ವಾರಾಣಸಿ: ಶ್ರೀಕೃಷ್ಣ ಹೆಂಗಳೆಯರ ಪ್ರೀತಿಯ ಆರಾಧಕ. ಗೋಪಿಕೆಯರೊಂದಿನ ಗೋಪಾಲನ ಚೇಷ್ಟೇಗಳೇ ಅವರಿಗೆ ಮೋಹಕ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕಾಶಿಯಲ್ಲಿ ರಾಧಾ, ರುಕ್ಮಿಣಿ, ಶ್ರೀಕೃಷ್ಣರು ಕುಣಿದು ಕುಪ್ಪಳಿಸಿದರು.
ಹೌದು, ಶಿವನ ಸನ್ನಿಧಾನವಾದ ಕಾಶಿಯಲ್ಲಿ ಶ್ರೀಕೃಷ್ಣನ ಜಯಂತಿ ಮೇಳೈಸಿತು. ಮಿಸ್ ಅಂಡ್ ಮಿಸೆಸ್ ಬನಾರಸ್ ಕ್ಲಬ್ ವತಿಯಿಂದ ಜನ್ಮಾಷ್ಟಮಿ ನಿಮಿತ್ತ ಇಂದು ಮಹಿಳೆಯರು ಸೇರಿ ಶ್ರೀಕೃಷ್ಣನಂತೆ ಅಲಂಕರಿಸಿದ "ಸೊಹರ್" ಆಚರಿಸಿದರು. ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ಗಂಗಾಜಲದಿಂದ ಅಭಿಷೇಕ ಮಾಡಿದರು. ಗೋಪಾಲ ಶ್ರೀಕೃಷ್ಣನನ್ನು ಲಡ್ಡುಗಳಿಂದ ಸಿಂಗರಿಸಿದರು.
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 19 ರಂದು ಆಚರಿಸಲಾಗುತ್ತದೆ. ಆದರೆ, ಕಾಶಿಯಲ್ಲಿ ಅದಾಗಲೇ ಶ್ರೀಕೃಷ್ಣನ ಮಹೋತ್ಸವ ಕಳೆಗಟ್ಟಿದೆ. ಶ್ರೀಕೃಷ್ಣ ಮತ್ತು ರಾಧೆಯ ರೂಪದಲ್ಲಿ ವೇಷ ಧರಿಸಿ ಬಂದ ಮಹಿಳೆಯರು ಉಳಿದವರ ಜೊತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಭಕ್ತಿಗೀತೆಗಳಿಂದ ಹಿಡಿದು ಗರ್ಬಾ ಮತ್ತು ಶ್ರೀಕೃಷ್ಣ ರಾಧಾ ಗೀತೆಗಳವರೆಗೆ ಮಹಿಳೆಯರ ಕೋಲಾಟ ಜೋರಾಗಿತ್ತು.
ಕಾಶಿಯ ಮುಂಭಾಗದಲ್ಲಿರುವ ಶಿವ ರುದ್ರಾಕ್ಷ್ ರೆಸಾರ್ಟ್‌ನಲ್ಲಿ ಬೃಂದಾವನ ಮತ್ತು ಮಥುರೆಯನ್ನು ಸೃಷ್ಟಿಸಲಾಗಿತ್ತು. ಇಲ್ಲಿ ಶ್ರೀಕೃಷ್ಣ ರಾಧೆಯರ ವೈಭೋಗವನ್ನು ಮರು ರೂಪಿಸಲಾಯಿತು. ಕಾಶಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ನಡೆಯುತ್ತಿದೆ. ಗೋಪಿಕೆಯರ ರೂಪದಲ್ಲಿ ಕುಣಿಯುತ್ತಿರುವ ಹೆಂಗಸರ ಮಧ್ಯೆ ಶ್ರೀಕೃಷ್ಣನ ವೇಷಧಾರಿಯೂ ಹೆಜ್ಜೆ ಹಾಕುತ್ತಿದ್ದಾರೆ. ಶಿವನ ಜೊತೆಗೆ ಕಾಶಿ ಇಂದು ಕೃಷ್ಣಮಯವಾಗಿದೆ ಎಂದು ಆಯೋಜಕರು ಹೇಳಿದರು.
ಓದಿ: ಇವು ಅಂತಿಂಥ ಇರುವೆಗಳಲ್ಲ.. ಹಾವು, ಕುರಿ, ಜಾನುವಾರುಗಳ ಕಣ್ಣು ಕಚ್ಚಿ ತಿನ್ನುತ್ತವಂತೆ ಈ ಯೆಲ್ಲೋ ಕ್ರೇಜಿ ಆ್ಯಂಟ್