ETV Bharat / bharat

ಫೆಬ್ರವರಿ 1 ರಿಂದ ಚೆನ್ನೈ, ಬೆಂಗಳೂರು, ಮುಂಬೈನಿಂದ ಅಯೋಧ್ಯೆಗೆ ವಿಮಾನ ಸೇವೆ: ಸ್ಪೈಸ್​ಜೆಟ್​

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಳಿಕ ಭಕ್ತಾದಿಗಳ ಭೇಟಿಗೆ ನೆರವಾಗಲು ಸ್ಪೈಸ್​​ಜೆಟ್​ ವಿಮಾನಯಾನ ಸಂಸ್ಥೆ ವಿವಿಧ ನಗರಗಳಿಂದ ಸೇವೆ ಆರಂಭಿಸುವುದಾಗಿ ಘೋಷಿಸಿದೆ.

ಸ್ಪೈಸ್​ಜೆಟ್​
ಸ್ಪೈಸ್​ಜೆಟ್​
author img

By ETV Bharat Karnataka Team

Published : Jan 15, 2024, 7:36 PM IST

ನವದೆಹಲಿ: ಜನವರಿ 22 ಕ್ಕೆ ರಾಮಮಂದಿರದ ಉದ್ಘಾಟನಾ ಸಮಾರಂಭ ಮತ್ತು ರಾಮಲಲ್ಲಾನ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭಕ್ಕೆ ಅಯೋಧ್ಯೆ ಸಜ್ಜಾಗಿದೆ. ದಿವ್ಯ ಕಾರ್ಯಕ್ರಮಕ್ಕೆ ಮತ್ತು ಅದರ ನಂತರ ಬರುವ ಭಕ್ತಾದಿಗಳಿಗಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆ ವಿಸ್ತರಿಸಿವೆ. ಜನವರಿ 23 ರಿಂದ ಸಾರ್ವಜನಿಕರಿಗೆ ದೇಗುಲ ದರ್ಶನ ಮುಕ್ತವಾಗಲಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ ತಿಳಿಸಿದ ಬಳಿಕ, ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಫೆಬ್ರವರಿ 1 ರಿಂದ ಚೆನ್ನೈ, ಬೆಂಗಳೂರು ಮತ್ತು ಮುಂಬೈಯಿಂದ ಅಯೋಧ್ಯೆಗೆ ವಿಮಾನ ಸೇವೆಗಳನ್ನು ನೀಡಲು ಮುಂದಾಗಿದೆ.

ಸ್ಪೈಸ್​​ಜೆಟ್​ ವಿಮಾನಯಾನ ಸಂಸ್ಥೆಯು 189 ಆಸನಗಳ ಬೋಯಿಂಗ್ 737 ವಿಮಾನವನ್ನು ಈ ಮಾರ್ಗಗಳಲ್ಲಿ ಹಾರಾಟ ನಡೆಸುವುದಾಗಿ ಘೋಷಿಸಿದೆ."ಸ್ಪೈಸ್ ಜೆಟ್ ತನ್ನ ನೆಟ್‌ವರ್ಕ್ ಅನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ, ಶೀಘ್ರದಲ್ಲೇ ಅಯೋಧ್ಯೆಯನ್ನು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುವ ಗುರಿ ಹೊಂದಿದೆ" ಎಂದು ಏರ್‌ಲೈನ್ ತಿಳಿಸಿದೆ.

ಜನವರಿ 21 ರಂದು ಸ್ಪೈಸ್‌ಜೆಟ್ ಸಂಸ್ಥೆಯು ದೆಹಲಿಯಿಂದ ಅಯೋಧ್ಯೆಗೆ ವಿಶೇಷ ವಿಮಾನದ ಸಂಚಾರ ನಡೆಸಿತ್ತು. ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ವಿವಿಧೆಡೆಯಿಂದ ಅಯೋಧ್ಯೆಗೆ, ಬಳಿಕ ಅಲ್ಲಿಂದ ಅದೇ ದಿನ ರಿಟರ್ನ್ ಫ್ಲೈಟ್ ಸಹ ಇರಲಿದೆ. ಭಕ್ತರಿಗೆ ತೊಂದರೆ ಉಂಟಾಗದಂತೆ ಮುಕ್ತ ಪ್ರಯಾಣವನ್ನು ನೀಡಲಾಗುವುದು ಎಂದಿದೆ.

ಬೇರೆ ಮಾರ್ಗಗಳಿಗೂ ವಿಮಾನ: ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಜೊತೆಗೆ ಸ್ಪೈಸ್‌ಜೆಟ್ ಫೆಬ್ರವರಿ 1 ರಿಂದ ಮುಂಬೈ ಟು ಶ್ರೀನಗರ, ಚೆನ್ನೈನಿಂದ ಜೈಪುರ ಮತ್ತು ಬೆಂಗಳೂರಿನಿಂದ ವಾರಾಣಸಿಗೆ ಸಂಪರ್ಕಿಸುವ ಹೊಸ ವಿಮಾನಗಳನ್ನು ಕಲ್ಪಿಸಲಾಗುವುದು ಎಂದೂ ತಿಳಿಸಿದೆ.

ಸ್ಪೈಸ್‌ಜೆಟ್‌ ಏರ್​ಲೈನ್ಸ್​ನ ಮುಖ್ಯ ವಾಣಿಜ್ಯ ಅಧಿಕಾರಿ ಶಿಲ್ಪಾ ಭಾಟಿಯಾ ಮಾತನಾಡಿ, ಅಯೋಧ್ಯೆಯನ್ನು ದೇಶದ ವಿವಿಧ ಸ್ಥಳಗಳಿಗೆ ಬೆಸೆಯಲಾಗುವುದು. ಚೆನ್ನೈ, ಬೆಂಗಳೂರು ಮತ್ತು ಮುಂಬೈಗೆ ತಡೆರಹಿತ ವಿಮಾನಗಳ ಸೇವೆಯನ್ನು ನೀಡಲು ಸಂಸ್ಥೆ ಉತ್ಸುಕವಾಗಿದೆ. ಈ ಹೊಸ ವಿಮಾನಗಳ ಸಂಪರ್ಕದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಇನ್ನಷ್ಟು ನಗರಗಳ ಮಧ್ಯೆ ಸಂಪರ್ಕ ಸಾಧಿಸಲಾಗುವುದು ಎಂದು ತಿಳಿಸಿದರು.

ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ವಿಮಾನ ನಿಲ್ದಾಣವನ್ನು ಈಚೆಗೆ ಉದ್ಘಾಟಿಸಿದರು. ದಾಖಲೆಯ 20 ತಿಂಗಳಲ್ಲಿ ನಿಲ್ದಾಣವನ್ನು ನಿರ್ಮಿಸಲಾಗಿದೆ. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಇದರ ಬಳಿಕ ಇಂಡಿಗೋದ ಮೊದಲ ವಿಮಾನ ದೆಹಲಿಯಿಂದ ಅಯೋಧ್ಯೆಗೆ ಬಂದಿಳಿದಿತ್ತು.

ಇದನ್ನೂ ಓದಿ: ಇಂಡಿಗೋ ವಿಮಾನ ಸಂಚಾರ ವಿಳಂಬ: ಕ್ಯಾಪ್ಟನ್‌ಗೆ​ ಪ್ರಯಾಣಿಕನಿಂದ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.