ETV Bharat / bharat

Sri Lankan fuel crisis: ತಿರುವನಂತಪುರಂ, ಕೊಚ್ಚಿ ವಿಮಾನ ನಿಲ್ದಾಣಗಳಿಂದ ಸಹಾಯ ಹಸ್ತ - Thiruvananthapuram airport

ಶ್ರೀಲಂಕಾದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದ್ದು, ಈ ಹಿನ್ನೆಲೆ ತಿರುವನಂತಪುರಂ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳು ಇಂಧನ ತುಂಬಿಸಲು ಸಹಾಯ ಹಸ್ತ ನೀಡುತ್ತಿವೆ. ಇಲ್ಲಿಯ ತನಕ ಒಟ್ಟು 90 ವಿಮಾನಗಳು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡಿವೆ.

Thiruvananthapuram airport
ವಿಮಾನ ನಿಲ್ದಾಣಗಳಿಂದ ಸಹಾಯ ಹಸ್ತ
author img

By

Published : Jul 12, 2022, 8:00 PM IST

ತಿರುವನಂತಪುರಂ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆ ವಿಮಾನಯಾನ ಕಾರ್ಯಾಚರಣೆಗೆ ಅಡೆತಡೆ ಉಂಟಾಗಿದೆ. ಹೀಗಾಗಿ ತಿರುವನಂತಪುರಂ ಮತ್ತು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಶ್ರೀಲಂಕಾದ ವಿಮಾನಯಾನ ಉದ್ಯಮಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ಕೊಲಂಬೊಗೆ ಹತ್ತಿರವಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿರುವ ತಿರುವನಂತಪುರಂ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳು ಅಲ್ಲಿಂದ ಇತರ ದೇಶಗಳಿಗೆ ತೆರಳುವ ವಿಮಾನಗಳಿಗೆ ತಾಂತ್ರಿಕ ಲ್ಯಾಂಡಿಂಗ್ ಮಾಡಲು ಮತ್ತು ಇಂಧನ ತುಂಬಲು ಸಹಾಯ ಮಾಡುತ್ತಿವೆ.

ಇಲ್ಲಿಯವರೆಗೆ ಒಟ್ಟು 90 ವಿಮಾನಗಳು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡಿವೆ. ಶ್ರೀಲಂಕಾ ಏರ್​ಲೈನ್ಸ್​​ನ 61 ವಿಮಾನಗಳು ಮತ್ತು ಇಂಟರ್​ನ್ಯಾಷನಲ್​​ ಏರ್​ಲೈನ್​​​ನ 29 ವಿಮಾನಗಳು ಇಂಧನ ತುಂಬಿಸಿಕೊಂಡಿವೆ. ಶ್ರೀಲಂಕಾ ಏರ್‌ಲೈನ್ಸ್ ವಿಮಾನಗಳು ಕೊಲಂಬೊದಿಂದ ಫ್ರಾಂಕ್‌ಫರ್ಟ್, ಪ್ಯಾರಿಸ್ ಮತ್ತು ಮೆಲ್ಬೋರ್ನ್ ಗೆ ತೆರಳುವ ವಿಮಾನಗಳು ತಿರುವನಂತಪುರಂನಲ್ಲಿ ಇಂಧನ ತುಂಬಿಸುತ್ತಿವೆ. ಅಷ್ಟೇ ಅಲ್ಲದೇ ಫ್ಲೈ ದುಬೈ, ಏರ್ ಅರೇಬಿಯಾ, ಗಲ್ಫ್ ಏರ್ ಮತ್ತು ಓಮನ್ ಏರ್ ವಿಮಾನಗಳು ತಿರುವನಂತಪುರಂನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿವೆ.

ಶ್ರೀಲಂಕಾ ಏರ್​ಲೈನ್ಸ್​​ ವಿಮಾನ
ಶ್ರೀಲಂಕಾ ಏರ್​ಲೈನ್ಸ್​​ ವಿಮಾನ

ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಲು ಮತ್ತು ತಾಂತ್ರಿಕ ಲ್ಯಾಂಡಿಂಗ್‌ಗೆ 1 ಲಕ್ಷ ರೂ. ಪಡೆಯಲಾಗುತ್ತದೆ. ಆದ್ರೆ ಬಿಕ್ಕಟ್ಟಿನಲ್ಲಿರುವ ನಮ್ಮ ನೆರೆಯ ರಾಷ್ಟ್ರಕ್ಕೆ ಸಹಾಯವನ್ನು ಮಾಡಲು ಯಾವುದೇ ಹಣ ಪಡೆಯಲಾಗುತ್ತಿಲ್ಲ ಎಂದು ಅದಾನಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನ ನಿಲ್ದಾಣಗಳಲ್ಲಿ ಇಂಧನ ತುಂಬುವ ವೆಚ್ಚದಿಂದ ಕೇರಳ ರಾಜ್ಯ ಸರ್ಕಾರವು ಐದು ಪ್ರತಿಶತ ತೆರಿಗೆಯನ್ನು ಗಳಿಸುತ್ತದೆ.

ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 5 ಗಂಟೆಯ ನಡುವಿನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ವಿಮಾನಗಳು ಇಂಧನ ತುಂಬಿಸಿಕೊಳ್ಳಲು ಬರುತ್ತವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಲ್ಯಾಂಡಿಂಗ್ ಮತ್ತು ಇಂಧನ ತುಂಬಲು ಶ್ರೀಲಂಕಾದಿಂದ ವಿಮಾನಗಳಿಗೆ ಆದ್ಯತೆ ನೀಡಲು ವಿಶೇಷ ಕಾಳಜಿಯನ್ನು ವಹಿಸಲಾಗಿದೆ.

ಇದನ್ನೂ ಓದಿ: ಶ್ರೀಲಂಕಾಗೆ ಭಾರತದ ಸಹಾಯಹಸ್ತ: ಪ್ರಾಮುಖ್ಯತೆ ಕಳೆದುಕೊಂಡ ಕುತಂತ್ರಿ ಚೀನಾ

ಕೊಲಂಬೊ ಮತ್ತು ತಿರುವನಂತಪುರಂ ನಡುವಿನ ವಿಮಾನ ಪ್ರಯಾಣ ಸಮಯ ಕೇವಲ 20 ನಿಮಿಷಗಳು. ತಿರುವನಂತಪುರಂನಲ್ಲಿ ಇಂಧನ ತುಂಬಲು ಶ್ರೀಲಂಕಾದಿಂದ ವಿಮಾನಗಳಿಗೆ ಇದು ತುಂಬಾ ಅನುಕೂಲವಾಗಿದೆ. ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತಮ್ಮ ಸಿಬ್ಬಂದಿಯನ್ನು ಬದಲಾಯಿಸಲು ಈ ವಿಮಾನಗಳಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕೊಚ್ಚಿಯಲ್ಲಿ, ಕಳೆದ ವಾರ ಜೂನ್‌ನಿಂದ ಜುಲೈ 11 ರವರೆಗೆ 30 ವಿಮಾನಗಳು ಇಂಧನ ತುಂಬಲು ತಾಂತ್ರಿಕವಾಗಿ ಲ್ಯಾಂಡಿಂಗ್ ಮಾಡಿವೆ. ಕಳೆದ ಮೂರು ದಿನಗಳಲ್ಲಿ ಕೊಲಂಬೊದಿಂದ 9 ವಿಮಾನಗಳು ಕೊಚ್ಚಿಯಲ್ಲಿ ಇಳಿದು 4.75 ಲಕ್ಷ ಲೀಟರ್ ಇಂಧನವನ್ನು ತುಂಬಿಸಿಕೊಂಡಿವೆ. ಹೆಚ್ಚಿನ ವಿಮಾನಗಳನ್ನು ಆಕರ್ಷಿಸಲು, ಕೊಚ್ಚಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (CIAL) ತನ್ನ ತಾಂತ್ರಿಕ ಲ್ಯಾಂಡಿಂಗ್ ಶುಲ್ಕವನ್ನು ಶೇ.25 ರಷ್ಟು ಕಡಿಮೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.