ಕೋಲ್ಕತ್ತಾ: ಎದೆನೋವಿನ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ನಾಳೆ ಸ್ಟಂಟ್ ಅಳವಡಿಕೆ ಮಾಡಲಾಗುವುದು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ನಾಳೆ ಡಾ. ದೇವಿ ಶೆಟ್ಟಿ ಸಮ್ಮುಖದಲ್ಲಿ ಸ್ಟಂಟ್ ಅಳವಡಿಕೆ ಮಾಡಲಾಗುವುದು ಎಂದು ವುಡ್ಲ್ಯಾಂಡ್ ಆಸ್ಪತ್ರೆ ಮಾಹಿತಿ ನೀಡಿದೆ.
-
#UPDATE | Dr Saptarshi Basu & Dr Saroj Mondal of Woodlands hospital are attending Sourav Ganguly. Dr Aftab Khan will do the stenting at Apollo hospital tomorrow in presence of Dr Devi Shetty: Woodlands Hospital in Kolkata
— ANI (@ANI) January 27, 2021 " class="align-text-top noRightClick twitterSection" data="
Ganguly is admitted to Apollo Hospital. https://t.co/Q3L669CkrS
">#UPDATE | Dr Saptarshi Basu & Dr Saroj Mondal of Woodlands hospital are attending Sourav Ganguly. Dr Aftab Khan will do the stenting at Apollo hospital tomorrow in presence of Dr Devi Shetty: Woodlands Hospital in Kolkata
— ANI (@ANI) January 27, 2021
Ganguly is admitted to Apollo Hospital. https://t.co/Q3L669CkrS#UPDATE | Dr Saptarshi Basu & Dr Saroj Mondal of Woodlands hospital are attending Sourav Ganguly. Dr Aftab Khan will do the stenting at Apollo hospital tomorrow in presence of Dr Devi Shetty: Woodlands Hospital in Kolkata
— ANI (@ANI) January 27, 2021
Ganguly is admitted to Apollo Hospital. https://t.co/Q3L669CkrS
ಓದಿ: ಚಿಂತೆ ಪಡಬೇಕಾಗಿಲ್ಲ, ಗಂಗೂಲಿ ತಪಾಸಣೆಗಷ್ಟೇ ಬಂದಿದ್ದಾರೆ : ಆಸ್ಪತ್ರೆ ಮಾಹಿತಿ
ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಆಂಜಿಯೊಪ್ಲಾಸ್ಟಿ ಮಾಡಲಾಗಿದ್ದು, ಇದಾದ ಬಳಿಕ ಅವರಿಗೆ ಮತ್ತೆ ಇಂದು ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಡಾ. ಸಪ್ತರ್ಶಿ ಬಸು, ಡಾ. ಸರೋಜ್ ಮೊಂಡಾಲ್ ಹಾಗೂ ಡಾ. ಅಫ್ತಾಬ್ ಖಾನ್ ನೇತೃತ್ವದ ತಂಡ ಡಾ. ದೇವಿ ಶೆಟ್ಟಿ ಸಮ್ಮುಖದಲ್ಲಿ ಸ್ಟಂಟ್ ಅಳವಡಿಕೆ ಮಾಡಲಿದ್ದಾರೆ ಎಂದು ವುಡ್ಲ್ಯಾಂಡ್ ಆಸ್ಪತ್ರೆ ತಿಳಿಸಿದೆ. ಜನವರಿ 6ರಂದು ವುಡ್ಲ್ಯಾಂಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಗಂಗೂಲಿ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.
ತಮ್ಮ ನಿವಾಸದ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಗಂಗೂಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸೌರವ್ ಗಂಗೂಲಿಯವರ ಹೃದಯದ ಅಭಿದಮನಿಯಲ್ಲಿ ಬ್ಲಾಕೇಜ್ ಇರುವ ಬಗ್ಗೆ ಗೊತ್ತಾಗಿತ್ತು.