ETV Bharat / bharat

ಅನಿಲ್ ದೇಶ್​​ಮುಖ್ ಭ್ರಷ್ಟಾಚಾರ ಪ್ರಕರಣ: ಸಚಿನ್ ವಾಜೆ ಪ್ರತಿವಾದಿಯನ್ನಾಗಿಸಲು ಮನವಿ - Sachin Waze

ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪ ಎದುರಿಸುತ್ತಿರುವ ಮಾಜಿ ಗೃಹ ಸಚಿವ ಅನಿಲ್ ದೇಶ್​​ಮುಖ್ ವಿರುದ್ಧ ಸಿಬಿಐ ಸಲ್ಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್‌ ವಿಚಾರಣೆ ನಡೆಸಿತು.

jayashree
jayashree
author img

By

Published : Jun 21, 2021, 9:03 PM IST

ಮುಂಬೈ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್​​ಮುಖ್ ವಿರುದ್ಧ ಸಿಬಿಐ ಸಲ್ಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್‌ ಇಂದು ವಿಚಾರಣೆ ನಡೆಸಿತು.

ಇಂದಿನ ವಿಚಾರಣೆಯನ್ನು ಮೂಲ ದೂರುದಾರರಿಂದ ನಡೆಸಲಾಗಿದ್ದು, ಡಾ.ಜಯಶ್ರೀ ಪಾಟೀಲ್ ಅವರ ವಾದದಿಂದ ವಿಚಾರಣೆ ಪ್ರಾರಂಭವಾಯಿತು. ರಾಜ್ಯ ಸರ್ಕಾರದ ಅರ್ಜಿ ಅಸಮರ್ಪಕವಾಗಿದೆ ಎಂದು ಜಯಶ್ರೀ ಪಾಟೀಲ್ ನ್ಯಾಯಾಲಯದಲ್ಲಿ ಹೇಳಿದರು. ಜೊತೆಗೆ ಅರ್ಜಿಯನ್ನು ವಜಾಗೊಳಿಸುವಂತೆ ಅವರು ಹೈಕೋರ್ಟ್‌ಗೆ ಕೇಳಿಕೊಂಡ್ರು.

ಪ್ರಕರಣದ ತನಿಖೆ ನಡೆಸುತ್ತಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಪ್ರತಿವಾದಿಯನ್ನಾಗಿ ಮಾಡಬೇಕೆಂದು ಡಾ. ಜಯಶ್ರೀ ಪಾಟೀಲ್ ಒತ್ತಾಯಿಸಿದರು.ಈ ಮಧ್ಯೆ ಸಚಿನ್ ಅವರು ಎನ್ಐಎ ನ್ಯಾಯಾಲಯಕ್ಕೆ ಬರೆದ ಪತ್ರವನ್ನು ಜಯಶ್ರೀ ಪಾಟೀಲ್ ಅವರು ಹೈಕೋರ್ಟ್​ಗೆ ಸಲ್ಲಿಸಿದ್ದಾರೆ.

ಸಚಿನ್ ವಾಜೆ ಅವರನ್ನು ಸಹ ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ವಾದಿಸಿದ್ದಾರೆ . ಆದರೆ, ರಾಜ್ಯ ಸರ್ಕಾರದ ಪರ ವಕೀಲರು ಈ ಬೇಡಿಕೆಯನ್ನು ವಿರೋಧಿಸಿದರು.

ಇಡೀ ಪ್ರಕರಣ ಭ್ರಷ್ಟಾಚಾರಕ್ಕೆ ಸಂಬಂಧಿಸಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಸಾಲಿಟರಿ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಮೀರಿ ಸಿಬಿಐ ತನಿಖೆ ನಡೆಸುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪವನ್ನು ಮೆಹ್ತಾ ತಳ್ಳಿ ಹಾಕಿದ್ದು, ತನಿಖೆಗೆ ರಾಜ್ಯ ಸರ್ಕಾರ ಆಕ್ಷೇಪಿಸಲು ಕಾರಣವೇನು? ಪ್ರತಿ ರಾಜ್ಯವು ಕೇಂದ್ರ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಮೆಹ್ತಾ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.