ಶ್ರೀನಗರ(ಜಮ್ಮುಕಾಶ್ಮೀರ) : ಉತ್ತರಭಾರತದ ಜನತೆ ಭಾರಿ ಹಿಮಪಾತಕ್ಕೆ ಅಕ್ಷರಶಃ ತತ್ತರಿಸಿದ್ದಾರೆ. ಇಂದು ಶ್ರೀನಗರದಲ್ಲಿ ದಾಖಲಾದ ತಾಪಮಾನವು 30 ವರ್ಷಗಳ ಹಿಂದೆ ದಾಖಲಾಗಿದ್ದ ತಾಪಮಾನವನ್ನೂ ಬ್ರೇಕ್ ಮಾಡಿದೆ.
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ -8.8 ಡಿಗ್ರಿ ತಾಪಮಾನ ದಾಖಲಾಗಿದೆ. ಆ ಮೂಲಕ 1991ರ ದಾಖಲೆ ಮುರಿದಿದೆ. 30 ವರ್ಷಗಳ ಹಿಂದೆ ಕಣಿವೆ ರಾಜ್ಯದಲ್ಲಿ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿತ್ತು.
ಜಿಲ್ಲೆಯ 17 ಪ್ರದೇಶಗಳಲ್ಲಿ -8 ಡಿಗ್ರಿಗಿಂತಲೂ ಕಡಿಮೆ ತಾಪಮಾನ ದಾಖಲಾಗಿದೆ. ಸತತ 9 ದಿನಗಳಿಂದ ಇದೇ ರೀತಿಯ ವಾತಾವರಣವಿದೆ. ಫೆಬ್ರವರಿ 1ರಿಂದ 3ರ ಅವಧಿಯಲ್ಲಿ ಈ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.