ETV Bharat / bharat

ನಿಮ್ಮ ಮಾತೃಭಾಷೆಯನ್ನ ಹೆಮ್ಮೆಯಿಂದ ಮಾತನಾಡಿ - ಪ್ರಧಾನಿ ಮೋದಿ

ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಇಂತಹ ಮಹತ್ವದ ಪರಂಪರೆಯನ್ನು ನಾವು ಹೊಂದಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡಬೇಕು. ಭಾರತದ ಜನರು 121 ಪ್ರಕಾರದ ಮಾತೃಭಾಷೆಗಳೊಂದಿಗೆ ಸಂಬಂಧ ಹೊಂದಿದ್ದಾರೆ..

PM Modi
PM Modi
author img

By

Published : Feb 27, 2022, 2:19 PM IST

ನವದೆಹಲಿ : ಫೆಬ್ರವರಿ 21 ಅಂತಾರಾಷ್ಟ್ರೀಯ ಮಾತೃಭಾಷಾ ದಿನವಾಗಿದೆ. ಈ ಬಗ್ಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 86ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರು ತಮ್ಮ ಮಾತೃಭಾಷೆಯನ್ನು ಹೆಮ್ಮೆಯಿಂದ ಮಾತನಾಡಬೇಕು ಎಂದು ಕರೆ ನೀಡಿದ್ದಾರೆ.

ನಮ್ಮ ತಾಯಿಯು ನಮ್ಮ ಜೀವನವನ್ನು ರೂಪಿಸುವ ರೀತಿಯಲ್ಲಿ, ಮಾತೃಭಾಷೆಯು ನಮ್ಮ ಜೀವನವನ್ನು ರೂಪಿಸುತ್ತದೆ, ತಾಯಿ ಮತ್ತು ಮಾತೃಭಾಷೆ ಎರಡೂ ಒಟ್ಟಿಗೆ ಜೀವನದ ಅಡಿಪಾಯವನ್ನು ಬಲಪಡಿಸಲು ಸಾಧ್ಯ. ಹಾಗೆಯೇ ನಾವು ನಮ್ಮ ತಾಯಿಯನ್ನಾಗಲಿ, ಮಾತೃಭಾಷೆಯನ್ನಾಗಲಿ ತ್ಯಜಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಇಂತಹ ಮಹತ್ವದ ಪರಂಪರೆಯನ್ನು ನಾವು ಹೊಂದಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡಬೇಕು. ಭಾರತದ ಜನರು 121 ಪ್ರಕಾರದ ಮಾತೃಭಾಷೆಗಳೊಂದಿಗೆ ಸಂಬಂಧ ಹೊಂದಿದ್ದಾರೆ.

ಇದರಲ್ಲಿ 14 ಭಾಷೆಗಳಲ್ಲಿ ದಿನನಿತ್ಯ ಒಂದು ಕೋಟಿಗೂ ಹೆಚ್ಚು ಜನರು ಮಾತನಾಡುತ್ತಾರೆ. ಇಷ್ಟು ಜನರನ್ನು ಅನೇಕ ಯುರೋಪಿಯನ್ ರಾಷ್ಟ್ರಗಳು ತಮ್ಮ ಒಟ್ಟು ಜನಸಂಖ್ಯೆಯನ್ನಾಗಿ ಕೂಡ ಹೊಂದಿಲ್ಲ ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ: ಕಳೆದ 7 ವರ್ಷಗಳಲ್ಲಿ ಭಾರತವು 200ಕ್ಕೂ ಹೆಚ್ಚು ಅಮೂಲ್ಯ ವಿಗ್ರಹಗಳನ್ನು ಮರಳಿ ತಂದಿದೆ - ಮೋದಿ

ನಮ್ಮ ಮಾತೃಭಾಷೆಯನ್ನು ನಾವು ಹೆಮ್ಮೆಯಿಂದ ಮಾತನಾಡಬೇಕು. ನಮ್ಮ ಭಾರತವು ಭಾಷೆಗಳ ವಿಷಯದಲ್ಲಿ ತುಂಬಾ ಶ್ರೀಮಂತವಾಗಿದೆ. ನಮ್ಮ ಭಾಷೆಯ ದೊಡ್ಡ ಸೌಂದರ್ಯವೆಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಕಚ್‌ನಿಂದ ಕೊಹಿಮಾದವರೆಗೆ, ನೂರಾರು ಭಾಷೆಗಳು, ಸಾವಿರಾರು ಉಪಭಾಷೆಗಳು ಒಂದಕ್ಕೊಂದು ಭಿನ್ನ. ಆದರೆ, ಪರಸ್ಪರ ಸಂಯೋಜಿತವಾಗಿವೆ. ಹಲವು ಭಾಷೆಗಳಾದರೂ ಅಭಿವ್ಯಕ್ತಿ ಒಂದೇ ಆಗಿದೆ ಎಂದು ಬಣ್ಣಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.