ಸಿಬ್ಬಂದಿ ನೇಮಕಾತಿ ಆಯೋಗದಿಂದ ಕ್ಲರಿಕಲ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗಳು ಇವಾಗಿವೆ. ಒಟ್ಟಾರೆ 99 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ. ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್ 3 ಆಗಿದೆ.
ಹುದ್ದೆ ವಿವರ: ಎಸ್ಎಸ್ಸಿಯಿಂದ ಈ ಕೆಳಕಂಡ ಇಲಾಖೆಯಲ್ಲಿ ಖಾಲಿ ಇರುವ 99 ಕ್ಲಾರಿಕಲ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
- ಕೇಂದ್ರ ಸೆಕ್ರೆಟರಿಯೇಟ್ ಕ್ಲರಿಕಲ್ ಸರ್ವೀಸ್
- ರೈಲ್ವೇ ಬೋರ್ಡ್ ಸೆಕ್ರೆಟರಿಯೇಟ್ ಕ್ಲರಿಕಲ್ ಸರ್ವೀಸ್
- ಶಸ್ತ್ರಾ ಸೇನೆ ಮುಖ್ಯ ಕಚೆರಿಯ ಕ್ಲರಿಕಲ್ ಸರ್ವೀಸ್
- ಭಾರತ ಚುನಾವಣಾ ಆಯೋಗ
- ಕೇಂದ್ರ ಆಡಳಿತಾತ್ಮಕ ಟ್ರಿಬ್ಯೂನಲ್
- ಕೇಂದ್ರ ಭಾಷಾಂತಾರ ಬ್ಯೂರೊ
ವಿಶೇಷ ಸೂಚನೆ: ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಮುಂಬಡ್ತಿಯನ್ನು ಪಡೆಯಬೇಕು ಎಂಬ ಇಚ್ಛೆ ಹೊಂದಿರುವ ಕೆಳ ದರ್ಜೆಯ ಗುಮಾಸ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ದೆಹಲಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಕೇಂದ್ರ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 50 ವರ್ಷ ದಾಟಿರಬಾರದು. ಪರಿಶಿಷ್ಟ ಜಾತಿ, ಪ. ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ವೇತನ: 25,500 – 81,100 ರೂ.ವರೆಗೆ ಮಾಸಿಕ ವೇತನ ನಿಗದಿಸಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಳಿಕ, ಹಾರ್ಡ್ ಕಾಪಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕಿದೆ. ಸೆಪ್ಟಂಬರ್ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೆಯ ದಿನಾಂಕ ಅಕ್ಟೋಬರ್ 3 ಆಗಿದೆ. ಹಾರ್ಡ್ ಕಾಪಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್ 13 ಆಗಿದೆ.
ಹಾರ್ಡ್ ಕಾಪಿ ಕಳುಹಿಸುವ ವಿಳಾಸ.. ದಿ ರಿಜನಲ್ ಡೈರೆಕ್ಟರ್, ಸ್ಟಾಫ್ ಸೆಲೆಕ್ಷನ್ ಕಮಿಷನ್ (ನಾರ್ಥನ್ ರಿಜನ್), ಬ್ಲಾಕ್ ನಂ. 12, ಸಿಜಿಒ ಕಾಂಪ್ಲೆಕ್ಸ್, ಲೋದಿ ರೋಡ್, ನವದೆಹಲಿ- 110003
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಆಕಾಂಕ್ಷಿಗಳು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ssc.nic.in ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: RBI Recruitment: 450 ಅಸಿಸ್ಟೆಂಟ್ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ; ಪದವಿ ಆಗಿದ್ರೆ ಅರ್ಜಿ ಸಲ್ಲಿಸಿ