ETV Bharat / bharat

ದೆಹಲಿ ಸುಗ್ರೀವಾಜ್ಞೆ ವಿರೋಧಿಸಲು ಕಾಂಗ್ರೆಸ್​ ನಿರ್ಣಯ.. ಸೋನಿಯಾ ಗಾಂಧಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೆಹಲಿ ಸುಗ್ರೀವಾಜ್ಞೆಯನ್ನು ವಿರೋಧಿಸಲು ನಿರ್ಣಯ ಕೈಗೊಳ್ಳಲಾಗಿದೆ.

ದೆಹಲಿ ಸುಗ್ರೀವಾಜ್ಞೆ ವಿರೋಧಿಸಲು ಕಾಂಗ್ರೆಸ್​ ನಿರ್ಣಯ

author img

By

Published : Jul 15, 2023, 10:46 PM IST

ನವದೆಹಲಿ: ದೆಹಲಿ ಮೇಲಿನ ಅಧಿಕಾರ ಚಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಿರೋಧಿಸುವ ಕುರಿತು ಕಾಂಗ್ರೆಸ್​ ಹೊಂದಿದ್ದ ದ್ವಂದ್ವ ನಿಲುವು ಬಗೆಹರಿದಿದೆ. ಜುಲೈ 20 ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಸುಗ್ರೀವಾಜ್ಞೆಯನ್ನು ಪ್ರಶ್ನಿಸುವ ಕುರಿತು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನಿರ್ಣಯ ಕೈಗೊಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಗ್ರೀವಾಜ್ಞೆ ವಿರೋಧಿಸಲು ಕಾಂಗ್ರೆಸ್ ಬೆಂಬಲವನ್ನು ಕೋರಿದ್ದರು. ಆದರೆ, ಪಕ್ಷದಲ್ಲೇ ಇದಕ್ಕೆ ವಿರೋಧವಿದ್ದ ಕಾರಣ ಈವರೆಗೂ ಯಾವುದೇ ಸ್ಪಷ್ಟ ನಿಲುವು ಕೈಗೊಂಡಿರಲಿಲ್ಲ. ಸುಗ್ರೀವಾಜ್ಞೆಗೆ ದೆಹಲಿ ಮತ್ತು ಪಂಜಾಬ್ ನಾಯಕರು ಪರವಾದ ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ಎಎಪಿಯನ್ನು ಬೆಂಬಲಿಸುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಎಐಸಿಸಿ ಹಿರಿಯ ನಾಯಕರೊಬ್ಬರು, ಮುಂಗಾರು ಅಧಿವೇಶನದಲ್ಲಿ ದೆಹಲಿ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸಲಿದೆ. ಚುನಾಯಿತ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಕೇಂದ್ರ ಸರ್ಕಾರದ ದಾಳಿಯ ವಿರುದ್ಧ ಕಾಂಗ್ರೆಸ್ ಹೋರಾಟವನ್ನು ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತನಾಡಿ, ಒಕ್ಕೂಟ ವ್ಯವಸ್ಥೆಯ ಮೇಲಿನ ಇಂತಹ ದಾಳಿಗಳನ್ನು ನಾವು ಈ ಹಿಂದೆ ವಿರೋಧಿಸಿದ್ದೇವೆ. ಸಂಸತ್ತಿನ ಒಳಗೆ ಮತ್ತು ಹೊರಗೂ ವಿರೋಧಿಸಲಾಗುವುದು. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಮೋದಿ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಅವರು ಆಪಾದಿಸಿದರು.

ಸೋನಿಯಾ ಸಭೆಯಲ್ಲಿ ನಿರ್ಧಾರ: ದೆಹಲಿ ಸುಗ್ರೀವಾಜ್ಞೆ ಖಂಡಿಸುವ, ಬೆಂಬಲಿಸುವ ಬಗ್ಗೆ ನಿಲುವನ್ನು ಅಧಿವೇಶನ ಆರಂಭದ ವೇಳೆ ಸ್ಪಷ್ಟಪಡಿಸುವುದಾಗಿ ಹೇಳುತ್ತಿದ್ದ ಕಾಂಗ್ರೆಸ್, ಶನಿವಾರ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ನಿರ್ಣಾಯಕ ಕಾರ್ಯತಂತ್ರ ಸಭೆಯಲ್ಲಿ ಸುಗ್ರೀವಾಜ್ಞೆಯನ್ನು ವಿರೋಧಿಸುವ ಕುರಿತಾಗಿ ನಿರ್ಣಯ ಕೈಗೊಂಡಿದೆ.

ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ವಿಪಕ್ಷಗಳ ಸಭೆ ಬೆಂಗಳೂರಿನಲ್ಲಿ ಜುಲೈ 17-18 ರಂದು ನಡೆಯಲಿದ್ದು, ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಭಾಗವಹಿಸಲಿದ್ದಾರೆ. ಪಾಟ್ನಾದಲ್ಲಿ ನಡೆದಿದ್ದ ಮೊದಲ ಸಭೆಯಲ್ಲಿ ಸುಗ್ರೀವಾಜ್ಞೆ ಬಗ್ಗೆ ನಿಲುವು ಪ್ರಕಟಿಸಲು ಆಪ್​ ಆಗ್ರಹಿಸಿತ್ತು. ಉಭಯ ಪಕ್ಷಗಳ ಮಧ್ಯೆ ಈ ಬಗ್ಗೆ ಸಣ್ಣದಾಗಿ ವಾಗ್ವಾದ ಕೂಡ ನಡೆದಿತ್ತು. ಹೀಗಾಗಿ 2ನೇ ಸಭೆಗೂ ಮುನ್ನವೇ ಕಾಂಗ್ರೆಸ್​ ತನ್ನ ನಿಲುವನ್ನು ಪ್ರಕಟಿಸಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ವಿವಾದಾತ್ಮಕ ಸುಗ್ರೀವಾಜ್ಞೆ ಅಧಿಕಾರಿಗಳನ್ನು ನೇಮಿಸುವ ದೆಹಲಿ ಮುಖ್ಯಮಂತ್ರಿಯ ಅಧಿಕಾರವನ್ನು ಕಸಿದುಕೊಂಡಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸುಗ್ರೀವಾಜ್ಞೆಯನ್ನು ಸೋಲಿಸುವಂತೆ ಒತ್ತಾಯಿಸಿ ಕೇಜ್ರಿವಾಲ್ ವಿವಿಧ ವಿರೋಧ ಪಕ್ಷಗಳಿಂದ ಬೆಂಬಲ ಕೋರಿದ್ದಾರೆ.

ಇದನ್ನೂ ಓದಿ: ಸೆಂಟ್ರಲ್​ ಗವರ್ನಮೆಂಟ್​​​ ಸುಗ್ರೀವಾಜ್ಞೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ: ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.