ETV Bharat / bharat

ವೃತ್ತಿಯಲ್ಲಿ ಮುಂದುವರಿಯಲು ಸೋಲಿ ಸೊರಾಬ್ಜಿ ನನಗೆ ಸ್ಫೂರ್ತಿ: ಸಿಜೆಐ ರಮಣ - Supreme Court Chief Justice

ಸೋಲಿ ಸೊರಬ್ಜಿ ಅವರ ನೆನಪಿಗಾಗಿ ಆಯೋಜಿಸಲಾದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು, 'ಮಾನವ ಹಕ್ಕುಗಳ ಚಾಂಪಿಯನ್' ಎಂದು ಸೊರಾಬ್ಜಿಯವರನ್ನು ಕೊಂಡಾಡಿದ್ದಾರೆ.

CJI Ramana
ಸಿಜೆಐ ರಮಣ
author img

By

Published : May 31, 2021, 1:13 PM IST

ನವದೆಹಲಿ: ನ್ಯಾಯಾಂಗ ವೃತ್ತಿಯಲ್ಲಿ ಮುಂದುವರಿಯಲು ನನಗೆ ಪ್ರೇರೇಪಿಸಿದ ಅನೇಕ ಜನರಲ್ಲಿ ಪ್ರಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ಕೂಡ ಒಬ್ಬರೂ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಹೇಳಿದ್ದಾರೆ.

ಕಳೆದ ಏಪ್ರಿಲ್​ 30 ರಂದು ಭಾರತದ ಮಾಜಿ ಅಟಾರ್ನಿ ಜನರಲ್ ಹಾಗು ಹಿರಿಯ ಕಾನೂನು ತಜ್ಞ ಸೋಲಿ ಜೆ. ಸೊರಾಬ್ಜಿ (91) ಅವರು ಕೊರೊನಾ ಸೋಂಕಿಗೆ ಒಳಗಾಗಿ ನಿಧನರಾದರು. ಸೊರಾಬ್ಜಿ ಸುಮಾರು ಏಳು ದಶಕಗಳ ಕಾಲ ಕಾನೂನು ವೃತ್ತಿಯಲ್ಲಿದ್ದು, ಎರಡು ಬಾರಿ ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಭಾರತದ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಪ್ರಶಸ್ತಿಯನ್ನೂ ನೀಡಿ ಇವರಿಗೆ ಗೌರವಿಸಲಾಗಿತ್ತು.

ಇದನ್ನೂ ಓದಿ: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ವಿಧಿವಶ

ಸೊರಾಬ್ಜಿ ಅವರು ಸಾಯುವ ಕೆಲವೇ ದಿನಗಳ ಮುನ್ನ ಸುಪ್ರೀಂಕೋರ್ಟ್​ನ ನೂತನ ಸಿಜೆಐ ಆಗಿ ಎನ್‌.ವಿ. ರಮಣ ಅವರು ಪ್ರಮಾಣವಚನ ಸ್ವೀಕರಿದ್ದರು. ಸೋಲಿ ಸೊರಾಬ್ಜಿ ಅವರ ನೆನಪಿಗಾಗಿ ಆಯೋಜಿಸಲಾದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಮಣ, ಸೊರಬ್ಜಿ ಅವರೊಂದಿಗಿನ ಭೇಟಿ, ಒಡನಾಟದ ಕುರಿತ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Soli Sorabjee
ಸೋಲಿ ಜೆ. ಸೊರಾಬ್ಜಿ

1988ರಲ್ಲಿ ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಸಂಬಂಧದ ಪ್ರಕರಣದ ಬಗ್ಗೆ ಚರ್ಚಿಸಲು ಮೊದಲ ಬಾರಿ ಸೊರಬ್ಜಿಯವರನ್ನು ನಾನು ಭೇಟಿಯಾಗಿದ್ದೆ. ಅಲ್ಲಿಂದ ಅವರೊಂದಿಗೆ ಒಡನಾಟ ಆರಂಭವಾಯಿತು. ಈ ವೃತ್ತಿಯಲ್ಲಿ ಮುಂದುವರಿಯಲು ನನಗೆ ಪ್ರೇರಣೆ ನೀಡಿದವರಲ್ಲಿ ಅವರೂ ಒಬ್ಬರು. ಕಾನೂನು ವೃತ್ತಿಯಲ್ಲಿರುವ ವ್ಯಕ್ತಿಗಳಲ್ಲಿ ಶ್ರೇಷ್ಠ ಮನಸ್ಸುಳ್ಳ ಇವರೊಬ್ಬ 'ಮಾನವ ಹಕ್ಕುಗಳ ಚಾಂಪಿಯನ್' ಎಂದು ಸಿಜೆಐ ಕೊಂಡಾಡಿದ್ದಾರೆ.

ಇದನ್ನೂ ಓದಿ: ಅಪನಂಬಿಕೆಯ ಕಾಲದಲ್ಲಿ ಸುಪ್ರೀಂಕೋರ್ಟ್​ನ​ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ರೈತನ ಮಗ ರಮಣ..

ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಸೊರಾಬ್ಜಿ ಅವರು ವಾಕ್ಚಾತುರ್ಯ ಮತ್ತು ಅಭಿವ್ಯಕ್ತಿಗಳ ಕೋಟೆಯ ಅತ್ಯುತ್ತಮ ರಕ್ಷಕರಾಗಿದ್ದರು. ಕವನ ಮತ್ತು ಸಾಹಿತ್ಯದ ಬಗ್ಗೆ ಅವರ ಉತ್ಸಾಹ, ಜೀವನದ ಬಗ್ಗೆ ಪ್ರೀತಿ ಹೊಂದಿದ್ದ ಸೊರಾಬ್ಜಿ ಅವರನ್ನು 'ಉತ್ತಮ ಪ್ಯಾಕೇಜ್' (great package) ಎಂದು ಬಣ್ಣಿಸಿದ್ದರೆ, ಸೊರಾಬ್ಜಿಯ ಅಂತ್ಯಕ್ಕೆ ವೈರಸ್ ಕಾರಣವಾಗಿದ್ದು ವಿಪರ್ಯಾಸ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.