ETV Bharat / bharat

ಕೊರೊನಾ ವಿರುದ್ಧ ಭಾರತಕ್ಕೆ ಮತ್ತೊಂದು ಅಸ್ತ್ರ: ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗೆ ಅಸ್ತು - ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್

ಭಾರತದಲ್ಲಿ ಸ್ಪುಟ್ನಿಕ್ ಲೈಟ್ COVID-19 ಲಸಿಕೆಗೆ DCGI ತುರ್ತು ಬಳಕೆಯ ಅನುಮತಿಯನ್ನು ನೀಡಿದೆ. ಇದು ದೇಶದಲ್ಲಿ ಒಂಬತ್ತನೇ COVID-19 ಲಸಿಕೆಯಾಗಿದೆ.

ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗಾಗಿ DCGI ಅನುಮೋದನೆ

author img

By

Published : Feb 7, 2022, 6:54 AM IST

ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಮತ್ತೊಂದು ಹೊಸ ಅಸ್ತ್ರ ಸಿಕ್ಕಿದೆ. ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್‌ನಿಂದ 'ಸ್ಪುಟ್ನಿಕ್ ಲೈಟ್' ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾನುವಾರ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಸ್ಪುಟ್ನಿಕ್ ಲೈಟ್‌ನ ಅನುಮತಿಯೊಂದಿಗೆ, ಈಗ ದೇಶದಲ್ಲಿ ಒಟ್ಟು 9 ಕೊರೊನಾ ಲಸಿಕೆಗಳನ್ನು ಬಳಸಲಾಗುತ್ತಿದೆ. ಸ್ಪುಟ್ನಿಕ್ ಲೈಟ್, ಸ್ಪುಟ್ನಿಕ್-ವಿ ಕಾಂಪೊನೆಂಟ್-1 ಅನ್ನು ಹೋಲುತ್ತದೆ ಎಂದು ವಿವರಿಸಿದ್ದಾರೆ.

ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಅವರು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಕೋರಿದ್ದರು. ಹೈದರಾಬಾದ್ ಮೂಲದ ಫಾರ್ಮಾ ಕಂಪನಿಯು ಸೆಪ್ಟೆಂಬರ್ 2020 ರಲ್ಲಿ ಸ್ಪುಟ್ನಿಕ್ V ಮತ್ತು ಭಾರತದಲ್ಲಿ ಅದರ ವಿತರಣೆಯ ಕ್ಲಿನಿಕಲ್ ಪ್ರಯೋಗ ನಡೆಸಲು ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ (RDIF) ಒಪ್ಪಂದ ಮಾಡಿಕೊಂಡಿತ್ತು. ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಪ್ರಕಾರ, ಅರ್ಜೆಂಟೀನಾ ಮತ್ತು ರಷ್ಯಾ ಸೇರಿದಂತೆ 29 ದೇಶಗಳಲ್ಲಿ ಸ್ಪುಟ್ನಿಕ್ ಲೈಟ್ ಅನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು.

ಸ್ಪುಟ್ನಿಕ್‌ನ ಈ ಲಘು ಆವೃತ್ತಿಯ ಲಸಿಕೆಯನ್ನು ಮಾಸ್ಕೋದ ಗಮಲಯ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದೆ. ಸ್ಪುಟ್ನಿಕ್ ಲೈಟ್ ಆವೃತ್ತಿಯು ಕೊರೊನಾ ವೈರಸ್ ವಿರುದ್ಧ ಶೇ.79.4ರಷ್ಟು ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ಕಂಡುಬಂದಿದೆ. ಲಸಿಕೆಯನ್ನು 5 ಡಿಸೆಂಬರ್ 2020 ರಿಂದ 15 ಏಪ್ರಿಲ್ 2020 ರವರೆಗೆ ಜನರಿಗೆ ನೀಡಲಾಗಿತ್ತು. ಲಸಿಕೆ ನೀಡಿದ 18 ದಿನಗಳ ನಂತರ ಡೇಟಾವನ್ನು ಸಂಗ್ರಹಿಸಲಾಗಿದೆ. ಈ ಡೇಟಾದ ವಿಶ್ಲೇಷಣೆಯು ಪ್ರಕಾರ ಸ್ಪುಟ್ನಿಕ್ ಲೈಟ್ ಲಸಿಕೆ ಶೇ.79.4 ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.