ETV Bharat / bharat

ಹರಸಾಹಸದ ಹೊರತಾಗಿಯೂ ಉಸಿರು ನಿಲ್ಲಿಸಿದ ಯುವತಿ; ನೋವಿನ ಸಂತಾಪ ಹೇಳಿದ ಸೋನು ಸೂದ್ - ಸೋನು ಸೂದ್ ಸಹಾಯ

ಕಳೆದೊಂದು ತಿಂಗಳಿನಿಂದ ಸೋಂಕಿನ ವಿರುದ್ಧ ದಿಟ್ಟತನದ ಹೋರಾಟ ನಡೆಸಿದ್ದ ಯುವತಿಯೊಬ್ಬಳು ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಅನ್ಯಾಯದ ಸಾವಿಗೆ ನಟ ಸೋನು ಸೂದ್​ ಮನಮಿಡಿದಿದೆ.

Sonu Sood mourns demise of COVID-19 patient he got airlifted from Nagpur to Hyderabad
ಸೋನು ಸೂದ್​
author img

By

Published : May 8, 2021, 5:17 PM IST

Updated : May 8, 2021, 6:09 PM IST

ಹೈದರಾಬಾದ್ : ಕೊರೊನಾದಿಂದ ಮೃತಪಟ್ಟ ಭಾರತಿ ಎಂಬ 25 ವರ್ಷದ ಮಹಿಳೆಗೆ ಬಹುಭಾಷಾ ನಟ ಸೋನು ಸೂದ್ ಭಾರವಾದ ನೋವಿನಿಂದ ಸಂತಾಪ ಸೂಚಿಸಿದ್ದಾರೆ.

ಸೋಂಕಿನಿಂದ ಬಳಲುತ್ತಿದ್ದ ಭಾರತಿಯನ್ನು ನಟ ಸೋನು ಸೂದ್ ಅವರ ತಂಡ ಮಹಾರಾಷ್ಟ್ರದ ನಾಗ್ಪುರದಿಂದ ಏರ್​ಲಿಫ್ಟ್​ ಮೂಲಕ ಹೈದಬಾದ್​ಗೆ ಕರೆತಂದಿತ್ತು.

ಆದರೆ, ಇಂದು (ಶನಿವಾರ) ಚಿಕಿತ್ಸೆ ಫಲಿಸದೇ ಮಾರಣಾಂತಿಕ ಕಾಯಿಲೆಗೆ ಭಾರತಿ ಬಲಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಗೆದ್ದ ಸೋನು ಸೂದ್​: ಕೋವಿಡ್​ ಸೋಂಕಿತೆಯನ್ನು ನಾಗ್ಪುರ​ದಿಂದ ಹೈದರಾಬಾದ್​ಗೆ ಏರ್​ಲಿಫ್ಟ್ ಮಾಡಿಸಿದ ನಟ​!

ಮೃತ ಭಾರತಿಗೆ ನೋವಿನಿಂದ ಸಂತಾಪ ಸೂಚಿಸಿದ ಸೋನು ಸೂದ್, ಕಳೆದ ಒಂದು ತಿಂಗಳಿನಿಂದ ಈ ಸೋಂಕಿನ ವಿರುದ್ಧ ನೀವು ಹೋರಾಡಿದ್ದೀರಿ. ನಾನು ನಿಮ್ಮನ್ನು ಯಾವತ್ತೂ ಭೇಟಿ ಆಗಲಿಲ್ಲ.

ಆದರೂ ನೀವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆಸಿದ್ದೀರಿ. ನಿಮ್ಮ ಆತ್ಮಕ್ಕೆ ಆ ದೇವರು ಶಾಂತಿಯನ್ನು ತಂದು ಕೊಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಭಾರತಿಯನ್ನು ಬದುಕಿಸಬೇಕೆಂಬ ಆಸೆಯಿಂದ ಇದಕ್ಕೂ ಮುನ್ನ ಸೋನು ಸೂದ್​ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದ್ದರು. ಆದರೆ, ಆಕೆಗೆ ಶ್ವಾಸಕೋಶ ಕಸಿ ಮಾಡುವ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದರಿಂದ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಗೆ ಕರೆತಂದಿದ್ದರು.

  • Bharti, a young girl from Nagpur whom I airlifted on an air ambulance to Hyderabad passed away last night.She battled for her life on an ECMO machine for a month. My heart goes out to the family members and everyone who prayed for her.Wish I could save her. Life is so unfair 💔

    — sonu sood (@SonuSood) May 8, 2021 " class="align-text-top noRightClick twitterSection" data=" ">

ಆದರೆ, ಈ ಶತಾಯಗತಾಯ ಹರಸಾಹಸದ ಹೊರತಾಗಿಯೂ ಕೊರೊನಾ ಆಕೆಯ ಪ್ರಾಣ ಕಿತ್ತುಕೊಂಡಿದ್ದಕ್ಕೆ ನಟ ಸೋನು ಸೂದ್ ನೋವಿನ ವಿದಾಯ ತಿಳಿಸಿದ್ದಾರೆ.

ಇದನ್ನೂ ಓದಿ: ಲಾಕ್​​​ಡೌನ್​​​​ ವೇಳೆ ವಲಸಿಗರಿಗೆ ಉಸಿರಾದ ಸೋನು ಸೂದ್: ​​ಸ್ಪೈಸ್​ಜೆಟ್​ನಿಂದ ಕರುಣಾಮಯಿಗೆ ವಿಶೇಷ ಗೌರವ

ಮಗಳನ್ನು ಕಳೆದುಕೊಂಡ ಪೋಷಕರಿಗೆ ಧೈರ್ಯದ ಮಾತುಗಳನ್ನಾಡಿದ ಅವರು, ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಿವೃತ್ತ ರೈಲ್ವೆ ಅಧಿಕಾರಿಯ ಮಗಳಾದ ಭಾರತಿಯನ್ನು ಕಳೆದ ತಿಂಗಳು ನಾಗ್ಪುರದಿಂದ ಹೈದರಾಬಾದ್​ಗೆ ಕರೆತರಲಾಗಿತ್ತು. ನಟ ಸೋನು ಸೂದ್ ಅವಳ ಜೀವ ಉಳಿಸುವ ಸಲುವಾಗಿ ಸಾಕಷ್ಟು ಶ್ರಮ ವಹಿಸಿದ್ದರು.

Last Updated : May 8, 2021, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.