ETV Bharat / bharat

ಕೋವಿಡ್​​ನಿಂದ ಅನಾಥವಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ; ಪ್ರಧಾನಿಗೆ ಸೋನಿಯಾ ಪತ್ರ - Covid in India

ಕೋವಿಡ್​ ಮಹಾಮಾರಿ ಸಂದರ್ಭದಲ್ಲಿ ಅನೇಕ ಸಲಹೆ ನೀಡಿ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ ಇದೀಗ ಮತ್ತೊಂದು ಪತ್ರ ರವಾನಿಸಿದ್ದಾರೆ.

Sonia writes letter to PM
Sonia writes letter to PM
author img

By

Published : May 20, 2021, 4:36 PM IST

ನವದೆಹಲಿ: ಡೆಡ್ಲಿ ವೈರಸ್ ಕೊರೊನಾ ಸೋಂಕಿನಿಂದಾಗಿ ಅನೇಕ ಮಕ್ಕಳು ತಮ್ಮ ಪೋಷಕರು, ಕುಟುಂಬ ಕಳೆದುಕೊಂಡು ಅನಾಥವಾಗಿದ್ದು, ಅವರ ಮುಂದಿನ ಭವಿಷ್ಯ ಏನು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ.

ಕೋವಿಡ್​ನಿಂದಾಗಿ ಪೋಷಕರು ಅಥವಾ ಕುಟುಂಬದಲ್ಲಿ ಕೆಲಸ ಮಾಡ್ತಿದ್ದ ಸದಸ್ಯರನ್ನ ಕಳೆದುಕೊಂಡಿರುವ ಮಕ್ಕಳಿಗೆ ನವೋದಯ ವಿದ್ಯಾಲಯದಲ್ಲಿ ಉಚಿತವಾಗಿ ಶಿಕ್ಷಣ ನೀಡುವಂತೆ ಕೋರಿ ಅವರು ಪತ್ರ ಬರೆದಿದ್ದಾರೆ. ದೇಶಾದ್ಯಂತ 661 ನವೋದಯ ವಿದ್ಯಾಲಯಗಳಿವೆ. ಇಲ್ಲಿ ಕೋವಿಡ್​ನಿಂದ ಕುಟುಂಬ ಕಳೆದುಕೊಂಡಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬಹುದು ಎಂದಿದ್ದಾರೆ. ಇದು ಸಾಧ್ಯವಾಗದೇ ಹೋದರೆ ಅವರು ಉತ್ತಮ ಭವಿಷ್ಯ ಕಳೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

Sonia writes letter to PM
ಪ್ರಧಾನಿಗೆ ಪತ್ರ ಬರೆದ ಸೋನಿಯಾ ಗಾಂಧಿ

ಇದನ್ನೂ ಓದಿ: ದೇಶದಲ್ಲಿ ಕೋವಿಡ್​​ ಅಬ್ಬರ.. ಈ ವಿಚಾರವಾಗಿ ಮೋದಿಗೆ ಪತ್ರ ಬರೆದ ಸೋನಿಯಾ!

ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಈಗಾಗಲೇ ಅನೇಕ ಮಕ್ಕಳು ತಮ್ಮ ಪೋಷಕರು ಹಾಗೂ ಕುಟುಂಬದ ಸದಸ್ಯರನ್ನ ಕಳೆದುಕೊಂಡು ಅನಾಥವಾಗಿದ್ದಾರೆ. ಇದರ ಮಧ್ಯೆ ಸೋನಿಯಾ ಗಾಂಧಿ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ.

ಕೋವಿಡ್​ಗೋಸ್ಕರ ದೇಶಾದ್ಯಂತ ಉಚಿತ ವ್ಯಾಕ್ಸಿನ್​ ನೀಡುವಂತೆ ಸೇರಿ ಅನೇಕ ವಿಷಯವನ್ನಿಟ್ಟುಕೊಂಡು ಸೋನಿಯಾ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.