ETV Bharat / bharat

ಸೋನಿಯಾ, ರಾಹುಲ್‌ ಗಾಂಧಿ ಲಸಿಕೆ ತೆಗೆದುಕೊಂಡಿದ್ದಾರಾ..? - ಕಾಂಗ್ರೆಸ್‌

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೋವಿಡ್‌-19 ವ್ಯಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಪಡೆದಿರುವುದಾಗಿ ಕಾಂಗ್ರೆಸ್‌ ನಾಯಕರು ಸ್ಪಷ್ಪಡಿಸಿದ್ದಾರೆ. ಎಂದಿನಂತೆ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

sonia taken covid jabs govt should inoculate all instead of creating non issues cong
ಸೋನಿಯಾ, ರಾಹುಲ್‌ ಗಾಂಧಿ ಲಸಿಕೆ ತೆಗೆದುಕೊಂಡಿದ್ದಾರಾ..?
author img

By

Published : Jun 17, 2021, 4:21 PM IST

ನವದೆಹಲಿ: ಗಾಂಧಿ ಕುಟುಂಬದವರು ಕೋವಿಡ್‌ ಲಸಿಕೆ ಪಡೆದಿದ್ದಾರಾ ಎಂದು ಬಿಜೆಪಿ ನಾಯಕರು ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇದಕ್ಕೆ ಸ್ಪಷ್ಟನೆ ನೀಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೋವಿಡ್‌-19 ವ್ಯಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಪಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಂತಹ ವಿಷಯಗಳಲ್ಲಿ ಅನಾವಶ್ಯಕವಾಗಿ ಗೊಂದಲಗಳನ್ನು ಸೃಷ್ಟಿಸಬೇಡಿ. ದೇಶದ ಎಲ್ಲ ಪ್ರಜೆಗಳಿಗೂ ಲಸಿಕೆ ನೀಡಬೇಕಾಗಿರುವ ಕರ್ತವ್ಯವನ್ನು ಸರ್ಕಾರ ಪಾಲಿಸಬೇಕು ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಮೊದಲ ಡೋಸ್‌ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ರಂದೀಪ್‌ ಸುರ್ಜೇವಾಲ ಹೇಳಿದ್ದಾರೆ. ರಾಹುಲ್‌ ಗಾಂಧಿ ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಸರಿಯಾದ ಸಮಯಕ್ಕೆ ಲಸಿಕೆ ಪಡೆದಿದ್ದಾರೆ ಎಂದು ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ.

2021ರ ಡಿಸೆಂಬರ್ 31ರೊಳಗೆ 100 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಸಾಧಿಸಲು ಮೋದಿ ಸರ್ಕಾರ ಯಾವುದೇ ಗೊಂದಲ ಸೃಷ್ಟಿಸದೇ ದಿನಕ್ಕೆ 80 ಲಕ್ಷದಿಂದ 100 ಕೋಟಿ ಜನರಿಗೆ ಲಸಿಕೆ ನೀಡುವತ್ತ ಗಮನ ಹರಿಸಬೇಕು.

ಇದು ಲಸಿಕೆಗಳ ವಿತರಣೆಯಲ್ಲಿ ಗಮನಿಸಬೇಕಾದ ರಾಜ ನಿಯಮ. ರಾಹುಲ್ ಗಾಂಧಿಗೆ 2021 ರ ಏಪ್ರಿಲ್ 16 ರಂದು ಲಸಿಕೆ ಹಾಕಲು ನಿರ್ಧರಿಸಲಾಗಿತ್ತು. ಆದರೆ ಅವರಲ್ಲಿ ಕೋವಿಡ್‌ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಏಪ್ರಿಲ್ 18 ರಂದು ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸದ್ಯ ರಾಹುಲ್‌ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ವ್ಯಾಕ್ಸಿನ್‌ ಪಡೆಯಲಿದ್ದಾರೆ ಎಂದು ಸುರ್ಜೇವಾಲ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಧ್ರುವ - ದಕ್ಷಿಣ ಧ್ರುವದಂತಿದ್ದ ಅಮೆರಿಕ - ರಷ್ಯಾ ಮಾತುಕತೆ ಹೇಗಿತ್ತು... ಇಲ್ಲಿದೆ ಸಭೆ ಒಳನೋಟ !

ಮಾರ್ಚ್‌ 28 ರಂದು ಪ್ರಿಯಾಂಕಾ ಗಾಂಧಿ ಮೊದಲ ಕೋವಿಡ್‌ ಡೋಸ್‌ ಪಡೆದ ದಿನವೇ ಆಕೆಯ ಪತಿ ರಾಬರ್ಟ್‌ ವಾದ್ರಾಗೆ ಕೋವಿಡ್‌ ಪಾಸಿಟಿವ್‌ ಬಂದಿತ್ತು. ಬಳಿಕ ಪ್ರಿಯಾಂಕಾಗೂ ಪಾಸಿಟಿವ್‌ ಬಂದಿತ್ತು. ಲಸಿಕೆಯ ಅವಧಿಯನ್ನು ಪಾಲಿಸಿ ಎಲ್ಲರೂ ಲಸಿಕೆ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು

ಪ್ರಧಾನಿ ನರೇಂದ್ರ ಮೋದಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ತಜ್ಞರ ಸಹಾಯವನ್ನು ಪಡೆದು ತ್ವರಿತವಾಗಿ ಭಾರತನ್ನು ಪುನರ್‌ ನಿರ್ಮಾಣ ಮಾಡಬೇಕು ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಕೋವಿಡ್‌ ಮಹಾಮಾರಿಯಿಂದಾಗಿ ವಿಶ್ವದಾದ್ಯಂತ ಬಡತನಕ್ಕೆ ಸಿಲುಕಿದವರ ಪೈಕಿ ಶೇಕಡಾ 57.3 ರಷ್ಟು ಮಂದಿ ಭಾರತದಲ್ಲೇ ಇದ್ದಾರೆ ಎಂದು ವಿಶ್ವಬ್ಯಾಂಕ್‌ ಅಧಿಕಾರಿಗಳು ಹೇಳಿದ್ದಾರೆ ಎಂದರು. ಕೇಂದ್ರ ಸರ್ಕಾರ ಕೋವಿಡ್‌ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.