ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಹಾಲು ಉತ್ಪಾದನಾ ಜಿಲ್ಲೆ ಎಂಬ ಕಾರಣಕ್ಕಾಗಿ ಪುಲ್ವಾಮಾದಲ್ಲಿ ಈಗ 'ಮಿಲ್ಕ್ ಎಟಿಎಂ' ಸ್ಥಾಪನೆ ಮಾಡಲಾಗಿದ್ದು, ಇನ್ಮುಂದೆ ಈ ಜಿಲ್ಲೆಗೆ ಈ ಮುಖಾಂತರ ಮತ್ತೊಂದು ಹಿರಿಮೆ ಬರಲಿದೆ.
ಪುಲ್ವಾಮಾದ ಮುಖ್ಯ ಪಟ್ಟಣದ ಚತ್ಪೋರಾ ಪ್ರದೇಶದ ಶಹೀದ್ ಪಾರ್ಕ್ ಬಳಿ ವೃತ್ತಿಪರ ಹಾಲು ಸರಬರಾಜುದಾರ ಶಬೀರ್ ಅಹ್ಮದ್ ವಾಗೆ ಅವರು ಪ್ರಾಣಿ ಮತ್ತು ಕುರಿ ಸಾಕಾಣಿಕೆ ಇಲಾಖೆಯ ಸಹಯೋಗದೊಂದಿಗೆ ಈ ಯಂತ್ರವನ್ನು ಸ್ಥಾಪನೆ ಮಾಡಿದ್ದಾರೆ.
ಈ ಉದ್ಯಮವನ್ನು ಸ್ಥಾಪಿಸಲು ಸಹಾಯಕ್ಕಾಗಿ ವಾಗೆ ನಮ್ಮನ್ನು ಸಂಪರ್ಕಿಸಿದ್ದರು. ಇದನ್ನು ಸಮಗ್ರ ಡೈರಿ ಅಭಿವೃದ್ಧಿ ಯೋಜನೆಯಡಿ ಮಾಡಲಾಗಿದೆ ಎಂದು ಮುಖ್ಯ ಪಶುಸಂಗೋಪನಾ ಅಧಿಕಾರಿ ಡಾ.ಮೊಹಮ್ಮದ್ ಹುಸೇನ್ ವಾನಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಲು ಉತ್ಪಾದನೆಯಲ್ಲಿ ಪುಲ್ವಾಮಾ ಪ್ರಮುಖ ಜಿಲ್ಲೆಯಾಗಿರುವುದರಿಂದ ಈ ಎಟಿಎಂ ಸ್ಥಾಪನೆ ಮಾಡಿದ್ದೇವೆ. ಪಟ್ಟಣದಲ್ಲಿ ಹಾಲಿನ ಕೊರತೆಯಿಲ್ಲ ಮತ್ತು ಜನರು ಎಟಿಎಂ ಮಾದರಿಯಲ್ಲಿ ಶುದ್ಧ ಹಾಲನ್ನು ಪಡೆಯಬಹುದು ಎಂದು ಅವರು ಹೇಳಿದರು.
ಈ ಯಂತ್ರ 500 ಲೀಟರ್ ಹಾಲನ್ನು ಶೇಖಕರಣೆ ಮಾಡಲಿದೆ. ಇನ್ನು ಪುಲ್ವಾಮಾ ಜಿಲ್ಲೆಯ ಇತರ ಪಟ್ಟಣಗಳಲ್ಲಿ ಹೆಚ್ಚಿನ ಹಾಲು ಎಟಿಎಂಗಳನ್ನು ಸ್ಥಾಪಿಸಲು ಪಶುಸಂಗೋಪನಾ ಇಲಾಖೆ ಎದುರು ನೋಡುತ್ತಿದೆ.