ETV Bharat / bharat

ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಜನರಿಗೆ ನೆರವು ಘೋಷಿಸಿದ ರಾಜ್ಯ ಸರ್ಕಾರಗಳು

ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರಿಗಾಗಿ ಆಯಾ ರಾಜ್ಯಗಳು ಉಚಿತ ಪ್ರಯಾಣ ಮತ್ತು ವಸತಿಯಂತಹ ಸಹಾಯದ ಬಗ್ಗೆ ಘೋಷಣೆ ಮಾಡಿವೆ.

States announce steps to assist evacuees from Sudan
ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಜನರಿಗೆ ನೆರವು ಘೋಷಿಸಿದ ರಾಜ್ಯ ಸರ್ಕಾರಗಳು
author img

By

Published : Apr 26, 2023, 7:33 PM IST

ನವದೆಹಲಿ: ಸೇನಾ ಸಂಘರ್ಷ ಪೀಡಿತ ಸುಡಾನ್​ನಿಂದ ಭಾರತೀಯರ ಸ್ಥಳಾಂತರ ಮಾಡುವ ಕಾರ್ಯ ಆರಂಭಿಸಲಾಗಿದೆ. ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರು ದೇಶಕ್ಕೆ ಬಂದ ನಂತರ ತಮ್ಮ ರಾಜ್ಯಗಳಿಗೆ ಕರೆ ತರಲು ಹಲವಾರು ರಾಜ್ಯಗಳು ಹೆಲ್ಪ್ ಡೆಸ್ಕ್‌ಗಳನ್ನು ತೆರೆದಿವೆ. ಜೊತೆಗೆ ಉಚಿತ ಪ್ರಯಾಣ ಮತ್ತು ವಸತಿಯಂತಹ ಸಹಾಯದ ಬಗ್ಗೆ ಘೋಷಿಸಿವೆ.

ಸುಡಾನ್​ನಿಂದ ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸೋಮವಾರದಿಂದ 'ಆಪರೇಷನ್ ಕಾವೇರಿ' ಹೆಸರಲ್ಲಿ ಕೇಂದ್ರ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ. ಭಾರತೀಯ ವಾಯುಪಡೆಯ (IAF) ಎರಡು ಮಿಲಿಟರಿ ಸಾರಿಗೆ ವಿಮಾನಗಳು ಸುಡಾನ್‌ನಿಂದ 530ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿವೆ. ಜೊತೆಗೆ ಭಾರತವು ಜೆಡ್ಡಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದೆ. ಎಲ್ಲಾ ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ಸೌದಿ ಅರೇಬಿಯಾ ನಗರದ ಮೂಲಕ ತವರಿಗೆ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ.

ನೆರವು ಘೋಷಿಸಿದ ರಾಜ್ಯ ಸರ್ಕಾರಗಳು: ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಮಲಯಾಳಿಗರನ್ನು ರಾಜ್ಯಕ್ಕೆ ಕರೆತರಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ಕೇರಳ ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನಿವಾಸಿ ಕೇರಳಿಯರ ವ್ಯವಹಾರಗಳ (ನಾರ್ಕಾ) ಇಲಾಖೆ ಮೂಲಕ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ನಂತರ ಸಹಾಯ ನೀಡಲು ನಿರ್ಧರಿಸಿದೆ ಎಂದು ಸಿಎಂ ಕಚೇರಿ ತಿಳಿಸಿದೆ.

ಉತ್ತರ ಪ್ರದೇಶ ಸರ್ಕಾರ ಬುಧವಾರ ದೆಹಲಿಯ ರೆಸಿಡೆಂಟ್ ಕಮಿಷನರ್ ಕಚೇರಿಯಲ್ಲಿ ಸಹಾಯ ಕೇಂದ್ರವನ್ನು ತೆರೆದಿದೆ. ಸುಡಾನ್‌ನಿಂದ ಬರುವವರ ಸಮಸ್ಯೆಗಳ ಬಗ್ಗೆ ಸಹಾಯಕ ಪರಿಶೀಲನಾ ಅಧಿಕಾರಿ ನೀರಜ್ ಸಿಂಗ್ (89208 08414) ಅಥವಾ ಪ್ರೋಟೋಕಾಲ್ ಸಹಾಯಕ ಆಶಿಶ್ ಕುಮಾರ್ (93134 34088) ಅವರನ್ನು ಸಂಪರ್ಕಿಸಬಹುದು ಎಂದು ಹೆಚ್ಚುವರಿ ವಸತಿ ಆಯುಕ್ತೆ ಸೌಮ್ಯ ಶ್ರೀವಾಸ್ತವ್​ ತಿಳಿಸಿದ್ದಾರೆ.

ಮತ್ತೊಂದೆಡೆ, ರಾಜಸ್ಥಾನ ಸರ್ಕಾರ ಸಹ ತಮ್ಮ ರಾಜ್ಯದವರು ಸುಡಾನ್‌ನಿಂದ ದೆಹಲಿಗೆ ಬಂದಿಳಿದ ನಂತರ ಅವರ ಸಾರಿಗೆ ವೆಚ್ಚವನ್ನು ಭರಿಸಲು ನಿರ್ಧರಿಸಿದೆ. ಅಲ್ಲದೇ, ವಸತಿ ವ್ಯವಸ್ಥೆಯನ್ನೂ ಸರ್ಕಾರ ತೀರ್ಮಾನಿಸಿದೆ. ಸುಡಾನ್‌ನಿಂದ ಹಿಂದಿರುಗಿದ ಎಲ್ಲ ರಾಜಸ್ಥಾನಿಗಳ ವಿಮಾನ, ಬಸ್ ಅಥವಾ ಇನ್ನಾವುದೇ ರೀತಿಯ ಸಾರಿಗೆ ವೆಚ್ಚವನ್ನು ದೆಹಲಿಯಿಂದ ರಾಜಸ್ಥಾನಕ್ಕೆ ತಲುಪುವವರೆಗೆ ಭರಿಸಲಾಗುತ್ತದೆ ಎಂದು ಎಂದು ಖಚಿತಪಡಿಸುತ್ತದೆ ಎಂದು ಸರ್ಕಾರಿ ಸಂಸ್ಥೆಯಾದ ರಾಜಸ್ಥಾನ ಫೌಂಡೇಶನ್‌ನ ಆಯುಕ್ತ ಧೀರಜ್ ಶ್ರೀವಾಸ್ತವ್​ ಹೇಳಿದ್ದಾರೆ.

ಮಧ್ಯಪ್ರದೇಶ ಸರ್ಕಾರ ಕೂಡ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಸುಡಾನ್‌ನಲ್ಲಿ ಸಿಲುಕಿರುವರ ಮಧ್ಯಪ್ರದೇಶದ ಜನರು ಸಹಾಯವಾಣಿ 91-755-2555582ಗೆ ಸಂಪರ್ಕಿಸಬಹುದು ಮತ್ತು ತಮ್ಮ ವಿವರಗಳನ್ನು ಹಂಚಿಕೊಳ್ಳಬಹುದು. ಇದಕ್ಕಾಗಿ ರಾಜ್ಯದ ಗೃಹ ಕಾರ್ಯದರ್ಶಿ ಗೌರವ್ ರಜಪೂತ್ ಅವರನ್ನು ನೋಡಲ್ ಅಧಿಕಾರಿಯಾಗಿ ಸರ್ಕಾರ ನೇಮಿಸಿದೆ.

72 ಗಂಟೆಗಳ ಕದನ ವಿರಾಮ: ಸುಡಾನ್​ನಲ್ಲಿ ಕಳೆದ 12 ದಿನಗಳಿಂದ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಸಂಘರ್ಷ ಏರ್ಪಟ್ಟಿದೆ. ಇದರಲ್ಲಿ ಇದುವರೆಗೆ ಸುಮಾರು 400 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮಾತುಕತೆ ಮೂಲಕ 72 ಗಂಟೆಗಳ ಕದನ ವಿರಾಮ ಘೋಷಿಸಲಾಗಿದೆ. ಇದರಿಂದ ಭಾರತವು ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ. ಸುಡಾನ್ ಅಧಿಕಾರಿಗಳ ಹೊರತಾಗಿ ವಿದೇಶಾಂಗ ಮತ್ತು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯುಎನ್, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಯುಎಸ್ ರಾಷ್ಟ್ರಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದು, ಸ್ಥಳಾಂತರ ಕಾರ್ಯವನ್ನು ಮಾಡುತ್ತಿದೆ.

ಇದನ್ನೂ ಓದಿ: ಆಪರೇಷನ್​ ಕಾವೇರಿ: ಸುಡಾನ್​ನಿಂದ 534 ಜನರ ಸ್ಥಳಾಂತರ: ಜೆಡ್ಡಾಕ್ಕೆ ಬಂದಿಳಿದ 3 ತಂಡಗಳು, ಶೀಘ್ರ ಭಾರತಕ್ಕೆ ಪ್ರಯಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.