ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್‌ನ ಗರ್ಖೇಡಾ ಪ್ರದೇಶದಲ್ಲಿ ಸಾಕು ನಾಯಿಗಳಿಗಾಗಿ ಸಲೂನ್ ಅನ್ನು ಸ್ಥಾಪಿಸಲಾಗಿದೆ. ನಾಯಿಗಳಿಗೆ ಸ್ನಾನ, ಕೂದಲು ಕತ್ತರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಈ ಸಲೂನ್‌ನಲ್ಲಿ ನಾಯಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ನಾಯಿಗಳ ಆರೈಕೆಗಾಗಿ ಈ ಸಲೂನ್ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ನಾಯಿಗಳನ್ನು ನೋಡಿಕೊಳ್ಳುವಾಗ ನೈರ್ಮಲ್ಯವು ಮುಖ್ಯವಾಗಿದೆ. ಆದರೆ, ಹಲವರಿಗೆ ಇದು ಸಾಧ್ಯವಾಗುತ್ತಿಲ್ಲ. ಅಂತಹ ಶ್ವಾನ ಪ್ರಿಯರಿಗಾಗಿ ಈ ಸಲೂನ್‌ನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದೊಡ್ಡ ಟಬ್ ಇಡಲಾಗಿದ್ದು, ಇಲ್ಲಿರುವ ಸಿಬ್ಬಂದಿ ನಾಯಿಗೆ ಶ್ಯಾಂಪೂ, ಸೋಪು ಹಚ್ಚಿ ಸ್ನಾನ ಮಾಡಿಸುತ್ತಾರೆ.
ಸ್ನಾನದ ಬಳಿಕ ಕೂದಲನ್ನು ಶುಷ್ಕಗೊಳಿಸಲಾಗುತ್ತದೆ. ಬೆಳೆದ ಕೂದಲು, ಉಗುರುಗಳನ್ನು ಇಲ್ಲಿ ಕತ್ತರಿಸಲಾಗುತ್ತದೆ. ಕೂದಲು ಕತ್ತರಿಸಿದ ಬಳಿಕ ಏನೂ ಸಮಸ್ಯೆಯಾಗದಂತೆ ವಿಶೇಷವಾದ ಪೌಡರ್ ಅನ್ನು ಇಲ್ಲಿ ಬಳಸಲಾಗುತ್ತದೆ ಎಂದು ಸಲೂನ್ ನಿರ್ವಾಹಕ ಜಯಂತ್ ಕುಲಕರ್ಣಿ ಹೇಳುತ್ತಾರೆ.
ಓದಿ: ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಕುಟುಂಬಸ್ಥರ ಭೇಟಿ ಮಾಡಲಿದ್ದಾರೆ ಪ್ರಧಾನಿ