ETV Bharat / bharat

ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ Kadambini Ganguly ಜನ್ಮದಿನ: Google ಗೌರವ - Kadambini Ganguly Life

ಪಾಶ್ಚಾತ್ಯ ಮದ್ದಿನ ತರಬೇತಿ ಪಡೆದುಕೊಂಡ ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಜನ್ಮದಿನದ ಹಿನ್ನೆಲೆಯಲ್ಲಿ ಗೂಗಲ್​ ತನ್ನ ಡೂಡಲ್​ನಲ್ಲಿ ಗೌರವ ಸಮರ್ಪಣೆ ಮಾಡಿದೆ.

Kadambini Ganguly'
ಕದಂಬಿನಿ ಗಂಗೂಲಿ
author img

By

Published : Jul 18, 2021, 6:48 AM IST

ನವದೆಹಲಿ: ಕದಂಬಿನಿ ಗಂಗೂಲಿ ಬ್ರಿಟಿಷ್ ಸಾಮ್ರಾಜ್ಯದಲ್ಲಿದ್ದ ಇಬ್ಬರು ಮಹಿಳಾ ಪದವೀಧರರಲ್ಲಿ ಒಬ್ಬರು. ಅಷ್ಟೇ ಅಲ್ಲದೆ ಪಾಶ್ಚಾತ್ಯ ಮದ್ದಿನ(English Medicine) ತರಬೇತಿ ಪಡೆದುಕೊಂಡ ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು ಈ ಮಹಾನ್​ ಸಾಧಕಿಯ ಜನುಮದಿನ. ಈ ಹಿನ್ನೆಲೆಯಲ್ಲಿ ಗೂಗಲ್​ ತನ್ನ ಡೂಡಲ್​ನಲ್ಲಿ ಅವರಿಗೆ ಗೌರವ ಸಮರ್ಪಿಸಿದೆ.

ಬ್ರಹ್ಮ ಸಮಾಜ ಸುಧಾರಕ ಬ್ರಜ ಕಿಶೋರ್ ಬಸು ಅವರ ಮಗಳಾಗಿ 18 ಜುಲೈ 1861 ರಂದು ಬಿಹಾರದ ಬಗಲ್ಪುರದಲ್ಲಿ ಕದಂಬಿನಿ ಜನಿಸಿದರು. ಇವರ ಮೂಲ ಬಾಂಗ್ಲಾದೇಶದ ಬಾರಿಸಲ್ ಪ್ರದೇಶದ ಚಾಂದ್ಸಿ ಗ್ರಾಮ. ಇವರ ತಂದೆ ಮತ್ತು ಅಭಯ್ ಚರಣ್ ಮಲ್ಲಿಕ್ ಎಂಬವರು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರ ಅಭಿವೃದ್ಧಿಗಾಗಿ "ಬಗಲ್ಪುರ ಮಹಿಳಾ ಸಮಿತಿ"ಯನ್ನು 1893ರಲ್ಲಿ ಸ್ಥಾಪನೆ ಮಾಡಿದರು.

ಕದಂಬಿನಿ ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಶಾಸ್ತ್ರ ಪೂರ್ಣಗೊಳಿಸಿದ್ದರು. 1886ರಲ್ಲಿ ಅವರಿಗೆ ಬಂಗಾಳಿ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಪದವಿ ಪ್ರದಾನ ಮಾಡಲಾಯಿತು.

ಈ ಬಳಿಕ ಆನಂದಿ ಗೋಪಾಲ್ ಜೋಶಿಯಾರೊಂದಿಗೆ ಸೇರಿ ಪಾಶ್ಚಿಮಾತ್ಯ ಮದ್ದನ್ನು ಆಚರಣೆಗೆ ತಂದ ಇವರು ಮೊದಲ ಭಾರತೀಯ ಮಹಿಳಾ ವೈದ್ಯರಾದರು. ಈ ಕಾಲದಲ್ಲಿ ಕದಂಬಿನಿಯವರು ಮಡಿವಂತಿಕೆಯನ್ನು ನಂಬಿಕೊಂಡ ಸಂಪ್ರದಾಯಸ್ಥ ಸಮಾಜಗಳನ್ನು ವಿರೋಧಿಸಿ, ಅದರಲ್ಲಿ ಜಯ ಸಾಧಿಸಿದರು. ಬಳಿಕ ಲಂಡನ್​​ಗೆ 1892ರಲ್ಲಿ ತೆರಳಿ ಈಡನ್​ಬರ್ಗ್​ ವಿವಿಯಲ್ಲಿ ಎಲ್​ಆರ್​ಸಿಪಿ, ಗ್ಲಾಸುಗೌ ವಿದ್ಯಾಲಯದಲ್ಲಿ ಎಲ್​ಆರ್​ಸಿಎಸ್​ ಮತ್ತು ಡಬ್ಲಿನ್ ಸಂಸ್ಥೆಯಲ್ಲಿ ಜಿಎಫ್​ಪಿಎಸ್​ ಪರೀಕ್ಷೆಗಳನ್ನು ಬರೆದು, ತೇರ್ಗಡೆ ಹೊಂದಿ ಭಾರತಕ್ಕೆ ಹಿಂತಿರುಗಿದರು. ನಂತರ ಲೇಡಿ ದಫ್ಫ್ರಿನ್ ಆಸ್ಪತ್ರೆಯಲ್ಲಿ ಕೆಲಕಾಲ ಕೆಲಸ ಮಾಡಿ, ಕೊನೆಗೆ ತಮ್ಮದೇ ಅದ ಖಾಸಗಿ ಆಸ್ಪತ್ರೆ ತೆರೆದು ಜನಸೇವೆಗೆ ಮುಂದಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.