ನವದೆಹಲಿ: ವೇಗವಾಗಿ ಬಂದ ಟ್ರಕ್ ರಸ್ತೆ ಪಕ್ಕದಲ್ಲಿ ನಿದ್ರಿಸುತ್ತಿದ್ದ ಜನರ ಮೇಲೆ ಹರಿದು ಹೋಗಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಮಧ್ಯರಾತ್ರಿ 1:51ರ ವೇಳೆಗೆ ನಗರದ ಸೀಮಾಪುರಿಯ ಡಿಟಿಸಿ ಡಿಪೋ ಪ್ರದೇಶದಲ್ಲಿ ಅವಘಡ ನಡೆದಿದೆ. ಟ್ರಕ್ ಸಮೇತ ಚಾಲಕ ಪರಾರಿಯಾಗಿದ್ದಾನೆ.
-
Delhi | An unknown speeding truck mowed down 4 people & injured 2 persons who were sleeping on the road divider, while crossing DTC Depot Redlight in Seemapuri: Police https://t.co/71EgsKQFo6 pic.twitter.com/iRT2HlodJU
— ANI (@ANI) September 21, 2022 " class="align-text-top noRightClick twitterSection" data="
">Delhi | An unknown speeding truck mowed down 4 people & injured 2 persons who were sleeping on the road divider, while crossing DTC Depot Redlight in Seemapuri: Police https://t.co/71EgsKQFo6 pic.twitter.com/iRT2HlodJU
— ANI (@ANI) September 21, 2022Delhi | An unknown speeding truck mowed down 4 people & injured 2 persons who were sleeping on the road divider, while crossing DTC Depot Redlight in Seemapuri: Police https://t.co/71EgsKQFo6 pic.twitter.com/iRT2HlodJU
— ANI (@ANI) September 21, 2022
ಮೃತರನ್ನು 52 ವರ್ಷದ ಕರೀಂ, ಚೋಟ್ಟೆ ಖಾನ್ (25), ಶಾ ಆಲಂ (38), ರಾಹುಲ್ (45) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮನೀಶ್, ಪ್ರದೀಪ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಅಪಘಾತಕ್ಕೆ ಕಾರಣವಾಗಿರುವ ಟ್ರಕ್ ಚಾಲಕನ ಪತ್ತೆಗೆ ಪೊಲೀಸರು ತಂಡಗಳನ್ನು ರಚಿಸಿದ್ದು ಶೋಧ ನಡೆಯುತ್ತಿದೆ.
ಇದನ್ನೂ ಓದಿ: ಪಾದಚಾರಿ ಮೇಲೆ ಕಾರು ಹರಿಸಿದ ಯುವಕ... ಆರೋಪಿ ಸೆರೆ ಹಿಡಿದ ಪೊಲೀಸರು