ETV Bharat / bharat

ಪೆಟ್ರೋಲ್​ ಪಂಪ್ ಸೇಲ್ಸ್​ಮನ್‌ಗೆ ಹಲ್ಲೆಗೈದು ಹಣದ ಬ್ಯಾಗ್ ಎಗರಿಸಿದ ದುಷ್ಕರ್ಮಿಗಳು: ವಿಡಿಯೋ - ಪೆಟ್ರೋಲ್ ಪಂಪ್‌ನಲ್ಲಿ ದರೋಡೆ

ಇಬ್ಬರು ಹೆಲ್ಮೆಟ್​ ಧರಿಸಿದ ದುಷ್ಕರ್ಮಿಗಳು ಬೈಕ್​ನಲ್ಲಿ ಪೆಟ್ರೋಲ್​ ಪಂಪ್​ಗೆ ಬಂದು ಸೇಲ್ಸ್​ಮನ್​ಗೆ ಹಲ್ಲೆ ನಡೆಸಿ, ಆತನ ಬಳಿ ಇದ್ದ ಹಣದ ಬ್ಯಾಗ್​ ದೋಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರಯಾಗಿದೆ.

Petrol Pump Loot Sonipat
ಸೋನಿಪತ್​ ಪೆಟ್ರೋಲ್​ ಪಂಪ್ ದರೋಡೆ
author img

By

Published : Aug 11, 2022, 4:21 PM IST

ಸೋನಿಪತ್: ಹರಿಯಾಣದ ಸೋನಿಪತ್‌ನಲ್ಲಿ ಕಳೆದ ತಡರಾತ್ರಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಹಲ್‌ಗಢ್ ರಸ್ತೆಯಲ್ಲಿರುವ (ಪೆಟ್ರೋಲ್ ಪಂಪ್ ಲೂಟ್ ಸೋನಿಪತ್) ಪೆಟ್ರೋಲ್ ಪಂಪ್‌ನಲ್ಲಿ ದರೋಡೆ ನಡೆಸಿದ್ದಾರೆ. ಕೇವಲ 30-40 ಸೆಕೆಂಡ್‌ಗಳಲ್ಲಿ ಪೆಟ್ರೋಲ್ ಪಂಪ್‌ನ ಸೇಲ್ಸ್‌ಮ್ಯಾನ್‌ನಿಂದ ಹಣ ತುಂಬಿದ ಬ್ಯಾಗ್‌ನೊಂದಿಗೆ ಸವಾರರು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸೋನಿಪತ್​ ಪೆಟ್ರೋಲ್​ ಪಂಪ್ ದರೋಡೆ

ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳು ಬೈಕ್‌ನಿಂದ ಪೆಟ್ರೋಲ್ ಪಂಪ್‌ಗೆ ಬರುತ್ತಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸೇಲ್ಸ್‌ಮ್ಯಾನ್‌ನ ಬಳಿ ಇದ್ದ ಹಣ ತುಂಬಿದ್ದ ಬ್ಯಾಗನ್ನು ಹಿಂದಿನಿಂದ ಕಿತ್ತುಕೊಂಡಿದ್ದು, ಸೇಲ್ಸ್‌ಮ್ಯಾನ್​ಗೆ ಪರಿಸ್ಥಿತಿ ಅರ್ಥವಾಗುವ ಮುನ್ನವೇ ಕೊಡಲಿಯಿಂದ ಇರಿದಿದ್ದಾರೆ. ಸೇಲ್ಸ್ ಮ್ಯಾನ್ ನೆಲಕ್ಕೆ ಬೀಳುತ್ತಿದ್ದಂತೆ ಪಿಸ್ತೂಲ್​ ತೋರಿಸಿ ಪರಾರಿಯಾಗಿದ್ದಾರೆ.

ಗಾಯಗೊಂಡಿರುವ ಸೇಲ್ಸ್‌ಮ್ಯಾನ್ ಶಂಶೇರ್ ತಿಹಾರ್, ಮಲಿಕ್ ಗ್ರಾಮದ ಸೋನಿಪತ್ ನಿವಾಸಿ. ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರೊಂದಿಗೆ ಅಪರಾಧ ವಿಭಾಗದ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಬಿಂದಾಸ್​ ಸಿಗರೇಟ್ ಸೇದಿದ ಪ್ರಯಾಣಿಕ: ​ತನಿಖೆಗೆ ಆದೇಶಿಸಿದ ಸಚಿವ ಸಿಂಧಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.