ETV Bharat / bharat

ಊಹಾಪೋಹಕ್ಕೆ ತೆರೆ ಎಳೆದ ಬಿಸಿಸಿಐ ಬಾಸ್​.. ಜೀವನದ ಹೊಸ ನಿರ್ಧಾರ ಪ್ರಕಟಿಸಿದ ದಾದಾ - Sourav Ganguly tweet

ತಮ್ಮ 30 ವರ್ಷದ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿ ಜೀವನದ ಹೊಸ ಅಧ್ಯಾಯ ಪ್ರಾರಂಭ ಮಾಡುವುದಾಗಿ ಘೋಷಣೆ ಮಾಡಿ ಎಲ್ಲರ ತಲೆಯಲ್ಲಿ ಹುಳು ಬಿಟ್ಟಿದ್ದ ಗಂಗೂಲಿ ಇದೀಗ ಎಲ್ಲದಕ್ಕೂ ತೆರೆ ಎಳೆದಿದ್ದಾರೆ.

BCCI Sourav Ganguly
BCCI Sourav Ganguly
author img

By

Published : Jun 2, 2022, 5:20 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆ ಮಾಡಿದ ಟ್ವೀಟ್​ವೊಂದು ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ದಾದಾ ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆದು, ರಾಜಕೀಯಕ್ಕೆ ಸೇರ್ಪಡೆಯಾಗಲಿದ್ದಾರೆಂಬ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು, ಇದಕ್ಕೆ ಇದು ಖುದ್ದಾಗಿ ಸ್ಪಷ್ಟನೆ ನೀಡಿರುವ ಗಂಗೂಲಿ, ಹೊಸ ನಿರ್ಧಾರ ಪ್ರಕಟಿಸಿದ್ದಾರೆ.

ಟ್ವೀಟರ್​ ಹಾಗೂ ಇನ್​​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೌರವ್​ ಗಂಗೂಲಿ, ಯಾವುದೇ ಕನಸು ನನಸಾಗಲು ಸರಿಯಾದ ತರಬೇತಿ ಅಗತ್ಯ. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಮಾರ್ಗದರ್ಶಕರಿಗೆ ನೆರವಾಗುವುದಾಗಿ ಘೋಷಣೆ ಮಾಡಿದ್ದಾರೆ. ಶಿಕ್ಷಕರು ಮತ್ತು ತರಬೇತುದಾರರನ್ನು ಬೆಂಬಲಿಸಲು ಮತ್ತು ಅವರು ಬೆಳೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ಆನ್‌ಲೈನ್ ಬೋಧನಾ ಅಪ್ಲಿಕೇಶನ್‌ನೊಂದಿಗೆ ಸಹಯೋಗ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ. ಕ್ಲಾಸ್​ಪ್ಲಸ್​​​ ಆ್ಯಪ್​​​ಗೂ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: 'ಜೀವನದ ಹೊಸ ಅಧ್ಯಾಯ'ದ ಬಗ್ಗೆ ಗಂಗೂಲಿ 'ನಿಗೂಢ' ಟ್ವೀಟ್​.. ರಾಜಕೀಯ ಸೇರ್ತಾರಾ ದಾದಾ?

ನನ್ನ ಹಿಂದಿನ ಪೋಸ್ಟ್ ಬಗ್ಗೆ ಬಹಳಷ್ಟು ಪ್ರಶ್ನೆಗಳು ಉದ್ಭವವಾಗಿದ್ದವು. ಸ್ವಲ್ಪ ಸಮಯದವರೆಗೆ, ನಮ್ಮ ಸಮಾಜಕ್ಕೆ ನಿಸ್ವಾರ್ಥವಾಗಿ ಸಹಾಯ ಮಾಡುತ್ತಿರುವ ಮತ್ತು ಪ್ರತಿದಿನ ಭಾರತವನ್ನು ಶ್ರೇಷ್ಠಗೊಳಿಸುತ್ತಿರುವ ಒಂದು ಗುಂಪಿನ ಬಗ್ಗೆ ನಾನು ಯೋಚಿಸುತ್ತಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​​ ನಮಗೆ ಅದ್ಭುತ ಆಟಗಾರರನ್ನು ಒದಗಿಸಿದೆ, ಆದರೆ, ಎಲ್ಲ ಆಟಗಾರರ ತರಬೇತುದಾರರು ಅವರ ಯಶಸ್ಸಿಗೆ ಬೆವರು ಹಾಗೂ ಕಠಿಣ ಪ್ರಯತ್ನ ನನಗೆ ಪ್ರೇರಣೆ ತುಂಬಿದೆ. ಇದು ಕೇವಲ ಕ್ರಿಕೆಟ್​​​ಗೆ ಮಾತ್ರವಲ್ಲ. ಶೈಕ್ಷಣಿಕ, ಫುಟ್‌ಬಾಲ್‌, ಸಂಗೀತ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ನಾನು ಇಂದು ಹೀಗಾಗುವುದಕ್ಕೆ ಕಾರಣ ನನ್ನ ಎಲ್ಲ ತರಬೇತುದಾರರು ಎಂದು ಹೇಳಬಹುದು, ಅದಕ್ಕಾಗಿ ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಾಲದಿಂದಲೂ ನಾವು ನಟರು, ಆಟಗಾರರು ಮತ್ತು ಯಶಸ್ವಿ ಸಿಇಒಗಳನ್ನು ಅವರು ಮಾಡಿದ ಗಮನಾರ್ಹ ಕೆಲಸಕ್ಕಾಗಿ ವೈಭವೀಕರಿಸುತ್ತಿದ್ದೇವೆ. ನಾವು ನಿಜವಾದ ನಾಯಕರು, ಅವರ ತರಬೇತುದಾರರು ಮತ್ತು ಶಿಕ್ಷಣ ತಜ್ಞರನ್ನು ವೈಭವೀಕರಿಸುವ ಸಮಯ ಬಂದಿದೆ. ನಾನು ಎಲ್ಲಾ ತರಬೇತುದಾರರು, ಶಿಕ್ಷಕರು ಮತ್ತು ಶಿಕ್ಷಕರಿಗಾಗಿ ಏನನ್ನಾದರೂ ಮಾಡಲು ಬಯಸುತ್ತೇನೆ. ಇಂದಿನಿಂದ, ನಾನು ಅವರ ರಾಯಭಾರಿಯಾಗಿ ಅವರೆಲ್ಲರನ್ನು ಬೆಂಬಲಿಸಲು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಿನ್ನೆ ಟ್ವೀಟ್ ಮಾಡಿದ್ದ ಗಂಗೂಲಿ, ನಾನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದೇನೆ ಎಂದು ಟ್ವಿಟರ್​​ನಲ್ಲಿ ಬರೆದಿದ್ದಾರೆ, ಅದು ಬಹುಶಃ ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಜೀವನದ ಈ ಅಧ್ಯಾಯವನ್ನು ಪ್ರವೇಶಿಸುವಾಗ ನೀವು ನನ್ನನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.