ETV Bharat / bharat

ಕೋತಿಯ ಬಾಯಿಗೆ ಗಾಳಿ ಊದಿ ಪ್ರಾಣ ಉಳಿಸಿದ ಪ್ರಾಣಿ ಪ್ರೇಮಿ.. ವಿಡಿಯೋ ವೈರಲ್‌

Man Saves Monkey : ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೋತಿಯ ಬಾಯಿಗೆ ವ್ಯಕ್ತಿಯೊಬ್ಬರು ತನ್ನ ಬಾಯಿಯಿಂದ ಗಾಳಿ ಊದಿ ಜೀವ ಉಳಿಸುವ ಮೂಲಕ ಹೃದಯ ವೈಶಾಲತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ..

Social activist who saved a life-threatening monkey from not being able to breathe
ಕೋತಿಯ ಬಾಯಿಂದ ಗಾಳಿ ಊದಿ ಪ್ರಾಣ ಉಳಿಸಿದ ಪ್ರಾಣಿ ಪ್ರೇಮಿ - ವಿಡಿಯೋ ವೈರಲ್‌
author img

By

Published : Dec 14, 2021, 3:36 PM IST

Updated : Dec 14, 2021, 4:09 PM IST

ಪೆರಂಬಲೂರು(ತಮಿಳುನಾಡು) : ನಾಯಿಗಳ ಕಡಿತದಿಂದ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಕೋತಿಯ ಪ್ರಾಣ ಉಳಿಸಿರುವ ಘಟನೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದಿದೆ.

ಕೋತಿಯ ಬಾಯಿಗೆ ಗಾಳಿ ಊದಿ ಪ್ರಾಣ ಉಳಿಸಿದ ಪ್ರಾಣಿ ಪ್ರೇಮಿ.. ವಿಡಿಯೋ ವೈರಲ್‌

ಪ್ರಭು ಎಂಬ ಪ್ರಾಣಿ ಪ್ರೇಮಿಯ ನಿವಾಸದ ಬಳಿ ಬೀದಿ ನಾಯಿಗಳು ಕೋತಿಯನ್ನು ಅಟ್ಟಿಸಿಕೊಂಡು ಹೋಗಿ ತೀವ್ರಗಾಯಗೊಳಿಸಿದ್ದವು. ನಾಯಿಗಳಿಂದ ತಪ್ಪಿಸಿಕೊಂಡು ಮರ ಹತ್ತಿ ಕುಳಿತ ಕೋತಿ ಜೀವನ್ಮರಣ ಸ್ಥಿತಿಯಲ್ಲಿತ್ತು.

ಇದನ್ನು ಗಮನಿಸಿದ ಪ್ರಭು ಅವರು ಕೋತಿಯನ್ನು ಮರದಿಂದ ಕೆಳಗಿಳಿಸಿ ತನ್ನ ಬಾಯಿಯಿಂದ ಕೋತಿಯ ಬಾಯಿಗೆ ಗಾಳಿ ಊದಿದ್ದಾರೆ. ನಂತರ ತಮ್ಮ ಸ್ನೇಹಿತರ ಸಹಾಯದಿಂದ ಸಮೀಪದ ಪಶುವೈದ್ಯಕೀಯ ಆಸ್ಪತ್ರೆಗೆ ತಂದು ಕೋತಿಗೆ ಸೂಕ್ತ ಚಿಕಿತ್ಸೆ ನೀಡಿ ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ.

ಪ್ರಭು ಅವರು ಮಂಗನ ಜೀವ ಉಳಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Last Updated : Dec 14, 2021, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.