ETV Bharat / bharat

ಮೂತ್ರ ವಿಸರ್ಜನೆ ವಿಚಾರಕ್ಕೆ ಗಲಾಟೆ: ಯುವಕನ ಹತ್ಯೆ

ರಾಷ್ಟ್ರ ರಾಜಧಾನಿಯಲ್ಲಿ ಕಿರಾಣಿ ಅಂಗಡಿ ಮುಂದೆ ಮೂತ್ರ ವಿಸರ್ಜನೆ ಮಾಡಿದ ವಿಚಾರಕ್ಕೆ ಮಾಲೀಕ ಮತ್ತು ಯುವಕರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಯುವಕ ಕೊಲೆಗೀಡಾಗಿದ್ದಾನೆ.

Fight over urination outside the shop
ಮೂತ್ರ ವಿಸರ್ಜನೆ ವಿಚಾರಕ್ಕೆ ಗಲಾಟೆ
author img

By

Published : Nov 8, 2020, 10:26 AM IST

ನವದೆಹಲಿ: ಆಗ್ನೇಯ ದೆಹಲಿಯ ಅಮರ್ ಕಾಲೋನಿ ಪೊಲೀಸ್ ಠಾಣೆ ಪ್ರದೇಶದ ಕಿರಾಣಿ ಅಂಗಡಿಯ ಹೊರಗೆ ಮೂತ್ರ ವಿಸರ್ಜನೆ ಮಾಡಿದ ವಿಚಾರಕ್ಕೆ ಅಂಗಡಿ ಮಾಲೀಕ ಮತ್ತು ಯುವಕರ ನಡುವೆ ಗಲಾಟೆ ಆಗಿದ್ದು, ಈ ವೇಳೆ ಓರ್ವ ಯುವಕನನ್ನು ಹತ್ಯೆ ಮಾಡಲಾಗಿದೆ.

ಏನಿದು ಘಟನೆ?

ಜಗಜೀತ್ ಎಂಬ ವ್ಯಕ್ತಿ, ಕಿರಾಣಿ ಅಂಗಡಿಯ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ಅಂಗಡಿಯ ಶಟರ್ ಮುಚ್ಚಲ್ಪಟ್ಟಿತು, ಆದರೆ ಅದರ ಮಾಲೀಕರು ಅಂಗಡಿಯ ಹೊರಗಡೆ ನಿಂತಿದ್ದರು. ಈ ವಿಷಯದ ಬಗ್ಗೆ ಇಬ್ಬರ ನಡುವೆ ತೀವ್ರ ಗಲಾಟೆ ನಡೆದಿದೆ. ಸ್ಥಳದಿಂದ ಅಂಗಡಿ ಮಾಲೀಕರು ಹೊರಟುಹೋದರು ಜಗಜೀತ್ ಸ್ವಲ್ಪ ಸಮಯದ ನಂತರ ಸ್ನೇಹಿತರಾದ ಅಮಿತ್, ರಮಣ್​ದೀಪ್, ಗುರ್ವಿಂದರ್, ಜಸ್ಪ್ರೀತ್, ಜಗತ್ ಸಿಂಗ್, ಕರಣ್ ಮತ್ತು ಅಮನ್​ದೀಪ್ ಅವರೊಂದಿಗೆ ಬಂದು ಅಂಗಡಿ ಮಾಲೀಕರಾದ ವಿಮಲ್ ಮತ್ತು ವಿನಯ್ ಅವರೊಂದಿಗೆ ಜಗಳ ನಡೆಸಿದ್ದಾನೆ.

ಜಗಳದ ಸಮಯದಲ್ಲಿ ಜನ ಸೇರಿದ್ದಾರೆ, ಅವರ ಸಹಾಯದಿಂದ ವಿಮಲ್ ಮತ್ತು ವಿನಯ್, ಜಗಜೀತ್ ಅವರನ್ನು ಹಿಡಿದಿದ್ದಾರೆ. ಈ ವೇಳೆ ಅವನ ಇತರ ಸ್ನೇಹಿತರು ಸ್ಥಳದಿಂದ ಓಡಿಹೋಗಿದ್ದಾರೆ. ಸ್ಥಳದಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿ, ಅಮನ್​ದೀಪ್ ಇದ್ದಕ್ಕಿದ್ದಂತೆ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಅವನ ಸ್ನೇಹಿತರು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ, ತೀಕ್ಷ್ಣವಾದ ಆಯುಧದಿಂದ ಯುವಕನ ಬೆನ್ನಿನಲ್ಲಿ ಗಂಭೀರ ಗಾಯಗಳಾಗಿರುವುದು ಕಂಡುಬಂದಿದೆ. ಈ ಜಗಳದ ಸಮಯದಲ್ಲಿ ವಿಮಲ್, ವಿನಯ್, ಸುರ್ಜೀತ್ ಮತ್ತು ಜಗಜೀತ್​ಗೂ ಗಾಯಗಳಾಗಿವೆ. ಪ್ರಕರಣ ಸಂಬಂಧ ಪೊಲೀಸರು ಅಂಗಡಿಯ ಮಾಲೀಕರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.