ನ್ಯೂಯಾರ್ಕ್(ಅಮೆರಿಕ): ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸುದ್ದಿಗಳನ್ನು ಹಂಚಿಕೊಳ್ಳುವ ಜನರು ಸಾಮಾನ್ಯವಾಗಿ ನಿಖರತೆ ಬಗ್ಗೆ ಗ್ರಹಿಸಲು ಒಲವು ತೋರುವುದು ತೀರಾ ಕಡಿಮೆ ಎಂದು ಎಂದು ಅಧ್ಯಯನವೊಂದು ತಿಳಿಸಿದೆ.
ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧಕರು, ಸುದ್ದಿ ಹಂಚಿಕೊಳ್ಳುವ ಮತ್ತು ಅದು ನಿಜವೇ ಎಂದು ಯೋಚಿಸುವ ಕುರಿತಂತೆ ಕೆಲವು ಅಂಶಗಳನ್ನು ಆಧರಿಸಿ ಪ್ರಯೋಗವನ್ನು ನಡೆಸಲಾಗಿದೆ. ಸಾಮಾಜಿಕ ಜಾಲಾತಾಣದಲ್ಲಿ ಸುದ್ದಿಗಳನ್ನು ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಪರಿಗಣಿಸದೇ ಇರುವ ಕಾರಣ ಜನರು, ಸತ್ಯವನ್ನು ಹೇಳುವ ಸಾಮರ್ಥ್ಯವನ್ನು ತೀರಾ ಕಡಿಮೆ ಮಾಡುತ್ತದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸಿವೆ.
ಸತ್ಯವನ್ನು ಗ್ರಹಿಸುವಲ್ಲಿ ಕಡಿಮೆ ಒಲವು: ವಿವಿಧ ಸುದ್ದಿ, ಮುಖ್ಯಾಂಶಗಳು ನಿಖರವಾಗಿವೆಯೇ ಎಂದು ನಿರ್ಣಯಿಸಲು 3,000ಕ್ಕೂ ಹೆಚ್ಚು ಜನರನ್ನು ಆಧಾರವಾಗಿಟ್ಟುಕೊಂಡು ಅಧ್ಯಯನವನ್ನು ನಡೆಸಲಾಗಿದೆ. ಆದರೆ, ಈ ಅಧ್ಯಯನದಲ್ಲಿ ಭಾಗವಹಿಸುವವರನ್ನು ಮೊದಲು, ಅವರು ಯಾವ ವಿಷಯವನ್ನು ಹಂಚಿಕೊಳ್ಳುತ್ತಾರೆ ಎಂದು ಕೇಳಿದರೆ, ಬಹುತೇಕರು ಅಂದ್ರೆ, ಶೇ.35 ರಷ್ಟು ಪ್ರಮಾಣದಷ್ಟು ಜನ ಸುಳ್ಳು ಸುದ್ದಿಗಳಿಂದಾಗಿ ಸತ್ಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭಾಗವಹಿಸಿದವರನ್ನು ಒಟ್ಟಾರೆ ಮೌಲ್ಯಮಾಪನ ಮಾಡಿದ ನಂತರ, ಸಾಮಾಜಿಕ ಜಾಲತಾಣಗಳ ಮಾಹಿತಿ ಹಂಚಿಕೊಳ್ಳುವ ಬಗ್ಗೆ ಕೇಳಿದಾಗ, ಸತ್ಯವನ್ನು ಗ್ರಹಿಸುವಲ್ಲಿ ಶೇ.18ರಷ್ಟು ಕಡಿಮೆ ಒಲವು ತೋರುತ್ತಾರೆ.
ಇದನ್ನೂ ಓದಿ: ಟ್ವಿಟರ್ ಡೌನ್: ಫೀಡ್ ರಿಫ್ರೆಶ್ ಆಗದೆ ಬಳಕೆದಾರರಿಗೆ ಸಮಸ್ಯೆ
ಪ್ರೊಫೆಸರ್ ಡೇವಿಡ್ ರಾಂಡ್ ಮಾಹಿತಿ: "ನೀವು ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೀರಾ ಎಂದು ಜನರನ್ನು ಕೇಳುವುದರಿಂದ ಅವರು ನಂಬದೇ ಇರುವ ಮುಖ್ಯಾಂಶಗಳನ್ನು ಹೆಚ್ಚು ನಂಬುವ ಸಾಧ್ಯತೆಯಿದೆ. ಅವರು ನಿಜ ಇರುವ ಮುಖ್ಯಾಂಶಗಳನ್ನು ನಂಬುವ ಸಾಧ್ಯತೆಯೂ ಕಡಿಮೆ ಇದೆ" ಎಂದು ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್ ಡೇವಿಡ್ ರಾಂಡ್ ತಿಳಿಸಿದರು.
ಸುದ್ದಿ ವಿಷಯವನ್ನು ಹಂಚಿಕೊಳ್ಳಲು ಜನರ ಇಚ್ಛೆ ಮತ್ತು ಅದನ್ನು ನಿಖರವಾಗಿ ನಿರ್ಣಯಿಸುವ ಅವರ ಸಾಮರ್ಥ್ಯ ಎರಡನ್ನೂ ಪ್ರತ್ಯೇಕವಾಗಿ ಬಲಪಡಿಸಬಹುದು. ಅಧ್ಯಯನವು ಎರಡು ವಿಷಯಗಳನ್ನು ಒಂದೇ ಸಮಯದಲ್ಲಿ ಪರಿಗಣಿಸಿದಾಗ ಪರಸ್ಪರ ಧನಾತ್ಮಕವಾಗಿ ಬಲಪಡಿಸುವುದಿಲ್ಲ ಎಂದು ಅಧ್ಯಯನವು ಸೂಚಿಸುತ್ತದೆ.
ಇದನ್ನೂ ಓದಿ: 5G ನಂತರ ಭಾರತದಲ್ಲಿ ಡೌನ್ಲೋಡ್ ಸ್ಪೀಡ್ ಸರಾಸರಿ ಶೇ 115 ರಷ್ಟು ಹೆಚ್ಚಳ!
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮಾಹಿತಿ ಬಗ್ಗೆ ನಿಖರತೆ ಕಡಿಮೆ: "ನೀವು ನಿಖರತೆಯ ಬಗ್ಗೆ ಜನರನ್ನು ಕೇಳಿದಾಗ, ನೀವು ಅವರನ್ನು ಪ್ರೇರೇಪಿಸುತ್ತೀರಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಬಗ್ಗೆ ನೀವು ಪ್ರಶ್ನಿಸಿದರೆ, ನೀವು ಅವರನ್ನು ಪ್ರೇರೇಪಿಸಿದಂತೆ ಆಗುತ್ತದೆ" ಎಂದು ಎಂಐಟಿ ಮೀಡಿಯಾ ಲ್ಯಾಬ್‌ನಲ್ಲಿನ ಹ್ಯೂಮನ್ ಡೈನಾಮಿಕ್ಸ್ ಗುಂಪಿನಲ್ಲಿ ಡಾಕ್ಟರೇಟ್ ವಿದ್ಯಾರ್ಥಿ ಝಿವ್ ಎಪ್ಸ್ಟೀನ್ ಹೇಳಿದರು. "ನೀವು ಅದೇ ಸಮಯದಲ್ಲಿ ಹಂಚಿಕೆ ಮತ್ತು ನಿಖರತೆಯ ಬಗ್ಗೆ ಕೇಳಿದರೆ, ಸತ್ಯವನ್ನು ಗ್ರಹಿಸುವ ವಿಚಾರದಲ್ಲಿ ಜನರು ಸ್ವಲ್ಪ ದುರ್ಬಲರಾಗಿದ್ದಾರೆ ಎನ್ನುವುದನ್ನು ಕಾಣಬಹುದು" ಎಂದು ಅಧ್ಯಯನದ ವರದಿ ತಿಳಿಸಿದೆ.