ಮೇಷ: ಸೂರ್ಯನು ತನ್ನದೇ ಆದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಈ ರಾಶಿ ಬದಲಾವಣೆಯ ವೇಳೆ, ನೀವು ದೇವರು ಮತ್ತು ದೇವತೆಗಳ ಪೂಜೆಗೆ ಹೆಚ್ಚು ಆಸಕ್ತಿ ತೋರಲಿದ್ದೀರಿ. ಹೆಚ್ಚಿನ ಗಳಿಕೆಯ ಹೊಸ ಬಾಗಿಲುಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಬುದ್ಧಿಮತ್ತೆಯು ಚುರುಕಾಗಲಿದೆ. ನೀವು ನಿಮ್ಮ ತಂದೆಯ ಆಶೀರ್ವಾದವನ್ನು ಪಡೆಯಲಿದ್ದೀರಿ. ಮಾನವ ಮೌಲ್ಯಗಳು ನಿಮ್ಮನ್ನು ಬಲಿಷ್ಠಗೊಳಿಸಲಿವೆ. ಇದೇ ವೇಳೆ, ನಿಮ್ಮ ಮಗುವಿನ ಕುರಿತು ನಿಮಗೆ ಚಿಂತೆ ಕಾಡಬಹುದು.
ಪರಿಹಾರ - ಪ್ರತಿ ದಿನವೂ ಸೂರ್ಯ ದೇವರನ್ನು ಪೂಜಿಸಿ ಮತ್ತು ತಾಮ್ರದ ಪಾತ್ರೆಯಲ್ಲಿ ಈ ದೇವರಿಗೆ ಒಂದಷ್ಟು ನೀರನ್ನು ಅರ್ಪಿಸಿ.
ವೃಷಭ: ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುವಾಗ ನೀವು ಹೊಸ ಆಸ್ತಿ ಖರೀದಿಸಲು ಆಸಕ್ತಿ ತೋರಲಿದ್ದೀರಿ. ನೀವು ವಾಹನವನ್ನೂ ಖರೀದಿಸಲಿದ್ದೀರಿ. ನೀವು ಸರ್ಕಾರಿ ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿ ಲಾಭ ಪಡೆಯಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನೀವು ಶಿಸ್ತನ್ನು ವೃದ್ಧಿಸಲು ಪ್ರಯತ್ನಿಸಲಿದ್ದೀರಿ.
ಪರಿಹಾರ - ಪ್ರತಿ ದಿನ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
ಮಿಥುನ: ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಧೈರ್ಯ ಹೆಚ್ಚಾಗಲಿದೆ. ನಿಮ್ಮ ವ್ಯವಹಾರವನ್ನು ವೃದ್ಧಿಸುವುದಕ್ಕಾಗಿ ನೀವು ಅನೇಕ ಯೋಜನೆಗಳಲ್ಲಿ ಕೆಲಸ ಮಾಡಲಿದ್ದೀರಿ. ಇಡೀ ತಿಂಗಳಿನಲ್ಲಿ ನಿಮ್ಮ ಗೌರವ ಮತ್ತು ಪೂಜ್ಯಭಾವನೆಯಲ್ಲಿ ವೃದ್ಧಿ ಉಂಟಾಗಲಿದೆ. ನೀವು ಉತ್ತಮ ಹಣ ಗಳಿಸಲಿದ್ದೀರಿ. ಸರ್ಕಾರಿ ಇಲಾಖೆಗೆ ಸಂಬಂಧಿಸಿದ ಕೆಲವು ಕೆಲಸಗಳಲ್ಲಿ ನೀವು ಸಾಕಷ್ಟು ಗಳಿಕೆ ಮಾಡಲಿದ್ದೀರಿ. ನೀವು ಹಿರಿಯ ಅಧಿಕಾರಿಗಳ ಸಂಪರ್ಕಕ್ಕೆ ಬರಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ.
ಪರಿಹಾರ - ಪ್ರತಿ ದಿನವೂ ʻʻಓಂ ಸೂರ್ಯಾಯ ನಮಾಃʼʼ ಮಂತ್ರವನ್ನು ಪಠಿಸಿ.
ಕರ್ಕಾಟಕ: ಈ ತಿಂಗಳಿನಲ್ಲಿ ನೀವು ನಿಮ್ಮ ಆಯ್ಕೆಯ ಆಹಾರವನ್ನು ಆನಂದಿಸಲಿದ್ದೀರಿ. ನಿಮ್ಮ ಕುಟುಂಬದ ಗೌರವ ಮತ್ತು ಪ್ರತಿಷ್ಠೆಯಲ್ಲಿ ವೃದ್ಧಿ ಉಂಟಾಗಲಿದೆ. ಇದೇ ವೇಳೆ ನೀವು ಸಾಕಷ್ಟು ಖರ್ಚುವೆಚ್ಚ ಮಾಡಲಿದ್ದೀರಿ. ನೀವು ಇತರರ ಜೊತೆ ವಿನಯದಿಂದ ವರ್ತಿಸಬೇಕು. ನಿಮ್ಮ ಮಾತು ಕಹಿಯಾಗಬಹುದು. ಹೀಗಾಗಿ ಎಚ್ಚರ ವಹಿಸಿ. ವಿದೇಶಗಳಿಗೆ ಸಂಬಂಧಿಸಿದ ಕೆಲಸಗಳ ಕುರಿತು ನೀವು ಕಠಿಣ ಶ್ರಮ ವಹಿಸಬೇಕು.
ಪರಿಹಾರ - ವಿಷ್ಣು ದೇವರನ್ನು ಪೂಜಿಸಿ.
ಸಿಂಹ: ಇಂದು ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಮುಂದಿನ ಒಂದು ತಿಂಗಳ ಕಾಲ ಸೂರ್ಯನು ನಿಮ್ಮ ರಾಶಿಯಲ್ಲಿ ನೆಲೆಸಲಿದ್ದಾನೆ. ಈ ಹಂತದಲ್ಲಿ ನಿಮ್ಮ ನಾಯಕತ್ವ ಗುಣವು ವೃದ್ಧಿಸಲಿದೆ. ನಿಮ್ಮ ಪ್ರಭಾವವು ಹೆಚ್ಚಲಿದೆ. ವ್ಯವಹಾರದಲ್ಲಿ ನೀವು ಲಾಭ ಮಾಡಲಿದ್ದೀರಿ. ನಿಮ್ಮ ವರ್ತನೆಯಲ್ಲಿ ಆವೇಗಯುಕ್ತ ಹಠಾತ್ ಪ್ರವೃತ್ತಿ ಕಂಡು ಬರಲಿದೆ. ನಿಮ್ಮಲ್ಲಿ ಅಹಂ ಸಹ ಕಂಡುಬರಲಿದೆ. ನೀವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ. ಆದರೆ ನಿಮ್ಮ ವ್ಯವಹಾರದ ಕಲ್ಯಾಣದ ಕುರಿತು ಸಹ ನೀವು ಯೋಚಿಸಲಿದ್ದೀರಿ.
ಪರಿಹಾರಗಳು - ಶ್ರೀ ಸೂರ್ಯ ಅಷ್ಟಕ ಪಠಿಸಿ.
ಕನ್ಯಾ: ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುವುದರಿಂದ ಕನ್ಯಾ ರಾಶಿಯವರು ವಿದೇಶಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ಗಳಿಸಲಿದ್ದಾರೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧ ಹೊಂದಲಿದ್ದೀರಿ. ಆದರೂ, ನಿಮ್ಮ ಮಾತಿನಲ್ಲಿ ಒರಟುತನ ಕಾಣಲಿದೆ. ಕಾನೂನಿನ ವಿಚಾರಗಳಲ್ಲಿ ನಿಮಗೆ ವಿಳಂಬಿತ ಯಶಸ್ಸು ದೊರೆಯಬಹುದು. ಅಲ್ಲದೆ, ನೀವು ನಿಮ್ಮ ವಿರೋಧಿಗಳನ್ನು ಸದೆಬಡಿಯಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ಆವೇಗಯುಕ್ತ ಪ್ರವೃತ್ತಿಯನ್ನು ದೂರವಿಡಿ.
ಪರಿಹಾರ - ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ನಿಮ್ಮ ಮನೆಯ ಪೂರ್ವದ ಭಾಗದ ಗೋಡೆಯಲ್ಲಿಡಿ.
ತುಲಾ: ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ಇಚ್ಛೆಗಳು ಕೈಗೂಡಲಿವೆ. ನಿಮ್ಮ ಚಿಂತೆಗಳು ದೂರವಾಗಲಿವೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಸರ್ಕಾರಿ ಇಲಾಖೆಗೆ ಸಂಬಂಧಿಸಿದ ಕೆಲವು ಕೆಲಸಗಳಲ್ಲಿ ನೀವು ಸಾಕಷ್ಟು ಗಳಿಕೆಯನ್ನು ಮಾಡಲಿದ್ದೀರಿ. ಕೆಲವು ಸರ್ಕಾರಿ ಯೋಜನೆಗಳಿಂದ ನೀವು ಲಾಭ ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.
ಪರಿಹಾರ - ಭಾನುವಾರವಂದು ವಿಷ್ಣು ದೇವರನ್ನು ಪೂಜಿಸಿ ಸಿಹಿತಿಂಡಿಗಳನ್ನು ಅರ್ಪಿಸಿ.
ವೃಶ್ಚಿಕ: ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ನೀವು ನಿಮ್ಮ ಕೆಲಸದಲ್ಲಿ ಸಾಕಷ್ಟು ಗಳಿಕೆ ಮಾಡಲಿದ್ದೀರಿ. ನಿಮ್ಮ ಕೆಲಸದಲ್ಲಿ ನಿಮಗೆ ಬಡ್ತಿ ಸಿಗಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಪೂರೈಸಲಿದ್ದೀರಿ ಹಾಗೂ ದಕ್ಷ ವ್ಯಕ್ತಿ ಎನಿಸಲಿದ್ದೀರಿ. ಸರ್ಕಾರಿ ವಲಯದಲ್ಲಿ ನೀವು ಲಾಭ ಗಳಿಸಲಿದ್ದೀರಿ.
ಪರಿಹಾರ - ಪ್ರತಿ ದಿನವೂ ಸೂರ್ಯೋದಯದ ಸಂದರ್ಭದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿ.
ಧನು: ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಸಮಾಜದ ಪ್ರತಿಷ್ಠಿತ ಜನರ ನಡುವೆ ನಿಮಗೂ ಸ್ಥಾನ ದೊರೆಯಲಿದೆ. ಅಲ್ಲದೆ ಕಾರ್ಯಸ್ಥಳದಲ್ಲಿ ನಿಮಗೆ ನಿಮ್ಮ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ನಿಮ್ಮ ತಂದೆ ನಿಮ್ಮ ಕುರಿತು ಅಭಿಮಾನ ವ್ಯಕ್ತಪಡಿಸಲಿದ್ದಾರೆ. ಇದೇ ವೇಳೆ ಈ ತಿಂಗಳಿನಲ್ಲಿ ನಿಮ್ಮ ತಂದೆಯ ಆರೋಗ್ಯದ ಕುರಿತು ಕಾಳಜಿ ವಹಿಸಿ.
ಪರಿಹಾರ - ಭಾನುವಾರದಂದು ಯಾವುದಾದರೂ ದೇವಸ್ಥಾನದಲ್ಲಿ ಬೆಲ್ಲವನ್ನು ದಾನ ಮಾಡಿ.
ಮಕರ: ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುವಾಗ ನೀವು ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ನಿಮ್ಮ ಖರ್ಚು-ವೆಚ್ಚಗಳಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಗೌರವಕ್ಕೆ ಕುಂದು ಉಂಟಾಗಬಹುದು. ಈ ತನಕ ನೀವು ಬಚ್ಚಿಟ್ಟಿದ್ದ ಕೆಲವು ಗೌಪ್ಯ ಯೋಜನೆಗಳು ಬಹಿರಂಗಗೊಳ್ಳಬಹುದು. ದೇವರ ಪ್ರಾರ್ಥನೆಯು ನಿಮಗೆ ಸಂತೃಪ್ತಿ ನೀಡಬಹುದು. ದೇವಸ್ಥಾನ ಅಥವಾ ಇತರ ಧಾರ್ಮಿಕ ಸ್ಥಳಗಳಿಗೆ ನೀವು ಏನಾದರೂ ದಾನಧರ್ಮ ಮಾಡಬಹುದು. ನೀವು ದೇವರ ಪ್ರಾರ್ಥನೆಗೆ ಗಮನ ಹರಿಸಲಿದ್ದು ಇದು ನಿಮ್ಮ ಪಾಲಿಗೆ ಮಾನಸಿಕ ಶಾಂತಿಯನ್ನು ತಂದು ಕೊಡಲಿದೆ.
ಪರಿಹಾರ - ಸೂರ್ಯ ದೇವರಿಗೆ ಪ್ರತಿ ದಿನವೂ ನೀರಿನ ಆರ್ಘ್ಯ ಅರ್ಪಿಸಿ.
ಕುಂಭ: ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುವ ಕಾರಣ ನಿಮ್ಮ ವ್ಯವಹಾರದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಲಾಭದಲ್ಲಿ ವೃದ್ಧಿ ಉಂಟಾಗಲಿದೆ. ಸಮಾಜದಲ್ಲಿರುವ ಜನರು ನಿಮ್ಮನ್ನು ಬೆಂಬಲಿಸಲಿದ್ದಾರೆ. ನಿಮ್ಮ ಜನಪ್ರಿಯತೆಯಲ್ಲಿಯೂ ವೃದ್ಧಿ ಉಂಟಾಗಲಿದೆ. ಇದೇ ವೇಳೆ, ನಿಮ್ಮ ವೈವಾಹಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಉಂಟಾಗಬಹುದು. ಹೀಗಾಗಿ ಈ ಹಂತದಲ್ಲಿ ಒಂದಷ್ಟು ಮಟ್ಟಿಗೆ ಮೌನಕ್ಕೆ ಶರಣಾಗಿ. ಮೌನಕ್ಕೆ ಶರಣಾದರೆ ಪರಿಸ್ಥಿತಿಯು ಬಿಗಡಾಯಿಸುವುದನ್ನು ತಪ್ಪಿಸಬಹುದು.
ಪರಿಹಾರ - ಸರಸ್ವತಿ ಮಾತೆಯನ್ನು ಪೂಜಿಸಿ ಮತ್ತು ಆಕೆಯ ವಿಗ್ರಹ ಅಥವಾ ಚಿತ್ರದ ಮೇಲೆ ಹಳದಿ ಹೂಗಳನ್ನು ಇಡಿ.
ಮೀನ: ಈ ತಿಂಗಳಿನಲ್ಲಿ ನೀವು ನ್ಯಾಯಾಲಯದ ಪ್ರಕರಣದಲ್ಲಿ ಗೆಲುವು ಸಾಧಿಸಲಿದ್ದೀರಿ ಅಥವಾ ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ಗಳಿಸಲಿದ್ದೀರಿ. ವಿರೋಧಿಗಳ ಕುರಿತು ನೀವು ಕಟುವಾಗಿ ವರ್ತಿಸಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ವ್ಯತ್ಯಯ ಉಂಟಾಗಬಹುದು. ಬ್ಯಾಂಕಿನ ಸಾಲ ಪಡೆಯುವುದರಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನೀವು ಸ್ಪರ್ಧೆಯೊಂದನ್ನು ಗೆಲ್ಲಲಿದ್ದೀರಿ.
ಪರಿಹಾರ - ಶ್ರೀ ಗಾಯತ್ರಿ ಚಾಲೀಸಾ ಪಠಿಸಿ.