ETV Bharat / bharat

ಶ್ರೀನಗರ: ಯುವತಿ ಮೇಲೆ ಆ್ಯಸಿಡ್ ಎರಚಿದ ಆರೋಪಿಗಳ ಹೇಳಿಕೆ ದಾಖಲು - ಶ್ರೀನಗರದ ವಂಟ್ಪೋರಾ ಪ್ರದೇಶ

ಶ್ರೀನಗರದಲ್ಲಿ ಬಾಲಕಿಯೊಬ್ಬಳ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಈ ಪ್ರಕರಣದ ಆರೋಪಿಗಳ ಹೇಳಿಕೆಯನ್ನು ಅಲ್ಲಿನ ನ್ಯಾಯಾಲಯ ಇಂದು ದಾಖಲಿಸಿಕೊಂಡಿದೆ.

Srinagar acid attack case
Etv Bharatಶ್ರೀನಗರ ಆಸಿಡ್ ದಾಳಿ ಪ್ರಕರಣ:ಆರೋಪಿಯ ಹೇಳಿಕೆ ದಾಖಲಿಸಕೊಂಡ ಶ್ರೀನಗರ ನ್ಯಾಯಾಲಯ
author img

By

Published : Dec 26, 2022, 4:28 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಳೆದ ಫೆಬ್ರವರಿ ತಿಂಗಳಲ್ಲಿ ಶ್ರೀನಗರದ ಬಾಲಕಿಯ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ಪ್ರಮುಖ ಆರೋಪಿಯ ಹೇಳಿಕೆಯನ್ನು ಇಲ್ಲಿನ ಕೋರ್ಟ್‌ ದಾಖಲಿಸಿಕೊಂಡಿದೆ. ಶ್ರೀನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗೆ 55 ಪ್ರಶ್ನೆಗಳನ್ನು ಕೇಳಿದ್ದು, ಹೇಳಿಕೆ ದಾಖಲಿಸಿಕೊಂಡಿತು.

ಪ್ರಮುಖ ಆರೋಪಿ ಸಜ್ಜದ್ ಅಹ್ಮದ್ ರಾಥರ್ ಪರ ವಕೀಲ ಅಮೀರ್ ಮಸೂದಿ ಮತ್ತು ಇತರ ಆರೋಪಿಗಳ ವಕೀಲ ವಸೀಮ್ ಅಹ್ಮದ್ ಕೋರ್ಟ್‌ನಲ್ಲಿ ಹಾಜರಿದ್ದರು. ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ವಿಚಾರಣೆ ಡಿಸೆಂಬರ್‌ 29ಕ್ಕೆ ನಡೆಯಲಿದೆ.

ಪ್ರಕರಣದ ವಿವರ: ಫೆ.1 ರಂದು ಶ್ರೀನಗರದ ವಂಟ್ಪೋರಾ ಪ್ರದೇಶದಲ್ಲಿ 24 ವರ್ಷದ ಯುವತಿಯ ಮೇಲೆ ಆಕೆಯ ಮನೆಯ ಹೊರಗೆ ಆ್ಯಸಿಡ್ ದಾಳಿ ನಡೆದಿತ್ತು. ಆಕೆಯ ಮುಖದ ಮೇಲೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಆ್ಯಸಿಡ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅಂಗಡಿಯನ್ನು ಸೀಲ್ ಮಾಡಲಾಗಿತ್ತು.

ಪ್ರಾಥಮಿಕ ತನಿಖೆ ಮತ್ತು ತಾಂತ್ರಿಕ ವಿಶ್ಲೇಷಣೆಯ ನಂತರ, ಪೊಲೀಸ್ ವರಿಷ್ಠಾಧಿಕಾರಿ ರಾಜಾ ಜುಹೈಬ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ), ಶ್ರೀನಗರದ ಈದ್ಗಾ ಪ್ರದೇಶದ ಸಂತ್ರಸ್ತೆಯು ಆರೋಪಿಯ ಮದುವೆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಳು. ಇದರಿಂದ ಆರೋಪಿಗಳು ಕೋಪಗೊಂಡು ದುಷ್ಕೃತ್ಯ ಎಸಗಿದ್ದರು ಎಂದು ತಿಳಿಸಿದ್ದರು.

ಪೊಲೀಸ್‌ ತನಿಖೆಯಲ್ಲಿ ಫೆಬ್ರವರಿ 1ರಂದು ಆರೋಪಿಯು ಕೆಲಸದಿಂದ ವಿರಾಮ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಸಂತ್ರಸ್ತೆ ಕೆಲಸ ಮಾಡುವ ಸ್ಥಳಕ್ಕೆ ಹೋಗಿದ್ದ. ಆಕೆ ಮನೆಗೆ ಮರಳುತ್ತಿದ್ದುದನ್ನು ಗಮನಿಸಿ ಸಂಜೆ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಮೂರು ವಾರಗಳಲ್ಲಿ 1,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಇದನ್ನೂ ಓದಿ: ಸುರತ್ಕಲ್‌ ಜಲೀಲ್​ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.