ರಾಂಚಿ (ಜಾರ್ಖಂಡ್): ನೀವು ಸಸ್ಯಾಹಾರಿಯಾಗಿದ್ದು, ಮಾಂಸಾಹಾರ ಸೇವೆನೆಯ ರುಚಿ ಪಡೆಯಬೇಕು ಅಂದ್ರೆ ಜಾರ್ಖಂಡ್ನ ಈ ಪ್ರದೇಶದಲ್ಲಿ ಸಿಗುವ ಅಣಬೆಗಳ ಒಮ್ಮೆ ತಿಂದು ನೋಡಿ. ಮಟನ್ ಚಿಕನ್ನಂತೆ ರುಚಿ ನೀಡುವ ಇವು ಮಳೆಗಾಲದಲ್ಲಿ ಮಾತ್ರ ಸಿಗುವ ‘ವೆಜ್ ಮಟನ್’ ಎಂಬ ವಿಶೇಷ ಖಾದ್ಯವಾಗಿದೆ. ಇದನ್ನು ಇಲ್ಲಿನ ಸ್ಥಳೀಯರು ರುಗ್ಡಾ ಮತ್ತು ಖುಕ್ರಿ ಎಂಬುದಾಗಿ ಕರೆಯುತ್ತಾರೆ.
ರುಗ್ಡಾ ಅಣಬೆ ಮಳೆಗಾಲದಲ್ಲಿ ಮಾತ್ರ ಕಂಡುಬರುತ್ತದೆ. ಅದರಲ್ಲೂ ಸಾಲ್ ಎಂಬ ಜಾತಿಯ ಮರದ ಕೆಳಗೆ ಹೆಚ್ಚಾಗಿ ಬೆಳೆಯುತ್ತದೆ. ಇದನ್ನು ಕೃತಕವಾಗಿ ಬೆಳೆಸಲು ಸಾಧ್ಯವಾಗುವುದಿಲ್ಲ. ಇದೊಂದು ವಿಶೇಷ ಖಾದ್ಯ ಆಗಿರುವುದರಿಂದ ಮಳೆಗಾಲ ಆರಂಭವಾಗಲು ಜನರು ಕಾಯುತ್ತಾರೆ.
ಜನರು ಈ ಅಣಬೆಗಳನ್ನು ಕಾಡಿನಿಂದ ಹುಡುಕಿ ತಂದು ನಗರದಲ್ಲಿ ಮಾರಾಟ ಮಾಡುತ್ತಾರೆ. ಕಾಡಿನ ತಪ್ಪಲಲ್ಲಿ ವಾಸಿಸುವ ಜನರ ಜೀವನೋಪಾಯಕ್ಕೆ ಇದೊಂದು ದಾರಿಯೂ ಆಗಿದೆ. ಪ್ರೋಟಿನ್ನಿಂದ ತುಂಬಿರುವ ರುಗ್ಡಾ ಮತ್ತು ಖುಕ್ರಿ ಅಣಬೆಗಳು ಸೇವಿಸಲು ಚಿಕನ್ ಮಟನ್ನಂತೆಯೇ ರುಚಿಸುತ್ತವೆ.
ಮತ್ತೆ ಇನ್ಯಾಕೆ ತಡ ಎಂದಾದರೂ ಜಾರ್ಖಂಡ್ಗೆ ಭೇಟಿ ನೀಡಿದರೆ ಈ ವೆಜ್ ಮಟನ್ ಸವಿಯಲು ಮರೆಯದಿರಿ.