ETV Bharat / bharat

ಇಡೀ 'ರಸಗುಲ್ಲಾ'ಒಂದೇ ಪ್ರಯತ್ನದಲ್ಲಿ ತಿಂದರೆ ಇಷ್ಟೊಂದು ರೂಪಾಯಿ ಬಹುಮಾನ!.. ನೀವೂ ಟ್ರೈ ಮಾಡಿ! - ಉತ್ತರ ಪ್ರದೇಶದ ಝಾನ್ಸಿ ರಸಗುಲ್ಲಾ

ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ರಸಗುಲ್ಲಾ ಲಭ್ಯವಾಗ್ತಿದೆ. ಆದರೆ, ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸಿಗುವ ರಸಗುಲ್ಲಾ ಮಾತ್ರ ಎಲ್ಲದಕ್ಕಿಂತಲೂ ಭಿನ್ನವಾಗಿದ್ದು, ಅದಕ್ಕೆ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗ್ತಿದೆ.

special rasgulla jhansi
special rasgulla jhansi
author img

By

Published : Jul 14, 2022, 6:56 PM IST

ಝಾನ್ಸಿ(ಉತ್ತರ ಪ್ರದೇಶ): ರಸಗುಲ್ಲಾ ಹೆಸರು ಕೇಳಿದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇವು ಮಾರಾಟವಾಗುತ್ತವೆ. ಆದರೆ, ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿಭಿನ್ನವಾದ ರಸಗುಲ್ಲಾ ತಯಾರುಗೊಳ್ಳುತ್ತವೆ. ಅವುಗಳಿಗೆ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಇವುಗಳಿಗೆ ಬೇಡಿಕೆ ಇವೆ. ಹಾಗಾದರೆ ಅವುಗಳ ವಿಶೇಷತೆ ಏನು ಎಂಬುವುದನ್ನೊಮ್ಮೆ ನೋಡೋಣ.

ಝಾನ್ಸಿಯಲ್ಲಿ ತಯಾರುಗೊಳ್ಳುವ ರಸಗುಲ್ಲಾ
ಝಾನ್ಸಿಯಲ್ಲಿ ತಯಾರುಗೊಳ್ಳುವ ರಸಗುಲ್ಲಾ

ಝಾನ್ಸಿಯಲ್ಲಿ ತಯಾರುಗೊಳ್ಳುವ ರಸಗುಲ್ಲಾಗಳಲ್ಲಿ ದೇಸಿ ತುಪ್ಪ ಹಾಗೂ ಶುದ್ಧ ಖೋಯಾ ಬಳಕೆ ಮಾಡಲಾಗ್ತದೆ. ಇದರ ಗಾತ್ರ ಕೂಡ ತುಂಬಾ ದೊಡ್ಡದಾಗಿದೆ. ಝಾನ್ಸಿಗೆ ಬರುವ ಪ್ರವಾಸಿಗರು ಇದರ ರುಚಿ ನೋಡಲು ಪಾಂಡೆ ಜೀ ಅವರ ಅಂಗಡಿಗೆ ತೆರಳುತ್ತಾರೆ.

special rasgulla pandey ji
ಝಾನ್ಸಿಯಲ್ಲಿ ಸಿಗುವ ವಿಶೇಷ ರಸಗುಲ್ಲಾ

ಪಾಂಡೆ ಜೀ 1963ರಿಂದಲೂ ಝಾನ್ಸಿಯಲ್ಲಿ ಇವುಗಳ ತಯಾರಿಕೆ ಮಾಡ್ತಿದ್ದಾರೆ. ಝಾನ್ಸಿ- ಖಜುರಾಹೊ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಸ್​​​ ನಿಲ್ದಾಣದಲ್ಲಿ ರಸಗುಲ್ಲಾ ತಯಾರಿಸಲಾಗುತ್ತದೆ. ಆರಂಭದಲ್ಲಿ ಪೇಡಾ ಮಾತ್ರ ಇಲ್ಲಿ ತಯಾರು ಮಾಡಲಾಗುತ್ತಿತ್ತು. ತದನಂತರ ಹೊಸದನ್ನು ತಯಾರಿಸಬೇಕು ಎಂಬ ಯೋಚನೆಯೊಂದಿಗೆ ರಸಗುಲ್ಲಾ ತಯಾರಿಸಲಾಗ್ತಿದ್ದು, ಅದಕ್ಕಾಗಿ ಶುದ್ಧ ದೇಸಿ ತುಪ್ಪ ಹಾಗೂ ಖೋಯಾ ಬಳಕೆ ಮಾಡಲಾಗ್ತದೆ. ಈ ರಸಗುಲ್ಲಾ ಸುಮಾರು 150ರಿಂದ 200 ಗ್ರಾಂ ತೂಕ ಇರುತ್ತದೆ.

ಪ್ರತಿದಿನ ಸಾವಿರಾರು ಗ್ರಾಹಕರು ಭೇಟಿ
ಪ್ರತಿದಿನ ಸಾವಿರಾರು ಗ್ರಾಹಕರು ಭೇಟಿ

ಇದನ್ನೂ ಓದಿರಿ: ಕೈಕೊಟ್ಟ ಮುಂಗಾರು ಮಳೆ.. ಬಿಜೆಪಿ ಶಾಸಕನ ಮೇಲೆ ಕೆಸರು ಎರಚಿದ ಮಹಿಳೆಯರು!

ಇದನ್ನ ತಿನ್ನಲು ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಇಲ್ಲಿಗೆ ಬರುವ ತಿಂಡಿ ಪ್ರಿಯರು ಒಂದೇ ಸಲಕ್ಕೆ ಸಂಪೂರ್ಣ ರಸಗುಲ್ಲಾ ತಿಂದರೆ ಅವರಿಗೆ 1000 ರೂಪಾಯಿ ಬಹುಮಾನ ನೀಡಲಾಗ್ತದೆ. ಆದರೆ, ಇಲ್ಲಿಯವರೆ ಯಾರೂ ಸಹ ಅದರಲ್ಲಿ ಸಕ್ಸಸ್​ ಆಗಿಲ್ಲ. ದೇಶಿ ತುಪ್ಪ ಹಾಗೂ ಖೋಯಾದಿಂದ ತಯಾರುಗೊಳ್ಳುವ ಕಾರಣ ತುಂಬಾ ಮೃದುವಾಗಿದ್ದು, ಒಂದೇ ಪ್ರಯತ್ನದಲ್ಲಿ ತಿನ್ನಲು ಸಾಧ್ಯವಿಲ್ಲ ಎನ್ನುತ್ತಾರೆ ಗ್ರಾಹಕರು. ಜೊತೆಗೆ ಇದು ತುಂಬಾ ರುಚಿಕರವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

special rasgulla pandey ji
ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಪಾಂಡೆ ಜೀ ಶಾಪ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.