿದ್ದವು. ಜೊತೆಗೆ ಬಿಹಾರದ ಹಣಕಾಸು ಸಚಿವ ವಿಜಯ್ ಚೌಧರಿ, ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಬಿಹಾರದ ಮುಖ್ಯ ಕಾರ್ಯದರ್ಶಿ ಅಮೀರ್ ಸೇಖ್ಬಾನಿ ಮತ್ತು ರೈಲ್ವೆ ಅಧಿಕಾರಿ ಬ್ರಿಜೇಶ್ ಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಗೆ ಗೈರಾಗಿದ್ದರು.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೆಲವು ಬಿಸಿ ಚರ್ಚೆಯೂ ನಡೆಯಿತು ಎಂದು ತಿಳಿದು ಬಂದಿದೆ. ಹಾಗೆ ಮುಖ್ಯವಾಗಿ ನೀರು ಹಂಚಿಕೆ, ಆರ್ಥಿಕ ಅಭಾವ, ರೈಲ್ವೆ ಭೂಮಿ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಮಮತಾ ಬ್ಯಾನರ್ಜಿ ಅವರು ಮೊದಲು ಭಾಷಣ ಆರಂಭಿಸಿದ್ದಾರೆ. ಸಭೆಯ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಮಿತ್ ಶಾರ ಅವರೊಂದಿಗೆ 14 ನೇ ಮಹಡಿಯ ಚೇಂಬರ್‌ನಲ್ಲಿ 20 ನಿಮಿಷಗಳ ಏಕಪಕ್ಷೀಯ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತವಾಂಗ್​ನಲ್ಲಿ ಭಾರತೀಯ ಸೇನೆಯ ತೋರಿದ ಧೈರ್ಯ, ಶೌರ್ಯವನ್ನು ಎಷ್ಟು ಪ್ರಶಂಸಿದರೂ ಕಡಿಮೆ; ರಾಜನಾಥ್​ ಸಿಂಗ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.