ಭೋಪಾಲ್ (ಮಧ್ಯಪ್ರದೇಶ): ''ವಿದೇಶಿ ಮಹಿಳೆಯಿಂದ ಹುಟ್ಟಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ'' ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ರಾಹುಲ್ ಗಾಂಧಿ ವಿರುದ್ಧ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಈ ನನ್ನ ಮಾತನ್ನು ಸಂಪೂರ್ಣವಾಗಿ ಸಾಬೀತು ಪಡಿಸಿದ್ದಾರೆ. ರಾಹುಲ್ ಭಾರತದವರಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. ನೀವು ಭಾರತದವರಲ್ಲ ಎಂದು ನಮಗೆ ತಿಳಿದಿದೆ. ವಿದೇಶಿ ಮಹಿಳೆಗೆ ಜನಿಸಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದ ಅವರು, ರಾಹುಲ್ ಗಾಂಧಿ ಅದನ್ನು ಸಾಬೀತುಪಡಿಸಿದ್ದಾರೆ'' ಎಂದು ಪ್ರಜ್ಞಾ ಸಿಂಗ್ ಠಾಕೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಮೂಲಕ ಪ್ರಜ್ಞಾ ಸಿಂಗ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ: ಭಾರತದ ರಾಜಕೀಯ ಪರಿಸ್ಥಿತಿಯ ಕುರಿತು ಯುಕೆಯಲ್ಲಿ ಅವರು ಮಾಡಿದ ಕಮೆಂಟ್‌ಗಳ ಕುರಿತು ಮಾಜಿ ಕಾಂಗ್ರೆಸ್ ಮುಖ್ಯಸ್ಥರ ವಿರುದ್ಧ ವಾಗ್ದಾಳಿ ನಡೆಸಿದ ಠಾಕೂರ್, ''ದೇಶ ಮತ್ತು ಅವರ ಆಯ್ಕೆ ಮಾಡಿದ ಜನರನ್ನು ಅವಮಾನಿಸಿದ್ದಾರೆ'' ಎಂದು ಆರೋಪಿಸಿದರು. ಕಾಂಗ್ರೆಸ್ ಹಲವಾರು ದಶಕಗಳ ಕಾಲ ದುರಾಡಳಿತ ನಡೆಸಿದೆ ಎಂದು ಕಿಡಿಕಾರಿದರು. ವಿದೇಶಗಳಲ್ಲಿ ಮಾತನಾಡಿದ ರಾಹುಲ್ ಗಾಂಧಿಗೆ, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲವಂತೆ'' ಎಂದು ವ್ಯಂಗ್ಯವಾಡಿದರು.
"ಭಾರತದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದರು. ಆದರೆ, ನೀವು ದೀರ್ಘಕಾಲದವರೆಗೆ ಅಧಿಕಾರದಲ್ಲಿದ್ದು ದೇಶವನ್ನು ಕೊಳ್ಳೆ ಹೊಡೆದಿದ್ದಿರು. ಆದರೆ, ಈಗ ವಿದೇಶಗಳಲ್ಲಿ ರಾಹುಲ್ ಗಾಂಧಿಗೆ ದೇಶದ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಸಂಸದೆ, ಅವರಿಗೆ ದೇಶದಲ್ಲಿ ರಾಜಕೀಯ ಮಾಡಲು ಬಿಡಬಾರದು ಮತ್ತು ಅವರನ್ನು ಭಾರತದಿಂದ ಹೊರಹಾಕಬೇಕು. ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ನಾನು ತೀವ್ರ ಖಂಡಿಸುತ್ತೇನೆ.
ಗ್ರ್ಯಾಂಡ್ ಓಲ್ಡ್ ಪಾರ್ಟಿಯ ವಿರುದ್ಧ ಆರೋಪ: ಕಾಂಗ್ರೆಸ್ ಸಂಸತ್ತನ್ನು ಸರಿಯಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಿದರೆ, ಹೆಚ್ಚಿನ ಕೆಲಸಗಳು ನಡೆಯುತ್ತವೆ'' ಆದರೆ ಕಾಂಗ್ರೆಸ್ ಅದ್ಯಾವುದಕ್ಕೂ ಬಿಡುತ್ತಿಲ್ಲ ಎಂದು ಠಾಕೂರ್ ವಾಗ್ದಾಳಿ ನಡೆಸಿದರು. ಉತ್ತಮ ಕೆಲಸ ಮಾಡಲು ಕಾಂಗ್ರೆಸ್ಗೆ ಎಲ್ಲ ಅವಕಾಶಗಳು ಇವೆ. ಆದರೆ ಅದನ್ನು ಕಾಂಗ್ರೆಸ್ ಮಾಡುತ್ತಿಲ್ಲ ಎಂದರು.
ದೇಶವನ್ನು ಅವಮಾನಿಸುತ್ತಿದ್ದೀರಿ ಎಂದು ಗರಂ: "ರಾಹುಲ್ ಗಾಂಧಿ ಅವರು ಅಸ್ತಿತ್ವ ಕಳೆದುಕೊಂಡಿದ್ದಾರೆ. ಅವರೀಗ ಅಳಿವಿನ ಅಂಚಿನಲ್ಲಿದ್ದಾರೆ. ಮಾತ್ರವಲ್ಲದೇ, ಅವರು ತಮ್ಮ ಬುದ್ಧಿಯನ್ನು ಕಳೆದುಕೊಂಡಿದ್ದಾರೆ. ನಿಮ್ಮನ್ನು ಆಯ್ಕೆ ಮಾಡಿದ ಜನರನ್ನು ನೀವು ಅವಮಾನಿಸುತ್ತಿದ್ದೀರಿ ಮತ್ತು ದೇಶವನ್ನೂ ಅವಮಾನಿಸುತ್ತಿದ್ದೀರಿ" ಎಂದು ಪ್ರಗ್ಯಾ ಸಿಂಗ್ ಠಾಕೂರ್ ಹರಿಹಾಯ್ದರು.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ 600 ಕೋಟಿ ಅಕ್ರಮ ಪತ್ತೆ ಹಚ್ಚಿದ ಇಡಿ : ರೈಲ್ವೇ ನಿಲ್ದಾಣದಲ್ಲಿ 5 ಕೋಟಿ ಮೌಲ್ಯದ ಚಿನ್ನ ಪತ್ತೆ