ಕಾಂಗ್ರೆಸ್ ಸಂಸದೀಯ ಸ್ಥಾನಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಸೋನಿಯಾ ಗಾಂಧಿ - ಕಾಂಗ್ರೆಸ್ನ ಸಂಸದೀಯ ತಂಡಗಳು
ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು ಕಾಂಗ್ರೆಸ್ನ ಸಂಸದೀಯ ಸ್ಥಾನಗಳ ಪುನಾರಚನೆ ನಡೆದಿರುವುದು ಅಚ್ಚರಿ ಮೂಡಿಸಿದೆ. ಮಾತ್ರವಲ್ಲದೇ, ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಕಾಂಗ್ರೆಸ್ ಈ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ.
ನವದೆಹಲಿ: ಕಾಂಗ್ರೆಸ್ ಪಕ್ಷದ ಸಂಸದೀಯ ಸ್ಥಾನಗಳಲ್ಲಿ ಗುರುತರ ಬದಲಾವಣೆಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿನ ಸಂಸತ್ ಸಮಿತಿಗಳಲ್ಲಿ ತಮ್ಮ ಸದಸ್ಯರಿಗೆ ಇರುವ ಸ್ಥಾನಗಳಲ್ಲಿ ಬದಲಾವಣೆ ತಂದಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲಿ ಪಕ್ಷದ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಯಾಗಿಸಲು ಮತ್ತು ಸುಲಭಗೊಳಿಸಲು ಸಂಸದೀಯ ಸ್ಥಾನಗಳಲ್ಲಿ ನಮ್ಮ ಪಕ್ಷದ ಗುಂಪುಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಗುಂಪುಗಳು ಅಧಿವೇಶನದ ಸಮಯದಲ್ಲಿ ಮತ್ತು ವಿವಿಧ ಅಧಿವೇಶನಗಳ ನಡುವೆ ಮತ್ತು ಸಂಸತ್ನ ಸಮಸ್ಯೆಗಳಿಗೆ ಚರ್ಚಿಸಲು ಸಭೆ ಸೇರಬಹುದು ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.
ಹೊಸ ಬದಲಾವಣೆಯ ಪ್ರಕಾರ, ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿ ಸಂಸದ ಅಧೀರ್ ರಂಜನ್ ಚೌಧರಿ ಮುಂದುವರಿಯಲಿದ್ದಾರೆ. ಇವರ ಜೊತೆಗೆ ಲೋಕಸಭೆಯ ಉಪನಾಯಕನನ್ನಾಗಿ ಗೌರವ್ ಗೊಗೊಯ್, ಮುಖ್ಯ ವಿಪ್ ಆಗಿ ಕೆ.ಸುರೇಶ್, ವಿಪ್ಗಳಾಗಿ ರಾವ್ನೀತ್ ಸಿಂಗ್ ಬಿಟ್ಟು ಮತ್ತು ಮಾಣಿಕಮ್ ಟ್ಯಾಗೋರ್ ಇರಲಿದ್ದಾರೆ. ಶಶಿ ತರೂರ್ ಮತ್ತು ಮನೀಷ್ ತಿವಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಚೌಧರಿಗೆ ಸಹಕಾರ ನೀಡಲಿದ್ದಾರೆ.
ಇದನ್ನೂ ಓದಿ: ನೋಡಿ: ಬಿಜೆಪಿ ನಾಯಕರಿದ್ದ 'ಐತಿಹಾಸಿಕ' ವಿಮಾನ ಚಲಾಯಿಸಿದ ಸಂಸದ ರಾಜೀವ್ ಪ್ರತಾಪ್ ರೂಡಿ!
ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾರಥ್ಯದಲ್ಲಿ ಉಪನಾಯಕನಾಗಿ ಆನಂದ್ ಶರ್ಮಾ, ಮುಖ್ಯ ವಿಪ್ ಆಗಿ ಜೈರಾಮ್ ರಮೇಶ್ ಇದ್ದು, ಇವರ ಜೊತೆಗೆ ಚಿದಂಬರಂ, ಅಂಬಿಕಾ ಸೋನಿ, ದಿಗ್ವಿಜಯ ಸಿಂಗ್ ಸೇರ್ಪಡೆಯಾಗಲಿದ್ದಾರೆ.
ಸೋಮವಾರ ಮಾನ್ಸೂನ್ ಅಧಿವೇಶನ ನಡೆಯುವ ಬೆನ್ನಲ್ಲೇ ಈ ಕಾಂಗ್ರೆಸ್ನ ಸಂಸದೀಯ ಸ್ಥಾನಗಳ ಪುನಾರಚನೆ ನಡೆದಿರುವುದು ಅಚ್ಚರಿ ಮೂಡಿಸಿರುವುದು ಮಾತ್ರವಲ್ಲದೇ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಕಾಂಗ್ರೆಸ್ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ.