ತಿರುಪತಿ(ಆಂಧ್ರಪ್ರದೇಶ): ಜನವರಿ ತಿಂಗಳಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವವರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್ಲೈನ್ನಲ್ಲಿ ವಿಶೇಷ ದರ್ಶನದ ಟಿಕೆಟ್ಗಳನ್ನು ಬಿಡುಗಡೆ ಮಾಡಿದ್ದು, ಕೇವಲ 80 ನಿಮಿಷದಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ವಿಶೇಷ ದರ್ಶನಕ್ಕಾಗಿ ಒಂದು ಟಿಕೆಟ್ನ ಬೆಲೆ 300 ರೂಪಾಯಿ ಇದ್ದು, ಸುಮಾರು 4 ಲಕ್ಷದ 60 ಸಾವಿರ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ. ಜನವರಿಯಲ್ಲಿ ವೈಕುಂಠ ಏಕಾದಶಿಯ ಕಾರಣದಿಂದಾಗಿ ಹೆಚ್ಚಿನ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸರ್ವದರ್ಶನಂ ಟಿಕೆಟ್ಗಳನ್ನು ಇದೇ ತಿಂಗಳ 31ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ತಿರುಮಲದಲ್ಲಿ ವಸತಿ ಸೌಕರ್ಯದ ಮಾಹಿತಿಯನ್ನು ಇದೇ ತಿಂಗಳ 27ನೇ ತಾರೀಕಿನಂದು ಬೆಳಗ್ಗೆ 9 ಗಂಟೆಗೆ ಟಿಟಿಡಿ ಪ್ರಕಟ ಮಾಡಲಿದೆ. ಜನವರಿ 11ರಿಂದ 14ರವರೆಗೆ ವಸತಿಗಾಗಿ ಬುಕ್ ಮಾಡಬಹುದಾಗಿದೆ. ಇದಕ್ಕೆ ಟಿಕೆಟ್ ಕೊಳ್ಳುವ ವೇಳೆಯೇ ವಸತಿಗಾಗಿ ಮುಂಗಡವಾಗಿ ಆನ್ಲೈನ್ನಲ್ಲಿ ಬುಕ್ ಮಾಡಬಹುದಾಗಿದೆ.
ಟಿಕೆಟ್ ಬುಕ್ ಮಾಡುವ ವೇಳೆಯೇ ಸಮಯ ಮತ್ತು ದಿನಾಂಕವನ್ನು ನೀಡಲಾಗುತ್ತದೆ. ನಿಗದಿಪಡಿಸಿದ ಸಮಯದಲ್ಲೇ ಭಕ್ತರು ಶ್ರೀವೆಂಕಟೇಶ್ವರನ ದರ್ಶನ ಪಡೆಯಬಹುದಾಗಿದೆ.
ಇದನ್ನೂ ಓದಿ: ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋರಿಕೆ