ETV Bharat / bharat

ಕೋವಿಡ್​ ಹಾವಳಿಯ ನಡುವೆ ಕೇರಳದಲ್ಲಿ ಎಸ್​ಎಸ್ಎಲ್​ಸಿ, ಪ್ಲಸ್​ ಟು ಪರೀಕ್ಷೆಗಳು ಪ್ರಾರಂಭ

author img

By

Published : Apr 8, 2021, 3:59 PM IST

ಇಂದಿನಿಂದ ಕೇರಳದಲ್ಲಿ ಎಸ್​ಎಸ್ಎಲ್​ಸಿ, ಪ್ಲಸ್​ ಟು ವಾರ್ಷಿಕ ಪರೀಕ್ಷೆಗಳು ಆರಂಭವಾಗಿವೆ. ಕೋವಿಡ್​ ಬಿಕ್ಕಟ್ಟಿನ ಮಧ್ಯೆಯೇ ಪರೀಕ್ಷೆಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ.

SSLC, Plus Two exams exams begin in Kerala
ಕೇರಳದಲ್ಲಿ ಎಸ್ಸೆಸೆಲ್ಸಿ, ಪ್ಲಸ್​ ಟು ಪರೀಕ್ಷೆಗಳು ಪ್ರಾರಂಭ

ತಿರುವನಂತಪುರಂ : ವಿಧಾನಸಭಾ ಚುನಾವಣೆ ಹಿನ್ನೆಲೆ ಮುಂದೂಡಲ್ಪಟ್ಟಿದ್ದ ಕೇರಳ ಎಸ್​ಎಸ್ಎಲ್​ಸಿ ಮತ್ತು ಪ್ಲಸ್​ ಟು (ಪಿಯುಸಿ) ವಾರ್ಷಿಕ ಪರೀಕ್ಷೆಗಳು ಇಂದಿನಿಂದ ಆರಂಭವಾಗಿವೆ.

ಪ್ಲಸ್ ಟು ಪರೀಕ್ಷೆಗಳು ಬೆಳಗ್ಗೆ 9: 40 ಕ್ಕೆ ಪ್ರಾರಂಭವಾಗಿ ಬೆಳಗ್ಗೆ 11: 30 ಕ್ಕೆ ಕೊನೆಗೊಳ್ಳಲಿದ್ದು, ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಮಧ್ಯಾಹ್ನ 1:40 ರಿಂದ 3: 30 ರವರೆಗೆ ನಡೆಯಲಿದೆ. ಎಸ್ಸೆಸೆಲ್ಸಿ ಪರೀಕ್ಷೆಗಳು ಏಪ್ರಿಲ್ 29 ರೊಳಗೆ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ಏಪ್ರಿಲ್ 26 ರೊಳಗೆ ಕೊನೆಗೊಳ್ಳಲಿವೆ. ಪ್ರಶ್ನೆ ಪತ್ರಿಕೆಗಳನ್ನು ಬೆಳಗ್ಗೆ 6 ಗಂಟೆಯೊಳಗೆ ಶಾಲೆಗಳಿಗೆ ರವಾನಿಸಲಾಗುತ್ತದೆ. ಪ್ಲಸ್ ಟು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಬ್ಲಾಕ್ ಸಂಪನ್ಮೂಲ ಕೇಂದ್ರಗಳ ಮೂಲಕ ರವಾನಿಸಲಾಗುತ್ತದೆ.

ಓದಿ : ಉತ್ತರಾಖಂಡ: ಐಐಟಿ ರೂರ್ಕಿಯ 88 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಕಳೆದ ವರ್ಷದಂತೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪರೀಕ್ಷೆಗಳನ್ನು ನಡೆಸಲಾಗ್ತಿದೆ. ಜನಸಂದಣಿ ತಪ್ಪಿಸಲು ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ವೃತ್ತಿಪರ ಉನ್ನತ ಮಾಧ್ಯಮಿಕ ಶಿಕ್ಷಣ (ವಿಹೆಚ್​ಎಸ್​ಇ) ಪರೀಕ್ಷೆಗಳು ಇತರ ಪರೀಕ್ಷೆಗಳೊಂದಿಗೆ ನಡೆಯಲಿದೆ. ಕೋವಿಡ್ ಹಿನ್ನೆಲೆ ಈ ಶೈಕ್ಷಣಿಕ ವರ್ಷದಲ್ಲಿ ಸರಿಯಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗಿಲ್ಲ. ಜೂನ್ 2020ರಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾದರೂ, ಸರಿಯಾಗಿ ತರಗತಿಗಳು ಪ್ರಾರಂಭವಾಗಿದ್ದು ಮಾತ್ರ 1 ಜನವರಿ 2021 ರಿಂದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.