ETV Bharat / bharat

ಭಾರತದಲ್ಲಿ ಬೌದ್ಧ ಧರ್ಮ ಮರುಹುಟ್ಟು ಪಡೆದಿದೆ: ಮೋದಿ ಶ್ಲಾಘಿಸಿದ ದಕ್ಷಿಣ ಕೊರಿಯಾದ ಬೌದ್ಧ ಸನ್ಯಾಸಿ - ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ

ಏಪ್ರಿಲ್ 20 ಮತ್ತು 21 ರವರೆಗೆ ಎರಡು ದಿನಗಳ ಕಾಲ ನಡೆದ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಜಂಗ್ಟೋ ಸೊಸೈಟಿಯ ಅಧ್ಯಕ್ಷ ಪೊಮ್ನ್ಯುನ್ ಸುನಿಮ್ ಅವರು ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ಶ್ಲಾಘಿಸಿದರು.

Buddhist monk
ಬೌದ್ಧ ಸನ್ಯಾಸಿ
author img

By

Published : Apr 22, 2023, 2:23 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೇಶದಲ್ಲಿ ಬೌದ್ಧಧರ್ಮವು ದೊಡ್ಡ ಪ್ರಮಾಣದಲ್ಲಿ ಪುನರುಜ್ಜೀವನ ಕಂಡಿದೆ. ಜಾಗತಿಕ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವಲ್ಲಿ ದೇಶವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ, ವೇಗವಾಗಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ವಿಶ್ವದ ಮೂರು ದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಮುನ್ನುಗ್ಗಲಿದೆ ಎಂದು ದಕ್ಷಿಣ ಕೊರಿಯಾದ ಉನ್ನತ ಬೌದ್ಧ ಸನ್ಯಾಸಿಯೊಬ್ಬರು ಶುಕ್ರವಾರ ಹೇಳಿದರು.

ವೆಂ. ಜಂಗ್ಟೋ ಸೊಸೈಟಿಯ ಅಧ್ಯಕ್ಷ ಮತ್ತು ದಕ್ಷಿಣ ಕೊರಿಯಾದ ಗೈಡಿಂಗ್ ಧರ್ಮ ಮಾಸ್ಟರ್‌ನ ಸಂಸ್ಥಾಪಕ ಪೊಮ್ನ್ಯುನ್ ಸುನಿಮ್ ಅವರು ಬೌದ್ಧ ಧರ್ಮದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಣಯಗಳನ್ನು ಶ್ಲಾಘಿಸಿದರು. "ಈಟಿವಿ ಭಾರತ"ದೊಂದಿಗೆ ಭಾರತದ ವಿದೇಶಾಂಗ ನೀತಿಯಲ್ಲಿ ಬೌದ್ಧಧರ್ಮದ ಪ್ರಾಮುಖ್ಯತೆ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಭಾರತವು ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ಜೊತೆಗೆ ದೇಶದಲ್ಲಿ ಬೌದ್ಧಧರ್ಮ ದೊಡ್ಡ ಮಟ್ಟದಲ್ಲಿ ಪುನರುಜ್ಜೀವನ ಕಂಡಿದೆ.

2000 ವರ್ಷಗಳ ಹಿಂದೆ ಬೌದ್ಧ ಧರ್ಮವು ಭಾರತದಿಂದ ಸಮುದ್ರ ಮಾರ್ಗದ ಮೂಲಕ ಕೊರಿಯಾ ತಲುಪಿತು. ನಾವು ಬುದ್ಧನ ಬೋಧನೆಗಳ ಪ್ರಕಾರ ಬದುಕಿದರೆ ಜಾಗತಿಕ ಪರಿಸರ ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಬಹುದು ಎಂದರು.

‘Responses to Contemporary challenges: Philosophy to Praxis’ ಎಂಬ ವಿಷಯದಡಿ ಭಾರತದ ಸಂಸ್ಕೃತಿ ಸಚಿವಾಲಯವು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಏಪ್ರಿಲ್ 20-21 ರವರೆಗೆ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಭಾಗವಹಿಸಿದ ಬೌದ್ಧ ವಿದ್ವಾಂಸ ಪೊಮ್ನ್ಯುನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

"ಪ್ರಸ್ತುತ ಭಾರತವು ವೇಗವಾಗಿ ಬೆಳೆಯುತ್ತಿದೆ ಮತ್ತು ಶೀಘ್ರದಲ್ಲೇ ಇದು ವಿಶ್ವದ ಮೂರು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಲಿದೆ. ಇಡೀ ಜಗತ್ತು ಇದೀಗ ಸಂಘರ್ಷದಲ್ಲಿದೆ. ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವಲ್ಲಿ ಭಾರತವು ಸಕ್ರಿಯವಾಗಿ ಪಾತ್ರ ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮೃದು ಶಕ್ತಿಯ ಕಲ್ಪನೆಯು ಭಾರತದ ವಿದೇಶಾಂಗ ನೀತಿಯ ಮೇಲೆ ಹಿಡಿತ ಸಾಧಿಸಿದೆ. ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ಬೌದ್ಧ ನಂಬಿಕೆಯೊಂದಿಗೆ ಭಾರತದ ಐತಿಹಾಸಿಕ ಸಂಬಂಧಗಳು ಮಹತ್ವದ್ದಾಗಿವೆ ಮತ್ತು ಜಾಗತಿಕ ಸಮುದಾಯದಲ್ಲಿ ಹೆಚ್ಚು ಮೆಚ್ಚುಗೆ ಪಡೆದಿವೆ" ಎಂದರು.

ಇದನ್ನೂ ಓದಿ : ಇಲ್ಲಿ ಜನರ ಮೃತದೇಹ ಸುಡಲು ಬೇಕು ಬೌದ್ಧ ಲಾಮಾಗಳ ಅನುಮತಿ

ಮೆಕ್ಸಿಕೋದ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ನಿರ್ದೇಶಕ ಭಿಕು ನಂದಿಸೆನ್ಸಾ ಜಿ ಮಾತನಾಡಿ "ಭಾರತ ಬುದ್ಧನ ನಾಡು, ಬುದ್ಧ ಇಲ್ಲಿಯೇ ಜನಿಸಿದ್ದಾನೆ. ಭೌಗೋಳಿಕ, ರಾಜಕೀಯ ಸನ್ನಿವೇಶಕ್ಕೆ ಬಂದಾಗ ಬೌದ್ಧ ರಾಜತಾಂತ್ರಿಕತೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಯುದ್ಧಗಳು ಮತ್ತು ಪರಿಸರ ಬಿಕ್ಕಟ್ಟುಗಳಂತಹ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬುದ್ಧನ ಬೋಧನೆಗಳನ್ನು ಬಳಸಬೇಕು. ಬುದ್ಧನ ಬೋಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ಎರಡು ದಿನಗಳ ಶೃಂಗಸಭೆಯಲ್ಲಿ ಮೆಕ್ಸಿಕೊ, ವಿಯೆಟ್ನಾಂ, ಕಾಂಬೋಡಿಯಾ, ದಕ್ಷಿಣ ಕೊರಿಯಾ, ಯುಎಸ್, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ವಿಶ್ವಾದ್ಯಂತ ಖ್ಯಾತ ವಿದ್ವಾಂಸರು, ಸಂಘದ ಮುಖಂಡರು ಮತ್ತು ಧರ್ಮಾಭಿಮಾನಿಗಳು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.