ETV Bharat / bharat

ಭಗವಾನ್ ಮಹಾವೀರರ 2548ನೇ ನಿರ್ವಾಣ ದಿನ: ಪಾವಪುರಿ ಜೈನ ಜಲ ಮಂದಿರದ ವಿಶೇಷತೆ ಹಲವು

ದೀಪಾವಳಿಯ ದಿನ ಅಂದರೆ ಕಾರ್ತಿಕ ಮಾಸದ ಅಮಾವಾಸ್ಯೆಯ ಮಧ್ಯರಾತ್ರಿ ಭಗವಾನ್ ಮಹಾವೀರ ಪರಿನಿರ್ವಾಣ ನಡೆಯಿತು. ಇದರ ಸ್ಮರಣಾರ್ಥವಾಗಿ ಪ್ರತಿ ವರ್ಷ ನಳಂದಾದ ಪಾವಪುರಿ ಜಲ ಮಂದಿರದಲ್ಲಿ ದೀಪೋತ್ಸವ ನಡೆಯುತ್ತದೆ.

Jal Mandir Pawapuri
ಪಾವಪುರಿ ಜೈನ ಜಲ ಮಂದಿರ
author img

By

Published : Oct 23, 2022, 8:07 PM IST

ನಳಂದ: ಬಿಹಾರದ ನಳಂದ ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಹೊಂದಿದೆ. ಅವುಗಳಲ್ಲಿ ಜೈನರ ನಂಬಿಕೆಯ ಕೇಂದ್ರವಾದ ಪಾವಪುರಿ ಜಲ ಮಂದಿರ ಸಹ ಒಂದು. ನಳಂದ ಜಿಲ್ಲಾ ಕೇಂದ್ರದಿಂದ ಸುಮಾರು 11 ಕಿ.ಮೀ ದೂರದಲ್ಲಿರುವ ಜೈನರ (ಜೈನ ಜಲ ಮಂದಿರ) ಹೆಚ್ಚು ಪ್ರಸಿದ್ಧಿ ಹೊಂದಿದ್ದು, ಇಲ್ಲಿಗೆ ದೂರದ ರಾಜ್ಯ ಮಾತ್ರವಲ್ಲದೇ ದೇಶದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಜಲ ಮಂದಿರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಅಂದು ಭಗವಾನ್ ಮಹಾವೀರರ 2548 ನೇ ನಿರ್ವಾಣ ದಿನ. ಈ ಹಿನ್ನೆಲೆ ವಿಶೇಷ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅನೇಕ ದೇಶಗಳಿಂದ ಶ್ವೇತಾಂಬರ ಮತ್ತು ದಿಗಂಬರ ಜೈನ ಅನುಯಾಯಿಗಳು ಇಲ್ಲಿಗೆ ಬರುತ್ತಾರೆ.

ಇದನ್ನೂ ಓದಿ: ಭಗವಾನ್ ಮಹಾವೀರರ ಆದರ್ಶಗಳು ಪ್ರೇರಣಾದಾಯಕ: ಸಿಎಂ ಬೊಮ್ಮಾಯಿ

ದೀಪಾವಳಿಯ ದಿನ ಅಂದರೆ ಕಾರ್ತಿಕ ಮಾಸದ ಅಮಾವಾಸ್ಯೆಯ ಮಧ್ಯರಾತ್ರಿ ಭಗವಾನ್ ಮಹಾವೀರ ಪರಿನಿರ್ವಾಣ ನಡೆಯಿತು. ಇದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಜಲ ಮಂದಿರದಲ್ಲಿ ದೀಪೋತ್ಸವ ನಡೆಯುತ್ತದೆ. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜೈನರು ಬರುತ್ತಾರೆ. ಜೊತೆಗೆ ಈ ದೇವಸ್ಥಾನದಲ್ಲಿ ಲಡ್ಡುಗಳನ್ನು ಅರ್ಪಿಸುವ ಸಂಪ್ರದಾಯವೂ ಸಹ ಇದೆ. ದೇವಸ್ಥಾನದಲ್ಲಿ ಲಡ್ಡುಗಳನ್ನು ಅರ್ಪಿಸಲು ಶ್ವೇತಾಂಬರ ಮತ್ತು ದಿಗಂಬರ ಭಕ್ತರ ನಡುವೆ ಬಿಡ್ ನಡೆಯುತ್ತದೆ. ಅತಿ ಹೆಚ್ಚು ಬಿಡ್ ಮಾಡುವ ಭಕ್ತನಿಗೆ ದೇವಸ್ಥಾನದಲ್ಲಿ ಲಡ್ಡುಗಳನ್ನು ಅರ್ಪಿಸಲು ಅವಕಾಶ ನೀಡಲಾಗುತ್ತದೆ.

ಪಾವಪುರಿ ಜೈನ ಜಲ ಮಂದಿರ

ವಿಶೇಷ ರೀತಿಯಲ್ಲಿ ಲಡ್ಡು ತಯಾರಿಕೆ: ಭಗವಾನ್ ಮಹಾವೀರರ ನಿರ್ವಾಣ ದಿನದಂದು ಲಡ್ಡುಗಳನ್ನು ಅರ್ಪಿಸುವ ಸಂಪ್ರದಾಯವಿದೆ. ಇದಕ್ಕಾಗಿ ವಿಶೇಷವಾಗಿ ಕುಶಲಕರ್ಮಿಗಳು ಬೇರೆ ರಾಜ್ಯಗಳಿಂದ ಆಗಮಿಸಿ ಇಲ್ಲಿ ಲಡ್ಡು ತಯಾರಿಸುತ್ತಾರೆ. ಈ ಬಾರಿ ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಕುಶಲಕರ್ಮಿಗಳು ಲಡ್ಡು ತಯಾರಿಸಲು ಬಂದಿದ್ದಾರೆ. ಶುದ್ಧ ದೇಶಿ ತುಪ್ಪದ ಲಡ್ಡುಗಳನ್ನು ಜೈನ ಶ್ವೇತಾಂಬರ ಮತ್ತು ದಿಗಂಬರ ಆಡಳಿತದ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಜೈನ ಭಕ್ತರು ನಿರ್ವಾಣ ಸ್ಥಳದಿಂದ ಅಂತ್ಯಕ್ರಿಯೆಯ ಮೈದಾನಕ್ಕೆ ಲಡ್ಡುಗಳನ್ನು ತಮ್ಮ ಹಣೆಯ ಮೇಲೆ ಹೊತ್ತುಕೊಂಡು ಹೋಗುತ್ತಾರೆ. ಅದೇ ಸ್ಥಳದಲ್ಲಿ ಈ ನೀರಿನ ದೇವಾಲಯವನ್ನು ನಿರ್ಮಿಸಲಾಗಿದೆ. ಅಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. ವಿಶೇಷ ಅಂದ್ರೆ ದೇವಸ್ಥಾನದಲ್ಲಿ ಒಂದು ಕೆಜಿಯಿಂದ 51 ಕೆಜಿ ತೂಕದ ಲಡ್ಡುಗಳನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ಹಾವೇರಿಯಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

ದೀಪಾವಳಿ ದಿನದಂದು ರಥಯಾತ್ರೆ ಮಾಡಲಾಗುತ್ತದೆ. ಇದರಲ್ಲಿ ಭಗವಾನ್ ಮಹಾವೀರರನ್ನು ಬೆಳ್ಳಿಯ ರಥದ ಮೇಲೆ ಕರೆದೊಯ್ಯಲಾಗುತ್ತದೆ ಮತ್ತು ಪಾವಪುರಿಯ ವಿವಿಧ ಜೈನ ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ಅಂತಿಮವಾಗಿ, ಭಗವಾನ್ ಮಹಾವೀರರಿಗೆ ಪಾವಪುರಿ ನಿರ್ವಾಣ ಸ್ಥಳವಾದ ಜಲ ಮಂದಿರದಲ್ಲಿ ಪೂಜೆ ಮಾಡಲಾಗುತ್ತದೆ.

2548ನೇ ನಿರ್ವಾಣ ಮಹೋತ್ಸವ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲ ದಿನ ಅಂದರೆ ಅ. 23 ರಂದು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕಳೆದ 2 ವರ್ಷ ಕೊರೊನಾ ಹಿನ್ನೆಲೆ ಸರಳ ಪೂಜೆ ಮಾಡಲಾಗಿತ್ತು. ಆದ್ರೆ ಈ ಬಾರಿ ಭಕ್ತರ ದಂಡೇ ಹರಿದು ಬಂದಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು.

ಇದನ್ನೂ ಓದಿ: ಬೆಳಗಾವಿ: ಜೈನ್ ಮಂದಿರ ಜೀರ್ಣೋದ್ಧಾರ ವಿಚಾರಕ್ಕೆ ಗಲಾಟೆ

ಜಲಮಂದಿರ ಹೇಗಿದೆ?: ಜಲಮಂದಿರವನ್ನು ಮಹಾವೀರನ ನಿರ್ವಾಣ ಸ್ಥಳ ಎಂದು ಕರೆಯಲಾಗುತ್ತದೆ. ಸುಮಾರು 84 ಬಿಘಾಗಳ ಕೊಳದ ಮಧ್ಯದಲ್ಲಿ ಬಿಳಿ ಅಮೃತಶಿಲೆಯ ದೇವಾಲಯವು ಗೋಚರಿಸುತ್ತದೆ. ಬಿಳಿ ಬಣ್ಣವು ಶಾಂತಿಯ ಸಂಕೇತ. ಭಗವಾನ್ ಮಹಾವೀರ ಮತ್ತು ಅವರ ಇಬ್ಬರು ಶಿಷ್ಯರ ಪಾದಗಳನ್ನು ಈ ದೇವಾಲಯದಲ್ಲಿ ಇರಿಸಲಾಗಿದೆ. ಒಂದು ರೀತಿಯಲ್ಲಿ ಜಗತ್ತಿನಾದ್ಯಂತ ನೆಲೆಸಿರುವ ಜೈನರಿಗೆ ಈ ಪ್ರದೇಶ ಮೆಕ್ಕಾವಿದ್ದಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.