ETV Bharat / bharat

ರೈತರ ದೆಹಲಿ ಚಲೋಗೆ ನನ್ನ ಸಂಪೂರ್ಣ ಬೆಂಬಲ ಇದೆ; ಅಣ್ಣಾ ಹಜಾರೆ ಘೋಷಣೆ - ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸರ್ಕಾರವು ರೈತರನ್ನು ನಡೆಸುವ ರೀತಿ ಮಾತ್ರ ಸೂಕ್ತವಾಗಿಲ್ಲ. ಚುನಾವಣೆ ಬಂದಾಗ ರಾಜಕಾರಣಿಗಳು ರೈತರ ಬಳಿಗೆ ಹೋಗುತ್ತಾರೆ. ಕೆಲವೊಂದು ಸಂದರ್ಭ ಮನೆಗೇ ಹೋಗಿ ಮತ ಕೇಳುತ್ತಾರೆ. ಆದ್ರೆ ಅವರ ಬೇಡಿಕೆಗಳನ್ನು ಕೇಳಲು ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Anna Hazare
ಅಣ್ಣಾ ಹಜಾರೆ
author img

By

Published : Dec 23, 2020, 9:37 PM IST

ಅಹ್ಮದ್‌ನಗರ(ಮಹಾರಾಷ್ಟ್ರ): ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್, ಹರಿಯಾಣ ಸೇರಿದಂತೆ ದೇಶಾದ್ಯಂತ ರೈತರು ಇನ್ನೂ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಸರ್ಕಾರ ಮೌನ ತಾಳಿರುವುದರ ಬಗ್ಗೆ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೇಂದ್ರವು ರೈತರ ಪ್ರತಿಭಟನೆ ನಿರ್ಲಕ್ಷಿಸುತ್ತಿದೆ. ಚುನಾವಣೆಯ ಸಮಯದಲ್ಲಿ ನೀವು ಮತಗಳನ್ನು ಕೇಳಲು ರೈತರ ಬಳಿಗೆ ಹೋಗಲು ಸಾಧ್ಯವಾದರೆ, ರೈತರ ಆಂದೋಲನ ನಡೆಯುತ್ತಿರುವಾಗ ನೀವು ಯಾಕೆ ಅವರೊಂದಿಗೆ ಹೋಗಿ ಚರ್ಚಿಸಬಾರದು ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸರ್ಕಾರವು ರೈತರನ್ನು ನಡೆಸುವ ರೀತಿ ಮಾತ್ರ ಸೂಕ್ತವಾಗಿಲ್ಲ. ಚುನಾವಣೆ ಬಂದಾಗ ರಾಜಕಾರಣಿಗಳು ರೈತರ ಬಳಿಗೆ ಹೋಗುತ್ತಾರೆ. ಕೆಲವೊಂದು ಸಂದರ್ಭ ಮನೆಗೇ ಹೋಗಿ ಮತ ಕೇಳುತ್ತಾರೆ. ಆದ್ರೆ ಅವರ ಬೇಡಿಕೆಗಳನ್ನು ಕೇಳಲು ಯಾಕೆ ಹಿಂದೇಟು ಹಾಕುತ್ತಿದೆ. ಸರ್ಕಾರ ಈ ಕುರಿತು ಅವರೊಂದಿಗೆ ಏಕೆ ಚರ್ಚಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 2020ರಲ್ಲಿ ಭಾರತೀಯ ಬಾಹ್ಯಾಕಾಶ ಕ್ಷೇತ್ರ ಹೇಗಿತ್ತು?: 2021ರ ಯೋಜನೆಗಳೇನು..?

ಇನ್ನು ಘಟನೆಯಲ್ಲಿ ಓರ್ವ ರೈತ ಕೂಡ ಸಾವನ್ನಪ್ಪಿದ್ದಾನೆ. ಇಷ್ಟಿದ್ದರೂ ರೈತರು ಇನ್ನೂ ಸಂಯಮದಿಂದ ಆಂದೋಲನ ನಡೆಸುತ್ತಿದ್ದಾರೆ. ಆದ್ರೂ ಸರ್ಕಾರ ಅವರ ಬೇಡಿಕೆಗಳಿಗೆ ಯಾಕೆ ಇನ್ನೂ ಕಿವಿಗೊಡುತ್ತಿಲ್ಲ, ಎಂದು ಕೇಂದ್ರ ಸರ್ಕಾರದ ಪಾತ್ರವನ್ನು ಅವರು ಟೀಕಿಸಿದರು. ಇದರಿಂದಾಗಿ ಹಿಂಸಾಚಾರ ಭುಗಿಲೆದ್ದರೆ ಯಾರು ಹೊಣೆಗಾರರಾಗುತ್ತಾರೆ ಎಂದು ಕೇಂದ್ರಕ್ಕೆ ಖಾರವಾಗಿಯೇ ಕೇಳಿದ್ದಾರೆ.

ಪಂಜಾಬ್ ಮತ್ತು ಹರಿಯಾಣದ ರೈತರು ಕೃಷಿ ಕಾನೂನುಗಳ ವಿರುದ್ಧದ 'ದೆಹಲಿ ಚಲೋ' ಆಂದೋಲನ ಮಾಡುತ್ತಿದ್ದಾರೆ. ನಾನು ಈ ಆಂದೋಲನವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಎಂದು ಅವರು ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.