ಶಿರಡಿ (ಮಹಾರಾಷ್ಟ್ರ): ಈ ಬಾರಿ ಚಿತ್ರ 500 ಕೋಟಿ ಗಳಿಸಿದರೂ ಐದು ಜನರಿಗೆ ಸಹಾಯ ಮಾಡುವಷ್ಟು ಖುಷಿ ಇಲ್ಲ. ಸಾಯಿ ಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೇನೆ. ಈಗ ನಾನು ಶಿರಡಿಯಲ್ಲಿ ವೃದ್ಧಾಶ್ರಮ ಪ್ರಾರಂಭಿಸಲು ಬಯಸುತ್ತೇನೆ. ಅದಕ್ಕಾಗಿಯೇ ಈ ಭೇಟಿ. ನನ್ನ ಈ ಕನಸು ಶೀಘ್ರದಲ್ಲೇ ನನಸಾಗಲಿ ಎಂದು ಸಾಯಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟ ಸೋನು ಸೂದ್ ತಿಳಿಸಿದರು.
ಹಿಂದಿ ರಾಷ್ಟ್ರ ಭಾಷೆ ಬಗ್ಗೆ ಸುದೀಪ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಮಾನವೀಯತೆಗಿಂತ ಶ್ರೇಷ್ಠವಾದ ಭಾಷೆ ಇನ್ನೊಂದಿಲ್ಲ. ಪ್ರತಿ ಶಾಲೆಯಲ್ಲಿಯೂ ಮಾನವೀಯತೆಯ ಭಾಷೆ ಕಲಿಸಬೇಕು. ಮಾನವೀಯತೆಯ ಭಾಷೆ ಎಲ್ಲ ಭಾಷೆಗಳನ್ನು ಕಲಿಸುತ್ತದೆ ಎಂದಿದ್ದಾರೆ.