ಕ್ಯಾಲಿಫೋರ್ನಿಯಾ: ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತನ್ನ ಸಹೋದರ ಪ್ರಕರಣದಲ್ಲಿ ತಾಳ್ಮೆ ಪ್ರದರ್ಶಿಸಿ, ಸಾಮಾಜಿಕ ಜಾಲತಾಣದಲ್ಲಿ ಕವಿತೆ ಬರೆದಿದ್ದಾರೆ.

ಸಹೋದರ ಸುಶಾಂತ್ ಸಾವಿನ ಹಿಂದಿನ ರಹಸ್ಯವನ್ನು ಬಗೆಹರಿಸಲು ನಮ್ಮ ಕುಟುಂಬ ಕಾಯುತ್ತಿದೆ. ತಾಳ್ಮೆಯ ಅಕ್ಷರಶಃ ಅರ್ಥ ಕೋಪ ಅಥವಾ ಅಸಮಾಧಾನ, ತೊಂದರೆ ಅಥವಾ ಸಂಕಟಗಳನ್ನು ಸ್ವೀಕರಿಸುವ ಅಥವಾ ಸಹಿಸಿಕೊಳ್ಳುವ ಸಾಮರ್ಥ್ಯ ಎಂದು ಬರೆದಿದ್ದಾರೆ. ನಾವು ನಿಸಹಾಯಕರಾಗಿದ್ದೇವೆ #TruthAboutSushant ಎಂದು ಶ್ವೇತಾ ಟ್ವಿಟರ್ನಲ್ಲಿ ಬರೆದಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ಡಿಸೈನರ್ ಶ್ವೇತಾ ತನ್ನ ದಿವಂಗತ ಸಹೋದರನ ಸಾವಿಗೆ ಕಾರಣಗಳನ್ನು ಕಂಡುಕೊಳ್ಳವ ಪ್ರಯತ್ನದಲ್ಲಿರುವಾಗ ತಮ್ಮ ನೋವನ್ನು ಕವಿತೆ ಮೂಲಕ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ತನಿಖೆ ಕಾರ್ಯವನ್ನು ಒಂದೆರಡು ತಿಂಗಳ ನಂತರ ಕೇಂದ್ರ ತನಿಖಾ ದಳಕ್ಕೆ ವಹಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಪ್ರಕರಣದ ಕುರಿತು ಹೆಚ್ಚು ಮಾಹಿತಿ ಬಹಿರಂಗವಾಗಿಲ್ಲ. 34 ವರ್ಷದ ನಟ ಕಳೆದ ವರ್ಷ ಜೂನ್‌ನಲ್ಲಿ ಅಂದ್ರೆ ಒಂಬತ್ತು ತಿಂಗಳ ಹಿಂದೆ ತನ್ನ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ.